- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ನಾಗರೀಕರ ಸುಖಕರ ಪ್ರಯಾಣಕ್ಕೆ ಕೆಎಸ್ಅರ್ ಟಿಸಿ ಬಸ್ಸುಗಳು

 ಸುಬೋಧ್ ಯಾದವ್ [1]ಮಂಗಳೂರು ಜ 6 : ಖಾಸಗಿ ಬಸ್ಸುಗಳ ಮೇಲಾಟದಿಂದ ಮಂಗಳೂರು ನಾಗರೀಕರಿಗೆ ಪ್ರಯಾಣ ಪ್ರಯಾಸವಾಗಿದ್ದು,ಇದರಿಂದ ಮುಕ್ತಿ ಹೊಂದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಗರ ಸಾರಿಗೆ ಬಸ್ಗಳನ್ನು ಓಡಿಸಲು ಪರವಾನಗಿ ನೀಡುವಂತೆ  ಕೆಎಸ್ಆರ್ಟಿಸಿ ಕಾನೂನು ಅಧಿಕಾರಿ ರಾಜೇಶ್ ಶೆಟ್ಟಿ ಅವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ಸುಬೋಧ್ ಯಾದವ್ ಅವರನ್ನು ಕೋರಿದ್ದಾರೆ.
 ಕೆಎಸ್ಆರ್ಟಿಸಿ ಬಸ್ಸು [2]ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯವನ್ನು ಪ್ರಾಧಿಕಾರದ ಅಧ್ಯಕ್ಷರ ಅವಗಾಹನೆಗೆ ತಂದರು.
 ಕೆಎಸ್ಆರ್ಟಿಸಿ ಬಸ್ಸು [3]ಕೆಎಸ್ಆರ್ಟಿಸಿಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ, ಕುರುಡರು, ಅಂಗವಿಕಲರುಗಳಿಗೆ ಉಚಿತ ಪಾಸ್ ಹಾಗೂ ಹಿರಿಯ ನಾಗರೀಕರಿಗೆ ರಿಯಾಯಿತಿ ದರಗಳಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ದೊರಕಿಸಲಾಗುತ್ತಿದೆ. ಕೆಎಸ್ಆರ್ಟಿಸಿ ಸೇವಾ ಮನೋಭಾವದಿಂದ ಕೂಡಿದ ಸಂಸ್ಥೆಯಾಗಿದೆ ಎಂದರು. ಈ ಬಗ್ಗೆ ಖಾಸಗಿ ಬಸ್ ಮಾಲೀಕರ ಪರವಾಗಿ ಸಭೆಯಲ್ಲಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಇಂದಿನ ಆರ್ಟಿಎ ಸಭೆಯಲ್ಲಿ ನ್ಯಾಯಾಲಯದಿಂದ ಆದೇಶಿಸಲ್ಪಟ್ಟು ಸಮಾರು 127 ಮೊಕದ್ದಮೆಗಳನ್ನು  ಚರ್ಚಿಸಲಾಯಿತು. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಸೇವಾ ನಾಯಕ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸುಬ್ರಮಣ್ಯೇಶ್ವರ ರಾವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರಭಾಕರ ಶರ್ಮಾ  ಮುತ್ತುರಾಯ ಕೆಎಸ್ಆರ್ಟಿಸಿ ಡಿಟಿಒ ದೀಪಕ್ ಕುಮಾರ್ ಮಂತಾದವರು ಹಾಜರಿದ್ದರು.

 ಕೆಎಸ್ಆರ್ಟಿಸಿ ಬಸ್ಸು [4]

 ಕೆಎಸ್ಆರ್ಟಿಸಿ ಬಸ್ಸು [5]