ಮಂಗಳೂರು: ಗುಣಾತ್ಮಕ ಶಿಕ್ಷಣದ ಕೂಗು ಎಲ್ಲೆಡೆ ಕೇಳಿಬರುತ್ತಿರುವ ಬೆನ್ನಿಗೇ ಗುಣಾತ್ಮಕ ಅಧ್ಯಾಪನವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ್ದು.
ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಕಾಯಿ ಗಣಿತದ ಜತೆ ವಿಜ್ಞಾನ ಸುಲಭಗೊಳಿಸುವ ಕಲಿಕಾ ಪ್ರಕ್ರಿಯೆಗೆ ಬ್ಲಾಕ್ ಮಟ್ಟದಲ್ಲಿ ಮಂಗಳೂರು ಗಣಿತ ಹಾಗೂ ವಿಜ್ಞಾನ ಗೂಗಲ್‌ನಲ್ಲಿ ಆನ್‌ಲೈನ್ ಶಿಕ್ಷಕರ ವೇದಿಕೆ ಸಿದ್ಧಗೊಂಡಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪಾಠೋಪಯೋಗಿ ಬೋಧನ ಕ್ರಮದಲ್ಲಿ ನೈಪುಣ್ಯತೆ ಗಳಿಸಲು ಶಿಕ್ಷಕರಿಗಾಗಿ ಇರುವ ವೇದಿಕೆ ಇದು.
ಪ್ರಸ್ತುತ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಜಿಲ್ಲೆಯ ಎಲ್ಲ ಬ್ಲಾಕ್‌ಗಳಲ್ಲಿ ವೇದಿಕೆ ರಚನೆಯಾಗಿದೆ. ಬೇರೆ ವೇದಿಕೆಗಳಿಗಿಂತ ಭಿನ್ನವಾಗಿ ಇದು ಕಾರ್ಯನಿರ್ವಹಿಸುತ್ತದೆ. ಹೈಸ್ಕೂಲ್ ಪಠ್ಯ ಬದಲಾದ ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಕರು ನುರಿತ ರೀತಿಯಲ್ಲಿ ಪಾಠ ಮಾಡಬೇಕು.
ಆದರೆ ಹಲವು ಸಂದರ್ಭಗಳಲ್ಲಿ ಶಿಕ್ಷಕರಿಂದ ಸಾಧ್ಯವಾಗುತ್ತಿಲ್ಲ. ಹಾಗೆಂದು ಕೈಚೆಲ್ಲಿ ಕೂರುವಂತಿಲ್ಲ. ಯಾಕೆಂದರೆ ವಿದ್ಯಾರ್ಥಿಗಳ ಭವಿಷ್ಯ ಇರುವುದು ಶಿಕ್ಷಕರ ಕೈಯಲ್ಲಿ. ಇದನ್ನು ಮನಗಂಡ ಜಿಲ್ಲಾ ಶಿಕ್ಷಕ ಸಮುದಾಯ ಮೊದಲು ಮಂಗಳೂರು ಗಣಿತ ಮತ್ತು ವಿಜ್ಞಾನ ಶಿಕ್ಷಕರ ವೇದಿಕೆ (ಎಂಎಸ್‌ಟಿಎಫ್) ರಚಿಸಲು ತೀರ್ಮಾನಿಸಿತು. ಶಾಲೆಗಳ ಪ್ರಯೋಗಾಲಯ ಅಭಿವೃದ್ಧಿಪಡಿಸುವುದು, ಗಣಿತ ಹಾಗೂ ವಿಜ್ಞಾನ ಬೋಧಿಸಲು ಸಮರ್ಪಕ ಕಲಿಕೋಪಕರಣ ತಯಾರಿ ಹಾಗೂ ಬಳಕೆ, ಇಂಟರ್‌ನೆಟ್ ಹಾಗೂ ಇತರೆ ಮಾಧ್ಯಮಗಳಿಂದ ಮಾಹಿತಿ ಪಡೆಯುವುದು ಮತ್ತು ಪರಸ್ಪರ ಹಂಚಿಕೊಳ್ಳುವುದು. ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರ ಕಂಡುಕೊಳ್ಳುವುದು. ಶಾಲೆಗಳಲ್ಲಿ ವೈಜ್ಞಾನಿಕ ವಾತಾವರಣ ನಿರ್ಮಿಸುವುದು, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ಸಜ್ಜುಗೊಳಿಸುವುದು ಇದರ ಉದ್ದೇಶ.
ಬ್ಲಾಕ್ ಮಟ್ಟದಲ್ಲಿ ಪ್ರಥಮ: 2013 ಅಕ್ಟೋಬರ್‌ನಲ್ಲಿ ರಚನೆಯಾದ ವೇದಿಕೆಯಲ್ಲಿ 200ಕ್ಕೂ ಅಧಿಕ ಮಂದಿ ಶಿಕ್ಷಕರು ಆನ್‌ಲೈನ್ ಸೇರ್ಪಡೆಯಾಗಿದ್ದಾರೆ. ಜಿಲ್ಲೆಯ ಎಲ್ಲ ಏಳು ಬ್ಲಾಕ್‌ಗಳಲ್ಲೂ ಅಧ್ಯಕ್ಷ, ಪದಾಧಿಕಾರಿಗಳಿದ್ದಾರೆ. ಆನ್‌ಲೈನ್‌ನಲ್ಲೇ ಮೀಟಿಂಗ್, ಪಠ್ಯ ಹಂಚಿಕೆ, ಪಠ್ಯ ಸಂದೇಹ ನಿವಾರಣೆ, ಸಲಹೆ, ಸೂಚನೆಗಳು, ಬೋಧನಾ ಕ್ರಮ, ಹೊಸತು ಅಳವಡಿಕೆ, ಉಪಯುಕ್ತ ಮಾಹಿತಿ ಪರಸ್ಪರ ಹಂಚಿಕೊಳ್ಳುವುದು.
ಮಾದರಿ ಪ್ರಶ್ನೆ ಪತ್ರಿಕೆ ತಯಾರಿ, ವಿಜ್ಞಾನ ಬೋಧನೆಗೆ ಸ್ಲೈಡ್ ಬಳಸುತ್ತೇವೆ. ಬ್ಲಾಕ್ ಮಟ್ಟದಲ್ಲಿ ರಚನೆಯಾಗಿರುವ ಇಂಥ ವೇದಿಕೆ ಇದೇ ಮೊದಲು ಎನ್ನುತ್ತಾರೆ ಇದರ ರೂವಾರಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಯಲ್ಲಿ ಗಣಿತ ವಿಷಯ ಪರಿವೀಕ್ಷಕರಾಗಿರುವ ರಾಧಾಕೃಷ್ಣ ಭಟ್. ಗಣಿತ ಮತ್ತು ವಿಜ್ಞಾನ ಶಿಕ್ಷಕರು ಆನ್‌ಲೈನ್‌ನಲ್ಲೇ ಸಂವಹನ ನಡೆಸುತ್ತಾರೆ.
ಶಿಕ್ಷಕರು ತಮ್ಮ ಇಮೇಲ್ ವಿಳಾಸವನ್ನು ಗೂಗಲ ಗ್ರೂಪ್‌ನಲ್ಲಿ(ಟಡಡಿಜಿಟಛಟ್ಜಿಛಟ್ಟ್ಠಜಅ್ಜ್ಟ್ಟ್ಜಟಜ್ಜ್ಠ್ಟ್ಡಠಡ.್ಛ್ಟಟ)ನಮೂದಿಸಬೇಕು. ಇವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್ ಇಲ್ಲವೇ ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಬಳಸಬಹುದು. ದ.ಕ. ಜಿಲ್ಲೆಯಲ್ಲಿ 161 ಸರ್ಕಾರಿ ಹೈಸ್ಕೂಲ್, 121 ಅನುದಾನಿತ, 300ಕ್ಕೂ ಅಧಿಕ ಅನುದಾನ ರಹಿತ ಹೈಸ್ಕೂಲ್‌ಗಳಿವೆ. ಎಲ್ಲ ಹೈಸ್ಕೂಲ್‌ಗಳ ಗಣಿತ, ವಿಜ್ಞಾನ ಶಿಕ್ಷಕರು ಈ ಆನ್‌ಲೈನ್ ವೇದಿಕೆಗೆ ಸೇರ್ಪಡೆಗೊಳಿಸುವ ಇರಾದೆ ಇದೆ ಎನ್ನುತ್ತಾರೆ.
ರಾಧಾಕೃಷ್ಣ ಭಟ್. ಫಲಿತಾಂಶ ಹೆಚ್ಚಳ ನಿರೀಕ್ಷೆ: ಸರ್ಕಾರಿ ಹೈಸ್ಕೂಲ್‌ಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆ ಎಂಬ ಕೂಗು ಸಾಮಾನ್ಯವಾಗಿ ಕೇಳಿಬರುತಂಥದ್ದು. ಅದರಲ್ಲೂ ಗಣಿತದಲ್ಲಿ ಫೇಲ್ ಆಗುವವರು ಜಾಸ್ತಿ. ಗಣಿತ ಎಂಬುದು ಕಷ್ಟ ಅಲ್ಲ ಎನ್ನುವುದನ್ನು ಪಾಠ ಮೂಲಕ ತೋರಿಸಿಕೊಡುವ ಛಲ ವೇದಿಕೆಯದ್ದು. ಗಣಿತ, ವಿಜ್ಞಾನದ ಬಗೆಗಿನ ಭಯ ನಿವಾರಿಸಿ, ಉತ್ತಮ ಫಲಿತಾಂಶ ಗಳಿಸುವಲ್ಲಿ ಈ ಬಾರಿ ವೇದಿಕೆ ಪ್ರಯತ್ನ ನಡೆಸಲಿದೆ ಎನ್ನುತ್ತಾರೆ ಭಟ್.
Click this button or press Ctrl+G to toggle between Kannada and English