- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದು-ನಾಳೆ ಬೀಚ್, ಆಹಾರ ಉತ್ಸವ

AB-Ibrahim [1]ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ಫೆ.22, 23ರಂದು ಪಣಂಬೂರ್‌ನಲ್ಲಿ ಬೀಚ್ ಉತ್ಸವ ನಡೆಯಲಿದೆ.
ಈ ಸಂದರ್ಭ ಆಹಾರೋತ್ಸವ, ಗಾಳಿ ಪಟ ಉತ್ಸವ, ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫೆ.22ರಂದು ಸಂಜೆ 3 ಗಂಟೆಯಿಂದ ಬೀಚ್ ಮತ್ತು ಆಹಾರೋತ್ಸವ, ಟೀಮ್ ಮಂಗಳೂರು ವತಿಯಿಂದ ಗಾಳಿಪಟ ಪ್ರದರ್ಶನ, ಸಂಜೆ. 3.30ರಿಂದ ಮೂರು ವರ್ಷ ಒಳಗಿನ ಮಕ್ಕಳಿಗೆ ಬೀಚ್ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಪ್ರದರ್ಶನ ನಡೆಯಲಿದೆ.

ಫೆ.23ರಂದು ಬೀಚ್ ವಾಲಿಬಾಲ್ ಪಂದ್ಯಾಟಗಳು, ಹಾಡುಗಾರಿಕೆ ಹಾಗು ಫನ್ ಗೇಮ್ಸ್ ಸ್ಪರ್ಧೆ, ಆಹಾರೋತ್ಸವ, ಮರಳಿನಲ್ಲಿ ಆಕೃತಿ ರಚಿಸುವ ಸ್ಪರ್ಧೆ, ಗಾಳಿಪಟ ಉತ್ಸವ, ಗೊಂಬೆ ನಾಟಕ, ರಂಗ ಗೀತೆ, ಕ್ಲೇ ಶಿಲ್ಪ, ವಿಜ್ಞಾನ ನೃತ್ಯ ಹಾಗೂ ಮಿಮಿಕ್ರಿ, ಪೆರೇಡ್ ಇನ್ನಿತರ ಕಾರ್ಯಕ್ರಮಗಳು. ಸಂಜೆ 6 ಗಂಟೆಗೆ ಬೀಚ್ ಉತ್ಸವ ಸಮಾರೋಪ ನಡೆಯಲಿದೆ.

ಸಂಜೆ 6.30ರಿಂದ ಗೀತಾ ಮೆಲೊಡೀಸ್ ಹಾಗೂ ಅವಿನಾಳ್ ಛಬ್ಬಿ ಕಲಾ ತಂಡಗಳಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ನಡೆಯಲಿದೆ. ಸ್ಪರ್ಧೆಗಳಿಗೆ ಸ್ಥಳದಲ್ಲಿಯೇ ಹೆಸರು ನೋಂದಾಯಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೀಚ್ ಉತ್ಸವ ಸಮಿತಿ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ್, ವಾರ್ತಾಧಿಕಾರಿ ಖಾದರ್, ಪಣಂಬೂರ್ ಜೀವರಕ್ಷಕದ ದಳದ ಯತೀಶ್ ಬೈಕಂಪಾಡಿ ಇದ್ದರು.