ಮಂಗಳೂರು: ಮಂಗಳೂರಿನ ರಥಬೀದಿ ರಸ್ತೆಯನ್ನು ಕೋಟಿಗಟ್ಟಲೆ ವೆಚ್ಹದಲ್ಲಿ ಅಗಲೀಕರಣ ಗೊಳಿಸಿ 2 ವರ್ಷ ಆಗಿದ್ದು ಈ ರಸ್ತೆ ಇನ್ನೂ ಚೆನ್ನಾಗಿಯೇ ಇದೆ. ಆದರೆ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಲಾಭ ಪಡಕೊಳ್ಳುವ ದುರುದ್ಹೇಶದಿಂದ ಈಗ 16 ಲಕ್ಷ ವೆಚ್ಹದಲ್ಲಿ ಪುನಃ ಡಾಮರೀಕರಣ ಮಾಡಲು ಹೊರಟಿರುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅನಾವಶ್ಯಕ ದುಡ್ಡು ಪೋಲು ಮಾಡಲು ಮುಂದಾಗಿದ್ದಾರೆ, ದಯವಿಟ್ಟು ಪಾಲಿಕೆಯ ಅಧಿಕಾರಿಗಳಲ್ಲಿ ವಿನಂತಿ, ನಗರದ ಹಲವಾರು ರಸ್ತೆಗಳು ಡಾಮರೀಕರಣವಾಗದೆ ಹಲವು ದಶಕ ಗಳಾಗಿವೆ ಅವುಗಳನ್ನು ಮೊದಲು ಸರಿಪಡಿಸಿ ಅನಾವಶ್ಯಕ ಸಾರ್ವಜನಿಕರ ಹಣ ಪೋಲು ಮಾಡಬೇಡಿ ! ಯಾರೋ ಬುದ್ದಿ ಇಲ್ಲದ ಕೆಲ ವ್ಯಕ್ತಿಗಳು ತಮ್ಮ ರಾಜಕೀಯ ದುರುದ್ಧೇಶದಿಂದ ಇದಕ್ಕೆ ಮುಂದಾಗಿಧಾರೆ. ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English