ಉಳ್ಳಾಲ: ಅಪರಿಚಿತ ಕಿಡಿಗೇಡಿಗಳ ತಂಡವೊಂದು ಉಳ್ಳಾಲ ಪರಿಸರದಲ್ಲಿ ದಾಂಧಲೆ ಎಬ್ಬಿಸಿ ಹಲವು ಮನೆಗಳು, ವಾಹನಗಳು ಮತ್ತು ಬೋಟ್ ಗಳಿಗೆ ಹಾನಿಗೊಂಡಿರುವ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.
ದಾಂಧಲೆಯಿಂದಾಗಿ ವಾರಿಜ, ಧರ್ಮಾವತಿ ಮತ್ತು ಶಾಂತವತಿ ಎಂಬವರ ಮೂರು ಮನೆಗಳು ಹಾನಿಗೊಂಡಿದೆ. ಆಕ್ರಮಣಕಾರರು ಕಾರು ಮತ್ತು ಬೈಕ್ ನ್ನೂ ಹಾನಿಗೊಳಿಸಿದ್ದಾರೆ. ಚಾಮುಂಡೇಶ್ವರಿ ಮತ್ತು ಕಾಂತಿ ಎಂಟರ್ ಪ್ರೈಸಸ್ ಗೆ ಸೇರಿದ ಎರಡು ಬೋಟ್ ಗಳನ್ನೂ ಹಾನಿಗೊಳಿಸಿದ್ದಾರೆ.
ಹಾನಿಗೊಳಗಾದ ಮನೆಯವರು ಎಚ್ಚೆತ್ತು ಕೊಂಡಾಗ ಕಿಡಿಗೇಡಿಗಳ ತಂಡ ಪರಾರಿಯಾಯಿತು. ಉಳ್ಳಾಲ ಪರಿಸರದವರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನೆ ನಡೆಸಿದರು.
ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳ್ಳಾಲದಲ್ಲಿ ಯಾವುದೇ ಅಹಿತಕರ ಘಟನೆ ಮರುಕಳಿಸದಂತೆ ಪೋಲಿಸರು ಭಿಗಿ ಭದ್ರತೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English