ಮುಂಬಯಿಯಲ್ಲಿನ ತುಳುವರೇ ಭಿನ್ನರು: ನಿಟ್ಟೆ ಶಶಿಧರ ಶೆಟ್ಟಿ

11:08 PM, Sunday, June 15th, 2014
Share
1 Star2 Stars3 Stars4 Stars5 Stars
(4 rating, 5 votes)
Loading...

Tulu Okkoota Meeting

ಮುಂಬಯಿ :ಅಖಿಲ ಭಾರತ ತುಳು ಒಕ್ಕೂಟದ (ಅಭಾತುಒ) ಮುಂಬಯಿ ಸಮಿತಿಯು ಬೆಳ್ಳಿಹಬ್ಬದ ಸವಿನೆನಪಿನ `ತುಳುಪರ್ಬ-2014’ಸಂಭ್ರಮದ ನಿಮಿತ್ತ ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿತು.

ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಮತ್ತು ತುಳು ಕೂಟ ಮೂಡಬಿದ್ರೆ ಇದರ ಕಾರ್ಯಾಧ್ಯಕ್ಷ ಚಂದ್ರಹಾಸ ದೇವಾಡಿಗ, ತುಳು ಕೂಟ ಬೊಂಬಾಯಿ ಕಾರ್ಯಾಧ್ಯಕ್ಷ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಸಂಚಾಲಕ ಜಿ.ಟಿ ಆಚಾರ್ಯ, ಉಪ ಕಾರ್ಯಾಧ್ಯಕ್ಷರುಗಳಾದ ವಿಶ್ವನಾಥ್ ಯು.ಮಾಡ ವೇದಿಕೆಯಲ್ಲಿ ಆಸೀನರಾಗಿದ್ದರು.

ನಿಟ್ಟೆ ಶಶಿಧರ ಶೆಟ್ಟಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿ ಊರಿನ ತುಳುವರಕ್ಕಿಂತ ಮುಂಬಯಿಯಲ್ಲಿನ ತುಳುವರೇ ಭಿನ್ನರು ಎನ್ನುವುದಕ್ಕೆ ಈ ಸಭೆಯೇ ಸಾಕ್ಷಿ. ನಿಜವಾದ ತುಳುಭಾಷೆಯ ಕೃಷಿ-ಕೆಲಸ ಮುಂಬಯಿಯಲ್ಲಿ ಆಗುತ್ತದೆ ಎನ್ನಲೂ ಅಭಿಮಾನವಾಗುತ್ತದೆ. ಮಾತೃ ಯಾ ಪ್ರಾದೇಶಿಕ ಭಾಷಾಭಿಮಾನ ನಮ್ಮ ಅಸ್ಮಿತೆಯ ದೊಡ್ಡತನವಾಗಿದೆ. ಭಾಷೆಯ 8ನೇ ಪರೀಚ್ಛಯದ ಸ್ಥಾನಮಾನದಿಂದ ಪ್ರತ್ಯೇಕ್ಷ ಹಾಗೂ ಪರೋಕ್ಷ ಲಾಭವನ್ನು ತುಳುವರು ಅರಿತುಕೊಳ್ಳುವ ಅಗತ್ಯವಿದೆ. ತುಳು ಭಾಷೆೆ, ಸಂಸ್ಕೃತಿ, ಆಚಾರ-ವಿಚಾರ ಪದ್ದತಿಗಳ ಉಳಿಯುವಿಕೆ, ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ಈ ಬಗ್ಗೆ ತಿಳುವಳಿಕೆ ಮೂಡಿಸುವ ದೃಷ್ಟಿಯಿಂದ ತುಳುಕೂಟ ಸಂಕಲ್ಪ ಹೊಂದಿದ್ದು ತನ್ನ ರಜತೋತ್ಸವ ಸಂಭ್ರಮದ ಮುಖೇನ ಇವೆಲ್ಲವನ್ನೂ ಭವಿಷ್ಯತ್ತಿನ ಪೀಳಿಗೆಗೆ ತುಳು ಒಕ್ಕೂಟ ವರದಾನವಾಗಿಸಲಿದೆ ಎಂದರು.

ನಾವು ಮುಂಬಯಿಗೆ ಬರುವಾಗಲೇ ತುಳುಭಾಷೆಯನ್ನು ತಂದಿದ್ದೇವೆ. ತುಳುನಾಡಿನ ಶ್ರೇಯೋಭಿವೃದ್ಧಿಗೆ ಮುಂಬಯಿ ತುಳುವರ ಕೊಡುಗೆ ಅನನ್ಯವಾದದ್ದು. ಇದನ್ನು ತವರೂರ ತುಳುವರು ಮನವರಿಸಿ ಕೊಳ್ಳುವ ಅಗತ್ಯವಿದೆ. ತುಳು ಭಾಷಾ ಸಂಸ್ಕೃತಿ ಪಾಡ್ದನದ ಮೂಲಕ ಉಳಿದಿದ್ದು ಇದಕ್ಕೂ ಮುಂಬಯಿಗರ ಕೊಡುಗೆ ಗಮನಾರ್ಹ ಎಂದು ಹೆಚ್.ಬಿ.ಎಲ್ ರಾವ್ ತಿಳಿಸಿದರು.
ಜಯಕರ ಡಿ.ಪೂಜಾರಿ ಮಾತನಾಡಿ ಭಿನ್ನತೆ-ಘನತೆ ಎಲ್ಲದರಲ್ಲೂ ಇವೆ. ಇದು ತುಳುಭಾಷೆಯಲ್ಲಿ ಮಾತ್ರ ಎನ್ನುವುದು ತಿಳಿಯುದಕ್ಕಿಂತ ಇದರಲ್ಲಿನ ಸತ್ಯಾಂಶ ಅರಿಯಬೇಕು. ಸುಮಾರು 35 ಸಾವಿರ ವರ್ಷಗಳ ಇಹಾಸವುಳ್ಳ ತುಳು ಭಾಷೆ, ಸಂಸ್ಕೃತಿ ನಮ್ಮದು. ಪ್ರಸ್ತುತ ಆಧುನಿಕ ತುಳುವಾಗಿ ಚಾಲ್ತಿಯಲ್ಲಿದೆ. ಇದನ್ನು ಒಕ್ಕೂಟದ ಮೂಲಕ ಬಲಪಡಿಸಬೇಕು ಎಂದರು.

ಕನರ್ಾಟಕ ಕರಾವಳಿ ತೀರದ 388 ಕಿಲೋ ಮೀಟರ್ ವಿಸ್ತಾರದ ಚೌಕಟ್ಟಿನಲ್ಲಿನ ತುಳುವರು ಕನ್ನಡ ಭಾಷೆಕ್ಕಿಂತ ಪ್ರಭಾವಿಗಳಾಗಿದ್ದಾರೆ. ಶಾಸ್ತ್ರೀಯ ಸ್ಥಾನಮಾನ ಪಡೆಯಲೂ ಶಕ್ತವಾದ ಈ ಭಾಷೆಯು ನಿತ್ಯ ಬೆಳೆಯುತ್ತಾಲೇ ಇದೆ. ಆದರೆ ಸಾವಿಂಧಾನಿಕ ಸ್ಥಾನಮಾನದ ಆದ್ಯತೆಯನ್ನು ಒಟ್ಟು ತುಳುವರ ಪ್ರಯತ್ನದ ಫಲದಿಂದ ಮಾತ್ರ ಸಾಧ್ಯ ಎಂದು ಗುರುತು ಮಾಸಿಕದ ಗೌರವ ಸಂಪಾದಕ ಬಾಬು ಶಿವ ಪೂಜಾರಿ ತಿಳಿಸಿದರು.

ಸಮಸ್ಯೆ ಮುಕ್ತ ತುಳುವನ್ನಾಗಿಸಿದರೆ ಎಲ್ಲವೂ ತಿಳಿಯಾಗುವುದು. ತುಳು ಭಾಷೆ ಅವಿಭಜಿತ ಜಿಲ್ಲೆಗೆ ಸೀಮಿತವಾಗಿದ್ದರೂ ಭಾಷಾಭಿಮಾನಿಗಳು ಜಗತ್ತಿನುದ್ದಕ್ಕೂ ವ್ಯಾಪಿಸಿ ಜೀವಿಸುತ್ತಿದ್ದಾರೆ. ದೇಶ-ವಿದೇಶಗಳಲ್ಲೂ ನೆಲೆಯಾಗಿರುವ ತುಳುವರು ತಮ್ಮ ಸಂಸ್ಕೃತಿ-ಭಾಷೆಯನ್ನು ದೈನಂದಿನವಾಗಿ ಬಳಸುತ್ತಿರುವುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಭಾಷೆ ಬೆಳವಣಿಗೆ ಮುಖ್ಯವಾದದ್ದು. ಇನ್ನೊಂದು ವಿಚಾರ ಎಂದರೆ ತುಳುನಾಡಿನ ಕಾಸರಗೋಡು ನಿಂದ ಭಟ್ಕಳ ತನಕವೂ ರೈಲು ನಿಲ್ದಾಣಗಳಲ್ಲಿ ರೈಲುಯಾನ ಘೋಷಣೆ ಶೀಘ್ರವೇ ಆರಂಭಿಸಲು ಈ ಒಕ್ಕೂಟ ಶ್ರಮಿಸಬೇಕು ಎಂದು ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ತಿಳಿಸಿದರು.

ಬ್ಯಾರಿಗಳೂ ಅಪ್ಪಟ ತುಳುವರು. ಇದಕ್ಕೆ ಅನೇಕ ಪುರಾವೆಗಳಿವೆ. ಒಂದು ಕಾಲದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರು ನಡೆಸುತ್ತಿದ್ದ ಸಾಮರಸ್ಯದ ಬದುಕಿಗೆ ತುಳುಭಾಷೆಯೇ ಮಾತೃಪ್ರಧಾನವಾಗಿತ್ತು. ಆದರೆ ಈಗ ಭಾಷೆ-ಜಾತಿಯ ನೆಪದಲ್ಲಿ ಎಲ್ಲವೂ ಕೊಚ್ಚಿಹೋಗುತ್ತಿರುವ ಕಾಲದಲ್ಲಿ ಮತ್ತೆ ತುಳುವರನ್ನು ಒಗ್ಗೂಡಿಸಲು ಸನ್ನದ್ಧವಾಗಿರುವ ಈ ಒಕ್ಕೂಟವು ಸಾಧನಶೀಲ ಸಂಸ್ಥೆಯಾಗಿ ಬೆಳೆಯಲಿ ಎಂದು ನ್ಯಾ| ಬಿ.ಮೋಯ್ಧೀನ್ ಮುಂಡ್ಕೂರು ಅಭಿಪ್ರಾಯ ಪಟ್ಟರು.

ಈ ವರೇಗೆ ನಿಧಾನಗತ ಸ್ಥಾನೀಯ ರೈಲುವಾಗಿದ್ದ ಅಖಿಲ ಭಾರತ ತುಳು ಒಕ್ಕೂಟವು ಇದೀಗ ಧರ್ಮಪಾಲ್ ದೇವಾಡಿಗರ ನೇತೃತ್ವದಲ್ಲಿ ಸೂಪರ್ ಫಾಸ್ಟ್ ರೈಲ್ ಆಗಿ ಸೇವೆಯಲ್ಲಿದೆ. ತುಳು ಭಾಷೆಯನ್ನು 8ನೇ ಪರೀಚ್ಛಯದಲ್ಲಿ ಸೇರ್ಪಡಿಸಲು ನಾನೂ ಪ್ರಯತ್ನಿಸುವೆ. ಇದು ರಾಜತಾಂತ್ರಿಕತೆಯಿಂದ ಮಾತ್ರ ಸಾಧ್ಯ. ಈ ಒಂದು ಭಾಷೆಯನ್ನು ಸೇರಿಸಿದಲ್ಲಿ ಮತ್ತೆ ಹೆಚ್ಚುವರಿ ಭಾಷೆಗಳನ್ನೂ ಸೇರಿಸುವ ಹೊಣೆಗಾರಿಕೆ ಸರಕಾರಕ್ಕೆ ಹೊರೆಯಾಗಬಹುದು ಅಥವಾ ನಮ್ಮ ಬಳಕೆಯ ನೋಟುಗಳಲ್ಲೂ ತುಳುಭಾಷೆಯ ಉಲ್ಲೇಖ ಇತ್ಯಾದಿ ಸವಾಲುಗಳು ಸರಕಾರ ಪ್ರಶ್ನೆಯಾಗುತ್ತದೆ.

ಆದುದರಿಂದ ಇದಕ್ಕೆಲ್ಲಾ ನಾವೆಲ್ಲರೂ ಏಕಾಗ್ರಸ್ಥರಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಎಲ್ಲೂ ಸಿಗದ ಸಂಸ್ಕೃತಿ, ದೈವ-ದೇವರುಗಳ ಆರಾಧನೆ ಬರೆ ತುಳುನಾಡಿನಲ್ಲಿ ಕಾಣಸಿಗುತ್ತಿದ್ದು ಒಟ್ಟಾಗಿ ತುಳುನಾಡು ಸರ್ವಶ್ರೇಷ್ಟವಾದದ್ದು. ಸಂಸ್ಕೃತಿಯ ನಾಡು, ಶೈಕ್ಷಣಿಕ ಬೀಡು ಆಗಿರುವ ತುಳುನಾಡನ್ನು ಈ ಬಾರಿ ವಿಶ್ವಕ್ಕೆ ಪರಿಚಯಿಸುವಲ್ಲಿ ಒಟ್ಟಾಗಿ ಶ್ರಮಿಸೋಣ ಎಂದು ಜಯಕೃಷ್ಣ ಶೆಟ್ಟಿ ತಿಳಿಸಿದರು.

ಕೇವಲ ಹಬ್ಬವಾಗಿಸದೆ ತುಳು ಭಾಷೆಯ ಉದ್ದೇಶಗಳನ್ನು ಸಿದ್ಧಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಧರ್ಮಸ್ಥಳದ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಒಕ್ಕೂಟವು `ಬೆಳ್ಳಿಹಬ್ಬ’ದ ಸವಿನೆನಪಿಗಾಗಿ 2014ರ ನವೆಂಬರ್ 29 ರಿಂದ 3 ದಿನಗಳ ವರೆಗೆ ಮಂಗಳೂರು ಅಲ್ಲಿನ ಪಿಳಿಕುಳದ ನಿಸರ್ಗಧಾಮದಲ್ಲಿ ವಿಜೃಂಭಣೆಯ `ತುಳುಪರ್ಬ-2014’ನ್ನು ಆಚರಿಸುತ್ತಿದ್ದೇವೆ. ಹಾಗೇಯೇ ಒಕ್ಕೂಟದ ಧ್ಯೇಯಗಳನ್ನು ಭವಿಷ್ಯತ್ತಿನ ಯೋಜನೆಗಳಾಗಿಸಿ ಭಾಷಾ ಸಮಸ್ಯೆಗಳ ದೋಷ ನಿವಾರಿಸುವ ಯೋಚನೆ ನಮ್ಮ ಮೇಲಿದೆ. ಆದುದರಿಂದ ಪ್ರತೀಯೋರ್ವ ತುಳುವರ ಸಹಯೋಗ, ಒಗ್ಗಟ್ಟು ಮಾತೃಭಾಷಿಗರಲ್ಲಿರಲಿ ಎಂದು ಧರ್ಮಪಾಲ್ ದೇವಾಡಿಗರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಸಭಿಕರ ಪಯ್ಕಿ ಎಲ್.ವಿ ಅವಿೂನ್, ಹರೀಶ್ಕುಮಾರ್ ಎಂ.ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ನರೇಂದ್ರ ರೈ ಎಂ.ಬಿ., ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ಜಗಧೀಶ್ ಶೆಟ್ಟಿ ಐರೋಳಿ, ಸುರೇಂದ್ರಕುಮಾರ್ ಹೆಗ್ಡೆ, ದಯಾನಂದ ಬೋಂಟ್ರಾ ಬರೋಡಾ, ನ್ಯಾ| ಬಿ.ಸುಭಾಶ್ ಶೆಟ್ಟಿ, ಡಾ| ಭರತ್ಕುಮಾರ್ ಪೊಲಿಪು, ಕನರ್ೂರು ಮೋಹನ್ ರೈ, ಶ್ರೀಮತಿ ಉಷಾ ಹೆಗ್ಡೆ, ಹಿರಿಯಡ್ಕ ಮೋಹನ್ದಾಸ್, ಸತೀಶ್ ಎನ್.ಬಂಗೇರಾ ಮತ್ತು ಕೆ.ಡಿ ಶೆಟ್ಟಿ ನೆರೂಲ್ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಂಭ್ರಮದ ತುಳು ಪರ್ಬದ ಯಶಸ್ಸಿಗೆ ಸಲಹೆ-ಸೂಚನೆಗಳನ್ನಿತ್ತರು.

ಸಭೆಯಲ್ಲಿ ತುಳು ಕೂಟ ಬೊಂಬಾಯಿ ಸಹ ಸಂಚಾಲಕ ಅಶೋಕ್ ಸಸಿಹಿತ್ಲು, ಗೌ| ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಜೊತೆ ಕೋಶಾಧಿಕಾರಿ ತೋನ್ಸೆ ಸಂಜೀವ ಪೂಜಾರಿ ಮತ್ತು ಸಲಹಾದಾರೆ ಡಾ| ಸುನೀತಾ ಎಂ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ದಯಾಸಾಗರ್ ಚೌಟ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕೂಟದ ಗೌ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಧನ್ಯವಾದ ಸಮರ್ಪಿಸಿದರು.

Tulu Okkoota Meeting

Tulu Okkoota Meeting

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English