- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರೇಮಾ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ರಾಮದಾಸ್

Ramadoss [1]ಬೆಂಗಳೂರು: ಮಾಜಿ ಸಚಿವ ರಾಮದಾಸ್ ಅವರ ಪ್ರೇಮ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅವರು ಪ್ರೇಮಕುಮಾರಿ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ.

ಮಾರ್ಚ್ 10, 2013ರಂದು ರಾಮದಾಸ್ ಅವರು ಸಚಿವರಾಗಿದ್ದ ವೇಳೆ ತಮ್ಮ ಸರ್ಕಾರಿ ಕಾರನ್ನು ಬಿಟ್ಟು, ಖಾಸಗಿ ಕಾರಿನಲ್ಲಿ ಪ್ರೇಮಕುಮಾರಿ ಅವರ ನಿವಾಸಕ್ಕೆ ತೆರಳಿ ಸುಮಾರು 1 ಗಂಟೆಯವರೆಗೆ ಮಾತುಕತೆ ನಡೆಸಿದ್ದಾರೆ.

ಪ್ರೇಮಕುಮಾರಿ ಅವರ ಮನೆಯಲ್ಲಿ ನಡೆದ ಸಂಪೂರ್ಣ ‘ರಾಮಾ’ಯಣದ ವಿಡಿಯೋ ಮಾಧ್ಯಮಕ್ಕೆ ದೊರೆತ್ತಿದ್ದು, ವಿಡಿಯೋದಲ್ಲಿ ರಾಮದಾಸ್, ಪ್ರೇಮಕುಮಾರಿ ಹಾಗೂ ಪ್ರೇಮಕುಮಾರಿ ಅವರ ತಾಯಿ ಮಧ್ಯೆ ವಾಗ್ವಾದ ನಡೆಯುತ್ತಿರುವ ದೃಶ್ಯಗಳಿವೆ.

ನನ್ನ ತಾಯಿ ಮೇಲಾಣೆ, ಚಾಮುಂಡೇಶ್ವರಿ ಮೇಲಾಣೆ. ನಿನಗೇನು ನಾನು ಮೋಸ ಮಾಡಲ್ಲ, ನನ್ನನ್ನು ಬಿಟ್ಬಿಡಿ. ಈ ಯಾವುದೇ ವಿಚಾರವನ್ನು ದಯವಿಟ್ಟು ಬಹಿರಂಗಪಡಿಸಬೇಡಿ ಎಂದು ರಾಮದಾಸ್ ಅಂಗಲಾಚುತ್ತಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಪ್ರೇಮಕುಮಾರಿ, ತನ್ನನ್ನು ಮದುವೆಯಾಗು ಎಂದು ಪಟ್ಟು ಹಿಡಿಯುತ್ತಾಳೆ. ಒಂದು ಹಂತದಲ್ಲಿ ರಾಮದಾಸ್ ಅವರು ಬಿಕ್ಕಿ ಬಿಕ್ಕಿ ಅಳುತ್ತಾರೆ.

ಈ ವಿಡಿಯೋ ದೃಶ್ಯಗಳು ಕನ್ನಡದ ಬಹುತೇಕ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿವೆ.