ಬೆಂಗಳೂರು: ಮಹಿಳಾ ದಿನದ ಅಂಗವಾಗಿ ಐವತ್ತು ಮಹಿಳಾ ಕಲಾವಿದರು ಒಟ್ಟಿಗೆ ಸೇರಿ ನಡೆಸುವ ಕಲಾಪ್ರದರ್ಶನ ಇಂದು ಸಂಜೆ ೩ ಗಂಟೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭವಾಗಲಿದೆ . ಇವರ ಸುಂದರ ಕಲಾಕೃತಿಗಳು ‘ಆಕಾಂಕ್ಷಾ’ ಹೆಸರಿನಲ್ಲಿ ಪ್ರದರ್ಶನಗೊಳ್ಳಲಿದ್ದು, ಚಿತ್ರಕಲಾ ಪರಿಷತ್‌ನಲ್ಲಿ ಮಾರ್ಚ್ 8, 9 ಮತ್ತು 10ರಂದು ನಡೆಯಲಿದೆ. ಈ ಐವತ್ತು ಪ್ರತಿಭಾನ್ವಿತ ಕಲಾವಿದರ ಕಲಾಕೃತಿಗಳು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಇವರಿಗೆ ಪ್ರೇರಕಶಕ್ತಿಯಾಗಿ ಕೆಲಸ ಮಾಡುತ್ತಿರುವವರು ಉಷಾ ರೈ, ಶ್ಯಾಮಲಾ ರಮಾನಂದ ಮತ್ತು ಕವಿತಾ ಪ್ರಸನ್ನ.
ಪ್ರದರ್ಶನವನ್ನು ಜೈನ್ ವಿ.ವಿ.ಯ ಡೀನ್ ಡಾ. ಚೂಡಾಮಣಿ ನಂದಗೋಪಾಲ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕಲಾವಿದೆ ಡಾ. ಪುಷ್ಪಾ ದ್ರಾವಿಡ್, ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಾ ನರೇಂದ್ರ, ಖ್ಯಾತ ಕಾದಂಬರಿಕಾರ್ತಿ ಶಶಿ ದೇಶಪಾಂಡೆ, ಅಶ್ವಿನಿ ನಾಚಪ್ಪ, ಡಾನ್ಸರ್ ಸಂಧ್ಯಾ ಕಿರಣ್ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಗಾಯಕಿ ಸ್ಮಿತಾ ಬೆಳ್ಳೂರ್ ಆಗಮಿಸಲಿದ್ದಾರೆ.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಬೆಂಗಳೂರು-1, ದಿನಾಂಕ: ಮಾರ್ಚ್ 8, 9, 10. ಪ್ರದರ್ಶನ ಸಮಯ: ಬೆಳಗ್ಗೆ 10-30ರಿಂದ ಸಂಜೆ 7 ಗಂಟೆವರೆಗೆ.
Click this button or press Ctrl+G to toggle between Kannada and English