ಸೀಮಂತ ಕಾರ್ಯಕ್ರಮದಲ್ಲೂ ಮತದಾರರ ವಿಭಿನ್ನ ಜಾಗೃತಿ..!

2:03 PM, Tuesday, April 15th, 2014
Share
1 Star2 Stars3 Stars4 Stars5 Stars
(4 rating, 6 votes)
Loading...
Seemantha

ಮಂಗಳೂರು : ಅದು ಮೂಲ್ಕಿ ಕೆರೆಕಾಡಿನ “ನಮ್ಮನೆ” ಆ ಮನೆಯಲ್ಲಿ ನಮ್ಮತನದ ಏನಾದರು ವಿಶೇಷತೆ ಸದಾ ಇರುತ್ತದೆ, ಅಂದು ಸಹ ನಮ್ಮನೆಗೆ ಎಲ್ಲರೂ ಬಂದಿದ್ದು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಏಳು ತಿಂಗಳ ಗರ್ಭಿಣಿಗೆ ಅಶೀರ್ವಾದ ನೀಡಿ ಶುಭ ಹಾರೈಕೆ ಮಾಡಲು ಆದರೆ ಅಲ್ಲಿ ಅವರಿಗೆ ಆಶ್ವರ್ಯ ವಾಗಿತ್ತಲ್ಲದೇ ಒಂದು ವಿಶಿಷ್ಠ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂತೃಪ್ತಿಯು ಒಂದೆಡೆ ಸಹ ಮನೆ ಮಾಡಿತ್ತು. ಇದು ಮೂಲ್ಕಿ ಬಳಿಯ ಕೆರೆಕಾಡುವಿನ “ನಮ್ಮನೆ” ನಿವಾಸದಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ ಮೂಡಿ ಬಂದ ಪರಿ.

ಯುವ ಪತ್ರಕರ್ತ ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ಅವರು ತಮ್ಮ ಪತ್ನಿ ಉಷಾ ಕೆರೆಕಾಡುವರವರ ಸೀಮಂತ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿಯ ಅಭಿಯಾನದ ಬಗ್ಗೆ ವಿಶಿಷ್ಠವಾಗಿ ನಡೆಸಿರುವುದು ವಿಶೇಷವಾಗಿದೆ. ಈ ಅಭಿಮಾನಕ್ಕೆ ಚಾಲನೆ ನೀಡಿದವರು ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ ದೇಶದಲ್ಲಿಯೇ ಈಗ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಪ್ರತಿಯೊಬ್ಬ ಮತದಾರನು ಸಹ ತಮ್ಮ ತಮ್ಮ ಮತದಾನದ ಬಗ್ಗೆ ಸ್ಪಷ್ಟ ಅರಿವು ಮೂಡಿಸಿಕೊಂಡಲ್ಲಿ ಪ್ರಜಾಪ್ರಭುತ್ವದ ನೈಜ ಘನತೆಯನ್ನು ಎತ್ತಿ ತೋರಿಸಿದಂತಾಗುತ್ತದೆ, ಪ್ರಜಾಪ್ರಭುತ್ವದ ಕೈಗನ್ನಡಿ ಆಗಿರುವ ಮತದಾನ ಪಾರದರ್ಶಕ, ನ್ಯಾಯಸಮ್ಮತವಾಗಿ ನಡೆದಾಗ ದೇಶದ ಬಗ್ಗೆ ಚಿಂತಿಸುವ ಮನೋಭಾವನೆ ಬೆಳೆಯುತ್ತದೆ, ನರೇಂದ್ರ ಕೆರೆಕಾಡುರವರ ಜಾಗೃತಿ ಅಭಿಯಾನದಿಂದ ಇನ್ನಷ್ಟು ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು.

ಪತ್ರಕರ್ತ ಶರತ್ ಶೆಟ್ಟಿ ಸಂಕಲಕರಿಯರವರು ಮತದಾನದ ಬಗ್ಗೆ ಹಾಗೂ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ವಾಸ್ತು ತಜ್ಞರು, ಆಧ್ಯಾತ್ಮ ಗುರು, ವೈಜ್ಞಾನಿಕ ಜ್ಯೋತಿಷ್ಯರಾದ ಬೆಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸಂಪೂರ್ಣ ಮಾರ್ಗದರ್ಶನ, ಮತದಾನದ ಜಾಗೃತಿ ಅಭಿಯಾನದ ಬಗ್ಗೆ ವಿವಿಧ ಘೋಷಣೆಯ ಪತ್ರವನ್ನು ವಿತರಿಸಲಾಯಿತು, ಚರಣ್ ಅಮಿನ್ ಎಕ್ಕಾರು ಘೋಷಣಾ ಪತ್ರವನ್ನು ವಾಚಿಸಿದರು, ಸೇರಿದ ಜನರು ಮತದಾನವನ್ನು ಮಾಡುವ ಬಗ್ಗೆ ಪ್ರಮಾಣ ಮಾಡಿದರು. ಮಾಧ್ಯಮ ಸ್ನೇಹಿತರ ಸಾಥ್ ಈ ಕಾರ್ಯಕ್ರಮದಲ್ಲಿ ಮೂಡಿಬಂದಿತು. ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ತಮ್ಮ ಪರಿಕಲ್ಪನೆಯ ಮೂಲಕ ಜಾಗೃತಿ ಮೂಡಿಸಿದ ನರೇಂದ್ರ ಕೆರೆಕಾಡು ಮಾತನಾಡಿ ನಮ್ಮ ನಮ್ಮ ಮತದಾನದ ಬಗ್ಗೆ ಸ್ವಯಂ ಪ್ರೇರಿತರಾಗಿ ಜಾಗೃತಿ ಆದರೆ, ಯಾವುದೇ ರಾಜಕೀಯ ಪಕ್ಷದ ಪ್ರಲೋಭನೆಗೆ ಒಳಗಾಗುವ ಅವಕಾಶವೇ ಇಲ್ಲ, ಮತದಾನ ಮಾಡುವುದು ಸಹ ಕರ್ತವ್ಯ ಎಂದು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ ಕಾರ್ನಾಡು, ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕ ಗಿರೀಶ್ ಕಾಮತ್ ಮೂಲ್ಕಿ, ರೋಹನ್ ಸಿ. ಭಟ್, ಉಷಾ ನರೇಂದ್ರ, ಲಕ್ಷ್ಮಣ್ ಅಮಿನ್ ಎಕ್ಕಾರು, ರಾಮಚಂದ್ರ ಬಂಗೇರ ಬಪ್ಪನಾಡು, ಆಶಾ ಪ್ರಕಾಶ್ ಕೋಟ್ಯಾನ್ ಕಾರ್ಕಳ, ಗೀತಾ ತಾರಾನಾಥ ಕೋಟ್ಯಾನ್ ಅಡ್ವೆ, ಮೋನಪ್ಪ ಪೂಜಾರಿ, ಲಕ್ಷ್ಮೀ, ಭಾರತಿ, ಗೋಪಾಲ ಅಂಚನ್ ಇನ್ನಾ, ವಿಮಲಾ ಪೂಜಾರಿ ಅಡ್ವೆ, ಮಲ್ಲಿಕಾ ಬಪ್ಪನಾಡು, ಮುಂಬಯಿಯ ಲೀಲಾದರ ಕೋಟ್ಯಾನ್, ರಘುರಾಮ ಕೋಟ್ಯಾನ್, ವಿಶ್ವನಾಥ ಸಾಲ್ಯಾನ್, ಸದಾನಂದ ಪೂಜಾರಿ, ಚೈತ್ರಾ ಅಮಿನ್ ಎಕ್ಕಾರು ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವೈಶಿಷ್ಠ…..
* ಅಂತಾರಾಷ್ಟ್ರೀಯ ವಾಸ್ತುತಜ್ಞರಿಂದ ಮಾರ್ಗದರ್ಶನ.
* ಮತದಾನದ ಬಗ್ಗೆ ಕರಪತ್ರ ಘೋಷಣೆ.
* ಮತದಾನ ಬಗ್ಗೆ ಜಾಗೃತಿ ಮೂಡಿಸುವ ಬೃಹತ್ ಕಟೌಟ್.
* ಮೊದಲ ಬಾರಿ ಮತದಾರಳಾಗಿರುವ ವಿಧ್ಯಾಥರ್ಿಯಿಂದ ಘೋಷಣೆ.
* ಅಂದಾಜು ಎಂಟುನೂರು ಮಂದಿ ಭಾಗವಹಿಸುವಿಕೆ.
* ಕಾರ್ಯಕ್ರಮ ಸಂಘಟಕ, ಸಂಯೋಜಕರಿಗೆ ಸನ್ಮಾನ.
* ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಗುಜರಾತ್, ಬೆಂಗಳೂರಿನ ಮತದಾರರು ಭಾಗಿ.
* ಪ್ರಶಂಸೆಯ ಮಾತುಗಳು ಕೇಳಿ ಬಂದಿತು.

ವಿಭಿನ್ನ ಆಲೋಚನೆಯ ಕೆರೆಕಾಡು…..
ಬಹುಮುಖ ಪ್ರತಿಭೆ ನರೇಂದ್ರ ಕೆರೆಕಾಡು ತಮ್ಮ ಜೀವನದ ಖಾಸಗಿ ಪ್ರಮುಖ ಕಾರ್ಯಕ್ರಮದಲ್ಲಿ ಸಮಾಜಕ್ಕಾಗಿ ನೀಡುವ ಸಂದೇಶ ಕೊಡುವ ವಿನೂತನ ಕಲ್ಪನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅವರು ತಮ್ಮ ದಾಂಪತ್ಯ ಜೀವನದ ರಸಗಳಿಗೆಯಲ್ಲಿ ಆಕರ್ಷಕ ಆಮಂತ್ರಣ ಪತ್ರಿಕಾ ಪತ್ರ, ಮದುವೆಯ ಮಂಟಪದಲ್ಲಿಯೇ ಕವಿಗೋಷ್ಠಿ, ಕಲಾವಿದರಿಗೆ ಸನ್ಮಾನ, ತುಳು ಭಾಷೆಯ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಈಗ ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮದಲ್ಲಿ ಮತದಾನದ ಜಾಗೃತಿ ನಡೆಸಿದ್ದು ಮೆಚ್ಚುಗೆ ಪಡೆದರೆ, ಇನ್ನು ಮುಂದೆ ತೊಟ್ಟಿಲು ತೂಗುವಾಗ ಏನು ಮಾಡುವರೋ ಎಂಬ ಕಾತರ ಅವರ ಅಭಿಮಾನಿಗಳದ್ದಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English