- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದರ್ಶನ್ ಸಂಭಾವನೆ 8 ಕೋಟಿ

Dharshan [1]

ಇತ್ತೀಚೆಗೆ ಡಬ್ಬಿಂಗ್ ವಿವಾದದ ಚರ್ಚೆಯ ಸಂದರ್ಭ ಶತಾಯಗತಾಯ ಡಬ್ಬಿಂಗ್ ತಂದೇ ತೀರ್ತೆವೆ ಅಂತ ವಾದ ಮಾಡಿದ್ದ ನಿರ್ಮಾಪಕರೊಬ್ಬರು ಕನ್ನಡದಲ್ಲಿ ಒಬ್ಬ ದೊಡ್ಡ ಹೀರೋಗೆ ರು.8 ಕೋಟಿ ಸಂಭಾವನೆ ಕೊಡ್ಬೇಕು ಅಂದಿದ್ರು. ಇನ್ನು ಹೀರೋಯಿನ್ ಗೆ ಒಂದು ಕೋಟಿ. ಡೈರೆಕ್ಟರ್ ಗೆ ಒಂದು ಕೋಟಿ.

ಸಿನಿಮಾ ಮಾಡೋಕೆ ಒಂದೈದು ಕೋಟಿ. ಹದಿನೈದು ಇಪ್ಪತ್ತು ಕೋಟಿ ಹಾಕಿ ಸಿನಿಮಾ ಮಾಡೋಕೆ ನಮ್ದೇನು ತೆಲುಗು ಸಿನಿಮಾನಾ, ತಮಿಳು ಸಿನಿಮಾನ ಅಂತ ಗುಟುರು ಹಾಕಿದ್ರು. ಆದರೆ ಕನ್ನಡದಲ್ಲಿ ಯಾವ ಹೀರೋಗೆ ಎಂಟು ಕೋಟಿ ಸಂಭಾವನೆ ಇದೆ ಅಂತ ಲೆಕ್ಕ ಹಾಕಿದ್ರೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮಾತ್ರ

ಚಾಲೆಂಜಿಂಗ್ ಸ್ಟಾರ್ ಸಂಭಾವನೆ ಇಷ್ಟು ಅಂತ ಚಾಲೆಂಜ್ ಮಾಡೋರತ್ರ ಏನಿದೆ ದಾಖಲೆ. ಎಷ್ಟೋ ಪ್ರೊಡ್ಯೂಸರ್ ಗಳು ಸುಮಾರು ಬ್ಯಾಲೆನ್ಸ್ ಉಳಿಸಿಕೊಂಡಿರ್ತಾರೆ ಅಂತ ದೂರ್ತಾರೆ ಹೀರೋಗಳು. ಇಲ್ಲಿ ತಪ್ಪು ಯಾರದು.

ಆದ್ರೂ ಚಾಲೆಂಜಿಂಗ್ ಸ್ಟಾರ್ ಗೆ ಎಂಟು ಕೋಟಿ ಸಂಭಾವನೆ ಅಂದ್ರೆ ನಂಬೋಕಾಗುತ್ತಾ? ಕನ್ನಡದ ಹೀರೋಗಳೂ ಕಾಲಿವುಡ್, ಟಾಲಿವುಡ್ ಹೀರೋಗಳ ರೇಂಜಿಗೆ ಸಂಭಾವನೆ ತಗೋತಾರಾ? ತಗೊಂಡ್ರೆ ನಮ್ಗೂ ಖುಷೀನೇ. ಆದ್ರೆ ಇಲ್ಲಿ ಸತ್ಯ ಹೇಳೋರ್ಯಾರು.

ದೊಡ್ಡ ಹೀರೋಗಳು ಸ್ಯಾಟಲೈಟ್ ರೈಟ್ಸ್ ಕೇಳ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ಸ್ಟಾರ್ ಪುನೀತ್ ಸಿನಿಮಾಗಳಿಗೆ ಈಗಿರೋ ಡಿಮಾಂಡ್ ಗೆ ರು. 4ರಿಂದ ರು.6 ಕೋಟಿ ಟಿವಿ ರೈಟ್ಸ್ ಸಿಗ್ತಿದೆ.

ಈ ಸ್ಟಾರ್ ಗಳನ್ನು ಕೇಳಿದ್ರೆ ತುಟಿ ಪಿಟಕ್ ಅನ್ನಲ್ಲ. ಸೋ ನೀವು ಅಂದುಕೊಂಡಿದ್ದೇ ಸಂಭಾವನೆ. ಈ ವಿಷಯದಲ್ಲಿ ಶಿವಣ್ಣ ಮೆಚ್ಚಬೇಕು ಸಿನಿಮಾ ಕಥೆ, ಸ್ಕ್ರಿಪ್ಟ್ ಇಷ್ಟವಾದ ಕೂಡ್ಲೇ ಕಡಿಮೆ ಸಂಭಾವನೆಗಾದ್ರೂ ಸಿನಿಮಾ ಒಪ್ಪಿಕೊಳ್ಳೋದು ಕಿಂಗ್ ಶಿವಣ್ಣ ಮಾತ್ರ ಅಂತೆ.