- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಿಎ ಕಾಲೇಜಿನಲ್ಲಿ ಕಲ್ಲುತೂರಾಟ ಲಾಠಿಚಾರ್ಜ್

pa collage [1]

ಮಂಗಳೂರು : ಪಿಎ ಕಾಲೇಜಿನಲ್ಲಿ ಕಳೆದ ಐದಾರು ದಿನಗಳಿಂದ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಗುರುವಾರ ತಾರಕಕ್ಕೇರಿತ್ತು. ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಕಾಲೇಜು ಆಡಳಿತ ಮಂಡಳಿ ಕೊನೆಗೆ ಪೊಲೀಸರನ್ನು ಕರೆಸಿಕೊಂಡು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿಸಿದ ಪ್ರಸಂಗ ನಡೆಯಿತು.

ಮಾ.15ರಿಂದ ಕಾಲೇಜಿನ ಮೂಲ ಸೌಕರ್ಯ ಕೊರತೆ, ಕಳಪೆ ಆಹಾರ ನೀಡಿಕೆ, ಬೌದ್ಧಿಕ ಗುಣಮಟ್ಟದ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಿರತರಾಗಿದ್ದಾರೆ. ಗುರುವಾರ ಪಾಠ ಪ್ರವಚನಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಿರತರಾಗಿದ್ದರು. ಮಾ.19ರೊಳಗೆ ಸೂಕ್ತ ವ್ಯವಸ್ಥೆ ಒದಗಿಸುವ ಬಗ್ಗೆ ಕಾಲೇಜು ಆಡಳಿತ ಮಂಡಳಿ ಭರವಸೆ ನೀಡಿತ್ತ್ತು. ಆದರೆ, ಗುರುವಾರ ವೆಲ್ ಫೇರ್ ಅಧಿಕಾರಿ ಅಬ್ದುಲ್ ರೆಹಮಾನ್ ಅವರನ್ನು ಅಮಾನತು ಮಾಡಿದ್ದು ಬಿಟ್ಟರೆ ಬೇರೆ ಕ್ರಮ ಜರುಗಿಸಿಲ್ಲ.

ಪ್ರಿನ್ಸಿಪಾಲ್ ಅವರ ಅಮಾನತಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಕಾಲೇಜಿನ ಮೇಲೆ ಕಲ್ಲುತೂರಾಟ ಮಾಡತೊಡಗಿದರು. ಕೊಣಾಜೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿಡಿಯೋ ಚಿತ್ರೀಕರಣಕ್ಕೂ ವಿದ್ಯಾರ್ಥಿಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಕೆಎಸ್ಆರ್ ಪಿ ತುಕಡಿಯನ್ನು ಕರೆಸಿಕೊಂಡರೂ ಪರಿಸ್ಥಿತಿ ಮುಂದುವರೆದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಲಾಯಿತು.

ಘಟನಾ ಸ್ಥಳಕ್ಕೆ ಎಸಿಪಿ ಅವರು ಆಗಮಿಸಿ ಮಾತುಕತೆ ನಡೆಸಿದ ನಂತರ ಕಾಲೇಜು ಆಡಳಿತ ಮಂಡಳಿಯ ಆರ್ ಜೆ ಡಿಸೋಜಾ ಅವರು ವಿದ್ಯಾರ್ಥಿಗಳ ಪಾಲಿಗೆ ಮಾರಕವಾಗಿದ್ದ ಅಬ್ದುಲ್ ರೆಹಮಾನ್ ಅವರನ್ನು ಎಲ್ಲಾ ಹುದ್ದೆಗಳಿಂದ ಅಮಾನತು ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದರು.