ಮಂಗಳೂರು : ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಮಾ. 29ರಿಂದ31ರ ತನಕ ನಡೆಯುವ ರೇಣುಕಾ ನಂಬಿಯಾರ್ ಅವರ ಚಿತ್ರಕಲಾ ಪ್ರದರ್ಶನವನ್ನು ಏಕಮ್ ಕ್ಯಾಂಡಲ್ಸ್‌ನ ಸಿಇಒ ವನಿತಾ ಪೈ ಅವರು ಉದ್ಘಾಟಿಸಿದರು.
ಪ್ರತಿಯೊಬ್ಬ ಮನಿಷ್ಯನಲ್ಲಿಯೂ ಒಂದೊಂದು ಕಲೆ ಅಡಗಿದೆ. ಕಲಾವಿದ ಕಲಾಪ್ರೌಢಿಮೆಯಿಂದ ಪ್ರಸಿದ್ಧಿ ಗಳಿಸುವ ಮೂಲಕ ಕಲಾಜಗತ್ತನ್ನು ಔನತ್ಯಕ್ಕೇರಿಸಬೇಕು. ಕಲೆ ಮನುಷ್ಯ ಜೀವನ ಶೈಲಿಯನ್ನು ಬದಲಾವಣೆ ಗೊಳಿಸಬಹುದಾದ ಮಾಧ್ಯಮ ಎಂದು ಅಭಿಪ್ರಾಯಪಟ್ಟರು
ಆರೋಗ್ಯಪೂರ್ಣ ಬದುಕಿಗೆ ಕಲೆಯ ಪಾತ್ರ ಮಹತ್ವ. ರೇಣುಕಾ ನಂಬಿಯಾರ್ ಅವರ ಚಿತ್ರಕಲೆಗಳು ವಿಭಿನ್ನವಾಗಿದೆ. ಇನ್ನೂ ಉತ್ತಮ ಕಲಾಕೃತಿಗಳು ಅವರಿಂದ ಮೂಡಿ ಬರಲಿ ಎಂದು ಅವರು ಶುಭ ಹಾರೈಸಿದರು.
ಕಲಾವಿದ ಎಂ. ಜೆ. ಥಾಮಸ್ ಮುಖ್ಯ ಅತಿಥಿಯಾಗಿದ್ದರು. ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿ ಪ್ರಸಾದ್ ಆಳ್ವ, ಸುರೇಂದ್ರನ್ ನಾಯರ್ ಉಪಸ್ಥಿತರಿದ್ದರು.
ಮಧುಸೂದನ್ ಸ್ವಾಗತಿಸಿದರು. ಕಲಾವಿದೆ ರೇಣುಕಾ ನಂಬಿಯಾರ್ ವಂದಿಸಿದರು.
ಗಾಜಿನ ಚೂರುಗಳನ್ನು ಬಳಸಿಕೊಂಡು ಗ್ಲಾಸ್ ಪೈಟಿಂಗ್‌ನಲ್ಲಿ ವಿವಿಧ ಚಿತ್ರಗಳು, ಗಾಜಿನ ಚೂರುಗಳ ಕೊಲಾಜ್, ಮ್ಯಾಗಝೀನ್ ತುಂಡುಗಳನ್ನು ವೈವಿಧ್ಯ ಆಕಾರದಲ್ಲಿ ಅಂಟಿಸಿ ತಯಾರಿಸಿದ ಚಿತ್ರಗಳ, ಪಾರ್ಕ್‌ನಲ್ಲಿ ಮಕ್ಕಳು ಆಟವಾಡುತ್ತಿರುವಂತೆ ಬಿಂಬಿಸಿರುವುದು ಚಿತ್ರಗಳು, ರೈತಾಪಿ ವರ್ಗ ದನಕರುಗಳನ್ನು ಹೊಲದತ್ತ ಮೇಯಲು ಕೊಂಡೊಯ್ಯುವ ಚಿತ್ರಗಳು ಆಕರ್ಷಕವಾಗಿದೆ. ಮನೆಯ ಒಳಾಂಗಣ ವಿನ್ಯಾಸವನ್ನೂ ನಾಜೂಕಾಗಿ ಚಿತ್ರಿಸುವುದರ ಮೂಲಕ ರೇಣುಕಾ ನಂಬಿಯಾರ್ ಕಲಾಪ್ರೌಢಿಮೆಯನ್ನು ಮೆರೆದಿದ್ದಾರೆ.
Click this button or press Ctrl+G to toggle between Kannada and English