ಮಂಗಳೂರು: ನೇತ್ರಾವತಿಯ ಮಡಿಲಿನಲ್ಲಿ ಸಾವಿರಾರು ಜೀವಚರಗಳು ಬದುಕುತ್ತಿದ್ದು ನದಿಯ ನೀರು ದಕ್ಷಿಣ ಕನ್ನಡಕ್ಕೆ ಸಿಗದಿದ್ದಲ್ಲಿ ಅವುಗಳು ಸೇರಿದಂತೆ ನಾವ್ಯಾರೂ ಬದುಕಿ ಉಳಿಯಲು ಸಾಧ್ಯವಿಲ್ಲ ಎಂದು ವಿವೇಕಾನಂದ ಕಾಲೇಜ್ ಉಪನ್ಯಾಸಕ, ಪರಿಸರವಾದಿ ಡಾ.ಶ್ರೀಶಕುಮಾರ್ ಎಂ.ಕೆ. ಆತಂಕ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ಅನುರಾಗ ವಠಾರದಲ್ಲಿ ಕರ್ನಾಟಕ ಸಂಘ ಮತ್ತು ಇತರ ಸಂಘಟನೆಗಳ ಸಹಯೋಗದ ‘ಸಾಹಿತ್ಯ ಕಲಾಕುಶಲೋಪರಿ-11’ ಕಾರ್ಯಕ್ರಮದಲ್ಲಿ ಬುಧವಾರ ‘ನೇತ್ರಾವತಿ ನೀರು ದಕ್ಷಿಣ ಕನ್ನಡಕ್ಕೆ ಸಿಗದಿದ್ದರೆ’ ವಿಚಾರದ ಕುರಿತು ಅವರು ಉಪನ್ಯಾಸ ನೀಡಿದರು. ನೇತ್ರಾವತಿ ತಿರುವು ಯೋಜನೆಗೆಡಿ.ವಿ. ಸದಾನಂದ ಗೌಡ ಅನುಮತಿ ನೀಡಿದ್ದು ಇದಕ್ಕಾಗಿ ರು. 850 ಕೋಟಿ ಅನುದಾನ ಬಿಡುಗಡೆ ಮಾಡಿದರು. ಬಳಿಕ ಅಧಿಕಾರಕ್ಕೆ ಬಂದ ರಮಾನಾಥ ರೈ, ಯು.ಟಿ.ಖಾದರ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರೆಲ್ಲಾ ಅದು ಹಿಂದಿನ ಸರ್ಕಾರ ಮಾಡಿರುವುದು ಎಂದು ಕೈಚೆಲ್ಲಿದ್ದಾರೆ.
ಹಿಂದಿನ ಸರ್ಕಾರ ಮಾಡಿರುವ ಗೋಹತ್ಯೆ ನಿಷೇಧ ಕಾಯಿದೆಯನ್ನು ಸರ್ಕಾರಕ್ಕೆ ಹಿಂದೆಗೆಯಲು ಸಾಧ್ಯವಾಗಿದ್ದರೆ ಎತ್ತಿನ ಹೊಳೆ ಯೋಜನೆ ಯಾಕೆ ಹಿಂದೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಎಚ್. ಸುಂದರ್ ರಾವ್ ಜೋಡುಮಾರ್ಗ ಅಧ್ಯಕ್ಷತೆ ವಹಿಸಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿದರು. ಬಿ. ಐತ್ತಪ್ಪ ನಾಯ್ಕ ನಿರೂಪಿಸಿ, ವಂದಿಸಿದರು.
Click this button or press Ctrl+G to toggle between Kannada and English