- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದೀಪಿಕಾಗೆ ಭರ್ಜರಿ ಬ್ರಾಂಡ್‌ ವ್ಯಾಲ್ಯೂ

pika-Padukone [1]ಬೆಂಗಳೂರುಃ ಯಶಸ್ಸಿನ ಬೇನ್ನೆರಿ ಹೊರಟಿರುವ ದೀಪಿಕಾ ಪಡುಕೋಣೆಗೆ ಅದೃಷ್ಟ ಕುಲಾಯಿಸಿದೆ. ಕಳೆದ ವರ್ಷ ಆಕೆ ನಟಿಸಿದ ನಾಲ್ಕು ಚಿತ್ರಗಳೂ ಬಾಕ್ಸ್‌ ಆಫೀಸ್‌ನಲ್ಲಿ ಸತತವಾಗಿ ಹಿಟ್ ಆದ ಕಾರಣ ಈಕೆಯ ಬ್ರಾಂಡ್ ವ್ಯಾಲ್ಯೂ ಗಗನಕ್ಕೇರಿದೆ. ಕೋಟಿ ಕೋಟಿ ಹಣ ಆಕೆಯ ಬ್ಯಾಂಕ್ ಖಾತೆಗೆ ಬಂದು ಬಿಳುತ್ತಿದೆ.

ಸಾಫ್ಟ್ ಡ್ರಿಂಕ್ ಬ್ರಾಂಡೊಂದು ಆಕೆಗೆ ಒಂದು ವರ್ಷದ ಅವಧಿಗೆ ಬರೋಬ್ಬರಿ 6 ಕೋಟಿ ರೂಪಾಯಿ ರಾಯಲ್ಟಿ ನೀಡಿದೆ. ಹಳೇಯ ನಟಿಯರಿಗೆ ಸೆಡ್ಡು ಹೋಡೆದಿರುವ ದೀಪಿಕಾ ತಮ್ಮ ಖ್ಯಾತಿಯನ್ನು ಬಳಸಿಕೊಂಡು ಒಳ್ಳೆಯ ಹಣ ಮಾಡುತ್ತಿದ್ದಾರೆ.

ಕಳೆದ ಎಂಟು ವರ್ಷಗಳಿಂದ ನಟಿ ಐಶ್ವರ್ಯ ರೈ ಕಾಣಿಸಿಕೊಳ್ಳುತ್ತಿದ್ದ ಬ್ರಾಂಡ್ ಈಗ ದೀಪಿಕಾ ಖ್ಯಾತಿಯನ್ನು ಬಳಸಕೊಳ್ಳಲು ಮುಂದಾಗಿದೆ. ಈ ವರ್ಷವಿಡೀ ದೀಪಿಕಾ ಆ ಬ್ರಾಂಡ್ ಎಂಡಾರ್ಸ್ ಮಾಡಲಿದ್ದು, ಕೋಟಿ ಕೋಟಿ ಪಡೆಯಲಿದ್ದಾರೆ.

ಸದ್ಯಲಲ್ಲಿ ಡಿಪ್ಸ್ ಮಾರುಕಟ್ಟೆ ವ್ಯಾಲ್ಯೂ ಮಾತ್ರ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಇಕೆಗೆ ಸ್ಪರ್ಧೆ ನೀಡುವ ಇನ್ನೊಬ್ಬ ನಟಿ ಮಣಿ ಬಾಲಿವುಡ್‌ನಲ್ಲಿ ಕಾಣಿಸುತ್ತಿಲ್ಲ.