ಮಹಾರಾಷ್ಟ್ರದ ಅಯೋಧ್ಯನಗರಿ ಪ್ರಸಿದ್ಧಿ ವಡಾಲದ ಶ್ರೀರಾಮ ಮಂದಿರದಲ್ಲಿ ಸಂಭಮೋಲ್ಲಾಸದ ಶ್ರೀ ರಾಮ ನವಮಿ-ರಥೋತ್ಸವ ಸಂಭ್ರಮ

12:58 PM, Thursday, April 10th, 2014
Share
1 Star2 Stars3 Stars4 Stars5 Stars
(4 rating, 5 votes)
Loading...
Rama Navami

ಮುಂಬಯಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಮುಂಬಯಿ ಇದರ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ಮಂಗಳವಾರ ಮರ್ಯಾದ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವವನ್ನು ವಿಜೃಂಭನೆಯಿಂದ ಸಂಭ್ರಮಿಸಲಾಯಿತು.

ವಡಾಲದ ಕತ್ರಾಕ್ ರಸ್ತೆಯಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ದ್ವಾರಕನಾಥ್ ಭವನದಲ್ಲಿ ಕಳೆದ ನಿರಂತರ ಹತ್ತು ದಿನಗಳಿಂದ ದೇವತಾ ಪ್ರಾರ್ಥನೆ, ಅಖಂಡ ರಾಮ ನಾಮ ಸಂಕೀರ್ತನೆ, ಅಭಿಷೇಕ, ಅಷ್ಟವದಾನ ಸೇವೆಗಳೊಂದಿಗೆ ರಾಮನವಮಿ ಸಂಭ್ರಮಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆಗಳು ನಡೆದಿದ್ದು, ಇಂದು ಮುಂಜಾನೆಯಿಂದಲೇ ಶ್ರೀ ರಾಮ ಮಂದಿರ ಸಮಿತಿ ವಡಾಲ ಇದರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಪ ಸಮಿತಿ ಸೇರಿದಂತೆ ಭಕ್ತರನೇಕರು ವಿಶೇಷ ಪೂಜೆಗಳನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿಗಳಾದ ಸತೀಶ್ ರಾಮ ನಾಯಕ್, ಎಂ.ವಿ ಕಿಣಿ, ವಿನಾಯಕ ಕುಲ್ಕಣರ್ಿ ಮತ್ತು ಕೃಷ್ಣಕುಮಾರ್ ಪೈ ಉಪಸ್ಥಿತರಿದ್ದು ಶ್ರೀರಾಮ ಮಂದಿರದ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಶಿವಸೇನಾ ಅಧ್ಯಕ್ಷ ಉದ್ಧಾವ್ ಠಾಕ್ರೆ ಅವರ ಧರ್ಮಪತ್ನಿ ಶ್ರೀಮತಿ ರಶ್ಮೀ ಉದ್ಧಾವ್ ಠಾಕ್ರೆ ಸೇರಿದಂತೆ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಶ್ರೀರಾಮನ ಆರಾಧನೆಗೈದು ಪುರುಷೋತ್ತಮ ಶ್ರೀರಾಮ ದೇವರನ್ನು ನಮಿಸಿ ಪೂಜಿಸಿದರು.

ಅರ್ಚಕ ಸುಧಾಮ ಅನಂತ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ರಾಮನವಮಿ ಅಂಗವಾಗಿ ರಥ ವಾಸ್ತು ಶಾಂತಿ ಹವನ, ರಾಮ ಜನ್ಮೋತ್ಸವ, ಮಹಾ ಮಂಗಳಾರತಿ, ಸಮಾರಾಧನೆ, ರಥರೋಹಣ, ಬ್ರಹ್ಮರಥ ಸಮರ್ಪಣೆ, ರಥ ಶೋಭಯಾತ್ರೆಯೊಂದಿಗೆ ಬ್ರಹ್ಮ ರಥೋತ್ಸವ ನೆರವೇರಿಸಿ ಶ್ರೀ ರಾಮ ಜಯಂತ್ಯೋತ್ಸವ ಸಂಭ್ರಮಿಸಲಾಯಿತು. ನೂರಾರು ನಾರಿಯರು ಅಲಂಕರಿತ ಶ್ರೀರಾಮನ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಮಂದಿರಕ್ಕೆ ಬರಮಾಡಿಕೊಂಡು ಸಾಂಪ್ರದಾಯಿಕ ವಿಧಿಗಳೊಂದಿಗೆ ಪೂಜೆಗಳನ್ನು ನೆರವೇರಿಸಿ ನಾಮಕರಣೋತ್ಸವ ನೆರವೇರಿಸಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸೇವೆಗಳಿಂದ ರಾಮನವಮಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಮುಂಬಯಿ ಸಮಿತಿಯ ಅಧ್ಯಕ್ಷ ಯು.ಡಿ ಕಾಮತ್, ಗೌರವ ಕಾರ್ಯದರ್ಶಿ ಉಲ್ಲಾಸ್ ಕಾಮತ್, ಕೋಶಾಧಿಕಾರಿ ಜಿ.ಎಸ್ ಭಟ್, ಕಾರ್ಯದದರ್ಶಿ ಅಶೋಕ್ ನಾಯಕ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Rama Navami
Rama Navami

Rama Navami

Rama Navami

Rama Navami

Rama Navami

Rama Navami

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English