ಬಂಟ್ವಾಳ : ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ನಡೆದ ಹಲ್ಲೆಯ ಬಳಿಕ ನಿಲುಗಡೆ ಆಗಿದ್ದ ಟೋಲ್ ಸಂಗ್ರಹವನ್ನು ಎ. 20ರಂದು ಬೆಳಗ್ಗೆ 10 ಗಂಟೆಯಿಂದ ಪೊಲೀಸ್ ರಕ್ಷಣೆಯಲ್ಲಿ ಆರಂಭಿಸಲಾಗಿದೆ.
ಶುಕ್ರವಾರ ರಾತ್ರಿ ಟೋಲ್ ಸಂಗ್ರಹ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ನಿಲುಗಡೆಗೊಂಡಿತ್ತು. ಮುಂಜಾನೆ ಊರಿನ ಜನತೆ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಪೊಲೀಸ್ ರಕ್ಷಣೆ ಒದಗಿಸಿಯಾದರೂ ಟೋಲ್ ಸಂಗ್ರಹ ನಡೆಯಬೇಕು ಎಂಬ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್ ಇಂಟರ್‌ಸೆಪ್ಟರ್ ನಿಲ್ಲಿಸಿಕೊಂಡು ಟೋಲ್ ಸಂಗ್ರಹ ಆರಂಭಿಸಲಾಯಿತು.
ಸಿಬಂದಿಗೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ವೇಳೆ ಪ್ರತಿಭಟನೆಕಾರರು ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೇಳಲಾಯಿತು ಎಂದು ಟೋಲ್ ಗುತ್ತಿಗೆದಾರ ಪರ ನ್ಯಾಯವಾದಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English