ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯ ಪ್ರಕರಣಗಳು ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಜಾಗೃತರಾಗಿರುವಂತೆ ಮಂಗಳೂರು ತಹಶೀಲ್ದಾರ್ ಮೋಹನ್ ರಾವ್ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಬದ್ರಿಯಾ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದ ಬದ್ರಿಯಾ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಮಲು ಪದಾರ್ಥಗಳ ವ್ಯಸನದಿಂದ ಸಮಾಜದ ಮೇಲೆ ತೀವ್ರ ದುಷ್ಪರಿಣಾಮಗಳು ಬೀರುತ್ತಿರುವುದು ಒಂದೆಡೆಯಾದರೆ, ಇದರಿಂದ ಆಥರ್ಿಕ ಲಾಭ ಮಾಡಿಕೊಳ್ಳುತ್ತಿರುವವರು ಹೆಚ್ಚಾಗಿದ್ದಾರೆ. ಅದರಲ್ಲೂ ವಿದ್ಯಾರ್ಥಿ ಯುವಜನರನ್ನು ಇದರ ಬಲೆಗೆ ಬೀಳಿಸಿ, ಅವರನ್ನು ಆರಂಭದಲ್ಲೇ ಆರೋಗ್ಯವಂತ ಸಮಾಜದಿಂದ ಹೊರಗಿರಿಸುವ ಪ್ರಯತ್ನ ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು.
ಮದ್ಯ, ಮಾದಕ ವಸ್ತು ಸೇರಿದಂತೆ ವಿವಿಧ ಚಟಗಳಿಗೆ ಒಳಗಾದವರು ಸಮಾಜದಲ್ಲೂ ಅಪಮಾನಿತರಾಗಿ, ಅವರ ಕುಟುಂಬದವರೂ ಇದರ ಪರಿಣಾಮ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹದಿಹರೆಯದಲ್ಲೇ ಈ ಬಗ್ಗೆ ಜಾಗೃತಿ ಮೂಡಿಸಿದರೆ, ಭವಿಷ್ಯದಲ್ಲಿ ಅವರು ಉತ್ತಮ ನಾಗರೀಕರಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಹೇಳಿದ ಮೋಹನ್ ರಾವ್, ಯಾವುದೇ ಕಾರಣಕ್ಕೂ ಚಟಗಳಿಗೆ ದಾಸರಾಗದಂತೆ ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಉಡುಪಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸತ್ಯನಾರಾಯಣ, ಧೂಮಪಾನ, ಮದ್ಯಪಾನ ಮತ್ತು ಅಮಲು ಪದಾರ್ಥಗಳು ಆರೋಗ್ಯವಂತ ಸಮಾಜ ನಿಮರ್ಾಣದ ದೊಡ್ಡ ಶತ್ರುವಾಗಿದೆ. ಯಾವುದೇ ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿದರೆ, ಮನುಷ್ಯನ ಜೀವನ ಸಂತೋಷಮಯವಾಗಿ, ಕೊನೆಯವರಗೂ ನೆಮ್ಮದಿಯಿಂದ ಇರಬಹುದು. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಉತ್ತಮ ಸಂಸ್ಕೃತಿಯಿಂದ ಬೆಳೆಸಿದರೆ, ಯಾವುದೇ ಚಟಗಳಿಗೆ ಅವರು ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಮಾದಕ ವಸ್ತು ಮಾರಾಟದ ವಿರುದ್ಧ ಅನೇಕ ಕಾಯಿದೆಗಳು ಜಾರಿಗೆ ಬಂದಿವೆ. ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಧೂಮಪಾನ ಮಾರಾಟ ನಿಷೇಧಿಸಲಾಗಿದೆ. ಕೆಟ್ಟ ಚಟಗಳಿಗೆ ಬಲಿಯಾದರೆ ಆ ವ್ಯಕ್ತಿ ಮತ್ತು ಆತನ ಕುಟುಂಬ ಆರ್ಥಿಕ, ಮಾನಸಿಕ ಮತ್ತು ಶಾರೀರಿಕವಾಗಿ ನೊಂದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
ಮಂಗಳೂರು ಮಹಾನಗರಪಾಲಿಕೆ ಸ್ಥಳೀಯ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಆರೋಗ್ಯವು ಅಧಿಕಾರಕ್ಕಿಂತಲೂ ಮಿಗಿಲಾದ ಸಂಪತ್ತು ಆಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನ ನಡೆಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬದ್ರಿಯಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಇಸ್ಮಾಯಿಲ್ ವಹಿಸಿದ್ದರು.
ಜಿಲ್ಲಾ ವಾರರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಮಾಹಿತಿ ಕಿರುಹೊತ್ತಿಗೆಗಳನ್ನು ವಿದ್ಯಾಥರ್ಿಗಳಿಗೆ ವಿತರಿಸಲಾಯಿತು.
Click this button or press Ctrl+G to toggle between Kannada and English