- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಲೇಷ್ಯಾ ವಿಮಾನದ ಕುರುಹು ಪತ್ತೆ

Malaysian-plane [1]ಕೌಲಾಲಂಪುರ: ನಾಲ್ಕು ದಿನದ ಹಿಂದೆ ಜಲಸಮಾಧಿಯಾಗಿದ್ದ ಮಲೇಷ್ಯಾ ವಿಮಾನದ ಗುರುತು ಪತ್ತೆಯಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಕೋಲಲಂಪೂರ್‌ನಿಂದ ಚೀನಾದ ಬೀಜಿಂಗ್‌ನತ್ತ ಹೋರಟಿದ್ದ ವಿಮಾನ ಸೇನಾ ರಡಾರ್‌ನಲ್ಲಿ ಮಲಾಕ್ಕಾ ಬಳಿ ಪತ್ತೆಯಾಗಿದೆ ಎಂದು ಸೇನೆ ತಿಳಿಸಿದೆ.

ಮಲೆಷ್ಯಾ ವಿಮಾನ ಶೋಧಕ್ಕೆ 10 ಉಪಗ್ರಹಗಳ ಬಳಕೆ ಮಾಡಲಾಗಿದ್ದು, 20 ವಿಮಾನಗಳು ಹಾಗೂ 40 ಹೆಚ್ಚು ಹಡಗುಗಳಿಂದ ಶೋಧ ಕಾರ್ಯ ಮುಂದುವರೆಸಲಾಗಿದೆ.

ಮಲೇಷಿಯಾ ಮತ್ತು ಚೀನಾ ವಿಯಟ್ನಾಂ ಸರ್ಕಾರ ಜಂಟಿಯಾಗಿ ಶೋಧ ಕಾರ್ಯ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಮಲೈಷ್ಯಾದಿಂದ 239 ಪ್ರಯಾಣಿಕರನ್ನು ಹೊತ್ತು ಬೀಜಿಂಗ್‌ಗೆ ತೆರಳುತ್ತಿದ್ದ ವಿಮಾನ ಶುಕ್ರವಾರ ತಡರಾತ್ರಿಯಿಂದ ನಾಪತ್ತೆಯಾಗಿತ್ತು. ಅದು ಸಮುದ್ರದ ಮಧ್ಯೆ ಪತನಗೊಂಡಿದೆ ಎಂದು ಹೇಳಲಾಗಿತ್ತು. ಈಗ ಸೇನೆಯ ರಡಾರ್ ಮೂಲಕ ವಿಮಾನದ ಕುರುಹು ಪತ್ತೆಯಾಗಿದೆ.

ನಕಲಿ ಪಾಸ್ಪೋರ್ಟ್‌ಗಳನ್ನು ಬಳಸಿ ಈ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎನ್ನಲಾಗುತ್ತಿದ್ದ ಇಬ್ಬರು ಪ್ರಯಾಣಿಕರ ಪೈಕಿ, ಒಬ್ಬನ ಗುರುತು ಪತ್ತೆಯಾಗಿದ್ದು, ಆತ ಇರಾನ್ ಮೂಲದ ವ್ಯಕ್ತಿ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಾಪತ್ತೆ ಪ್ರಕರಣದಲ್ಲಿ ಉಗ್ರ ಕೃತ್ಯವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದಿರುವ ಮಲೇಷ್ಯಾ ಅಧಿಕಾರಿಗಳು, ಮತ್ತೊರ್ವ ಶಂಕಿತ ವ್ಯಕ್ತಿಯ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.

ಆಸ್ಟ್ರಿಯಾ ಹಾಗೂ ಇಟಲಿಯ ಇಬ್ಬರು ಪ್ರಜೆಗಳು ಈ ಹಿಂದೆ ತಮ್ಮ ಪಾಸ್‌ಪೋರ್ಟ್ ಕಳೆದುಹೋಗಿದೆಯೆಂದು ಪೊಲೀಸರಿಗೆ ದೂರು ನೀಡಿದ್ದರು. ಆ ಇಬ್ಬರ ಹೆಸರಿದ್ದ ಪಾಸ್‌ಪೋರ್ಟ್ ಬಳಸಿ ಬೇರೆ ಯಾರೋ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣಿಕರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ನೋಟಿ ಪಾಸ್‌ಪೋರ್ಟ್ ಕಳೆದುಕೊಂಡವರು ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿತ್ತು. ಹೀಗಾಗಿ ಉಗ್ರರು ವಿಮಾನದೊಳಕ್ಕೆ ನುಸುಳಿ ಅದನ್ನು ಹೈಜಾಕ್ ಮಾಡಿರಬಹುದೇ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.