ವಿಜಕುಮಾರ ಶೆಟ್ಟರು ಮೊದಲು ರಾಜೀನಾಮೆ ನೀಡಲಿ : ಮಾಜಿ ಮೇಯರ್ ಅಶ್ರಫ್

1:00 PM, Saturday, February 15th, 2014
Share
1 Star2 Stars3 Stars4 Stars5 Stars
(5 rating, 5 votes)
Loading...
Ashraf

ಮಂಗಳೂರು : ಎತ್ತಿನ ಹೊಳೆ ಯೋಜನೆ ಎಂಬ ಬೇರೆಯದೇ ಹೆಸರಿನಲ್ಲಿ ನೇತ್ರವತಿ ತಿರುವು ಯೋಜನೆಯನ್ನು ಜಾರಿಗೆ ತರಲು ಹೋರಟಿರುವುದು ದ.ಕ. ಜಿಲ್ಲೆಯ ಜನತೆಯ ಮೇಲೆ ಎಳೆಯುತ್ತಿರುವ ಬರೆಯಾಗಿದೆ. ಭವಿಷ್ಯದ ಸಂಕಷ್ಟವನ್ನು ಅರಿತು ಜಿಲ್ಲೆಯ ಜನತೆ ಎತ್ತಿನ ಹೊಳೆ ತಿರುವು ಯೋಜನೆ ವಿರುದ್ಧ ಹೋರಾಟಕ್ಕಿಳಿಯಬೇಕಿದೆ. ಈ ಯೋಜನೆ ವಿರೋಧಿಸಿ ನಡೆಯುವ ಹೋರಾಟದಲ್ಲಿ ನಾನು ಸಕ್ರಿಯನಾಗುತ್ತಿದ್ದೇನೆ.

ಮಾಜಿ ಶಾಸಕ ವಿಜಯಕುಮಾರ ಶೆಟ್ಟರು ಎತ್ತಿನಹೊಳೆ ಯೋಜನೆ ತಡೆಯಲಾಗದ ನಮ್ಮ ಜಿಲ್ಲೆಯ ನಾಲ್ವರೂ ಸಚಿವರು ರಾಜೀನಾಮೆ ನೀಡಿ ಹೋರಾಟಕ್ಕಿಳಿಯಬೇಕು ಎಂದು ಮಾಜಿ ಮೇಯರ್ ಅಶ್ರಫ್ ಹೇಳಿದ್ದಾರೆ. ಅದಕ್ಕಿಂತ ಮೊದಲು ವಿಜಯಕುಮಾರ ಶೆಟ್ಟರೆ ಪಕ್ಷದ ಬ್ಲಾಕ್ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ನೀಡಿ ಹೋರಾಟಕ್ಕಿಳಿದರೆ ಸಚಿವರ ರಾಜೀನಾಮೆ ಕೇಳುವುದು ಅಥಗರ್ಭಿತವಾಗಿರುತ್ತದೆ.

ದ.ಕ. ಜಿಲ್ಲೆಯ ಜನತೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪಕ್ಷದಲ್ಲಿದ್ದು ಹೋರಾಡುವುದು ವಿಜಯಕುಮಾರ ಶೆಟ್ಟರಿಗೆ ಅನೇಕ ಅಡ್ಡಿಗಳಾಗುವ ಸಾಧ್ಯತೆ ಇದೆ. ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿತವಾಗುವ ಸಾಧ್ಯತೆಯೂ ಇದೆ. ಆದುದರಿಂದ ವಿಜಯಕುಮಾರ ಶೆಟ್ಟರು ಪಕ್ಷದ ಅಧಿಕಾರ ಹುದ್ದೆ ತ್ಯಜಿಸಿ ಪಕ್ಷಾತೀತ ಹೋರಾಟಕ್ಕಿಳಿಯಲಿ ಅವರಿಗೆ ಮತ್ತು ಅವರ ಹೋರಾಟಕ್ಕೆ ನಾವು ಬೆಂಬಲಕ್ಕಿರುತ್ತೇವೆ. ವಿಜಯಕುಮಾರ ಶೆಟ್ಟರು ಅಧಿಕಾರ ತ್ಯಜಿಸಿ ನೈಜ ಹೋರಾಟ ನಡೆಸಿ ಹೋರಾಟದಲ್ಲಿ ವಜಯಿಯಾದರೆ ಜಿಲ್ಲೆಯ ಜನತೆ ಅವರಿಗೆ ಋಣಿಯಾಗಿರುತ್ತಾರೆ.

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಶಾಸಕರಾದ ವಸಂತ ಬಂಗೇರ, ಜೆ.ಆರ್.ಲೊಬೋ, ಶಕುಂತಳಾ ಶೆಟ್ಟಿ ಸಚಿವ ರಮಾನಾಥ ರೈಯವರ ಬೆಂಬಲ ನೇತ್ರಾವತಿ ಉಳಿಸುವ ಕಡೆಗಿದೆ ಎಂದು ವಿಜಯಕುಮಾರ ಶೆಟ್ಟರು ತಿಳಿಸಿದ್ದಾರೆ. ಬೆಂಬಲ ಇದೆ ಎಂದು ವಿಜಯಕುಮಾರ ಶೆಟ್ಟರ ಬಳಿ ಹೇಳಿದರಾಗಲಿಲ್ಲ. ಜನತೆಗೆ ಮನದಟ್ಟು ಮಾಡಬೇಕಿದೆ. ಜನತೆಗೆ ಮನದಟ್ಟು ಮಾಡುವವರು ಜನತೆಗಾಗುತ್ತಿರುವ ಅನ್ಯಾಯವನ್ನೂ ನೋಡಿ ಅಧಿಕಾರಕ್ಕೆ ಅಂಟಿಕೊಂಡಿರುವುದಿಲ್ಲ. ಅವರೂ ಕೂಡ ಅಧಿಕಾರ ತ್ಯಜಿಸಿ ಹೋರಾಟಕ್ಕಿಳಿದು ತಮ್ಮ ನಿಲುವು ಸ್ಪಷ್ಟ ಪಡಿಸಬೇಕಿದೆ.

ಜನಾರ್ದನ ಪೂಜಾರಿಯವರು ಪತ್ರಿಕಾಗೋಷ್ಠಿಯಲ್ಲಿ ನೇತ್ರಾವತಿ ತಿರುವು ಯೋಜನೆ ವಿರೋಧಿಸುವುದಕ್ಕಿಂತ ನೇರ ಹೋರಾಟಕ್ಕಿಳಿದು ಜನರ ವಿಶ್ವಾಸಲಿ ಎಂದು ಮಾಜಿ ಮೇಯರ್ ಅಶ್ರಫ್ ಹೆಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English