ಮಂಗಳೂರು: ನಗರದ ವುಡ್ ಲ್ಯಾಂಡ್ಸ್ ಹೊಟೇಲಿನಲ್ಲಿ ಇಬ್ಬರು ಯುವಕರು ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಅವರ ಮುಖಕ್ಕೆ ಸೆಗಣಿ ಹಚ್ಚಿದ ಘಟನೆ ಮಂಗಳವಾರ ನಡೆದಿದೆ.
ಶೃಂಗೇರಿಯಲ್ಲಿ ಎಎನ್ ಎಫ್ ನ ಗುಂಡಿಗೆ ಬಲಿಯಾದ ಜೋಕಟ್ಟೆಯ ಕಬೀರ್ ಪರವಾಗಿ ಕೋಮು ಸೌಹಾರ್ದ ವೇದಿಕೆಯು ಪತ್ರಿಕಾಗೋಷ್ಠಿ ನಡೆಸಿತ್ತು. ಪತ್ರಿಕಾಗೋಷ್ಠಿ ಮುಗಿಸಿ ಹೊರಬರುತ್ತಿದ್ದ ಸುರೇಶ್ ಭಟ್ ಬಾಕ್ರಬೈಲು ಅವರ ಮೇಲೆ ವ್ಯಕ್ತಿಯೊಬ್ಬ ಸೆಗಣಿ ಹಚ್ಚಿದ್ದಾನೆ.
ಈತನನ್ನು ಹರೀಶ್ ಎಂದು ಗುರುತಿಸಲಾಗಿದ್ದು ಅಲ್ಲೇ ಇದ್ದವರು ಆತನನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂದರು ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ತಪ್ಪಿಸಿಕೊಂಡಿದ್ದಾನೆ.
ಬಂಧಿತನಾದ ಹರೀಶ ಗುರುಪುರ ನಿವಾಸಿಯಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ರಮ ಗೋಸಾಗಾಟ ಮಾಡುತ್ತಿದ್ದ ಕಬೀರ್ ಶೃಂಗೇರಿಯ ಚೆಕ್ ಪೋಸ್ಟ್ ಒಂದರಲ್ಲಿ ಎಎನ್ ಎಫ್ ಸಿಬ್ಬಂದಿಗಳು ಪಿಕ್ ಅಪ್ ನ್ನು ನಿಲ್ಲಿಸಿದಾಗ ನಿಲ್ಲಿಸದೆ ಪರಾರಿಯಾದಾಗ ನಕ್ಸಲನೆಂದು ಶಂಕಿಸಿ ಗುಂಡಿನ ದಾಳಿ ನಡೆಸಲಾಗಿತ್ತು.
Click this button or press Ctrl+G to toggle between Kannada and English