ಮಂಗಳೂರು : ಹೊಸದಿಲ್ಲಿಯಲ್ಲಿ ರೈಲ್ವೇ ಸಚಿವ ಸದಾನಂದ ಗೌಡ ಅವರನ್ನು ಭೇಟಿಯಾದ ರಾಜ್ಯ ಆರೋಗ್ಯ ಸಚಿವ ಖಾದರ್ ಅವರು, ಕರಾವಳಿಯ ಇತರ ರೈಲ್ವೇ ಬೇಡಿಕೆ ಈಡೇರಿಸುವಂತೆ ಹಾಗೂ ಮೆಟ್ರೋ ರೈಲು ಆರಂಭಕ್ಕೆ ಚಾಲನೆಯನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.
ಮಣಿಪಾಲ, ಮಂಗಳೂರು ಹಾಗೂ ಕೊಣಾಜೆಯನ್ನು ‘ಎಜುಕೇಶನಲ್ ಹಬ್’ ಎಂದು ಪರಿಗಣಿಸಿ ಈ ನಗರಗಳ ಮಧ್ಯೆ ಮೆಟ್ರೋ ರೈಲು ಓಡಿಸುವಂತೆ ಈ ಹಿಂದೆ ಮನವಿ ಕೂಡ ಸಲ್ಲಿಕೆಯಾಗಿತ್ತು. ರೈಲ್ವೇ ಸಚಿವರು ಕರಾವಳಿ ಜಿಲ್ಲೆಯವರೇ ಆಗಿರುವುದರಿಂದ ಈ ಬೇಡಿಕೆಯನ್ನು ಈಗ ಈಡೇರಿಕೆ ಮಾಡಲು ಸಾಧ್ಯವಿದೆ. ಜತೆಗೆ ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ಮಾಡಿಕೊಡಲು ಹೆಚ್ಚಿನ ಒತ್ತಾಸೆ ತೋರಬೇಕೆಂದು ಖಾದರ್ ಮನವಿಯಲ್ಲಿ ವಿವರಿಸಿದ್ದಾರೆ.
ಸೋಮೇಶ್ವರ, ಉಳ್ಳಾಲದ ರೈಲ್ವೇ ಸಮಸ್ಯೆಗಳಿಗೆ ಪರಿಹಾರ, ಇಲ್ಲಿ ಮೂಲ ಸೌಕರ್ಯ ಹೆಚ್ಚಿಸಬೇಕು, ತೊಕ್ಕೋಟು ಜಂಕ್ಷನ್‌ನಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಿಸಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ರೈಲ್ವೇ ಸಚಿವರಿಗೆ ಸಲ್ಲಿಸಲಾಯಿತು. ಕೇಂದ್ರದ ರೈಲ್ವೇ ಬಜೆಟ್ ಆದ ಬಳಿಕ ಈ ಎಲ್ಲ ಅಂಶಗಳ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ವಿ.ಸದಾನಂದ ಗೌಡ ಅವರು ಸಚಿವ ಖಾದರ್ ಅವರಿಗೆ ಭರವಸೆ ನೀಡಿದ್ದಾರೆ.
Click this button or press Ctrl+G to toggle between Kannada and English