- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನೆಹರು ಮೈದಾನದಲ್ಲಿ ಆಕರ್ಷಕ ಕವಾಯತಿನೊಂದಿಗೆ 62 ನೇ ಗಣರಾಜ್ಯೋತ್ಸವ ಆಚರಣೆ

62 ನೇ ಗಣರಾಜ್ಯೋತ್ಸವ [1]ಮಂಗಳೂರು:   62 ನೇ ಗಣರಾಜ್ಯೋತ್ಸವದ ಅಂಗವಾಗಿ ಸನ್ಮಾನ್ಯ ದ.ಕ ಜಿಲ್ಲಾ ಉಸ್ತುವಾರಿ ಸಚಿವ  ಶ್ರೀ ಕೃಷ್ಣ ಜೆ. ಪಾಲೆಮಾರ್ ರವರು ಇಂದು ಬೆಳಿಗ್ಗೆ ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು.
62 ನೇ ಗಣರಾಜ್ಯೋತ್ಸವ [2]ಈ ಸಂದರ್ಭದಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡದಲ್ಲಿ ನಡೆದ ಹಾಗೂ ನಡೆಯಲಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಮಗ್ರ ವರದಿಯನ್ನು ತನ್ನ ಗಣರಾಜೋತ್ಸವದ ಭಾಷಣದಲ್ಲಿ ವಿವರಿಸಿದರು.
ದೈರ್ಯ ಸಾಹಸಕ್ಕಾಗಿ ನೀಡುವ ರಾಜ್ಯಮಟ್ಟದ ಹೊಯ್ಸಳ ಪ್ರಶಸ್ತಿಯನ್ನು ಪ್ರವೀಣ ಎ.ಕೆ. ಸುಳ್ಯ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ   ಸಾಧನೆಗೈದ 29 ಜನ ಸಾಧಕರಿಗೆ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
62 ನೇ ಗಣರಾಜ್ಯೋತ್ಸವ [3]ರಾಜ್ಯ ಮೀಸಲು ಪೊಲೀಸು ತಂಡ, ಸಶತ್ರ ಪೊಲೀಸ್, ಟ್ರಾಫಿಕ ಪೊಲೀಸ್, ಹೋಮ್ ಗಾಡ್ರ್ಸ, ಎನ್.ಸಿ.ಸಿ, ಏರ್ ವಿಂಗ್ ನ ವಿವಿಧ ತಂಡಗಳು ಸೇರಿ 14 ತಂಡಗಳಿಂದ ಪಥಸಂಚಲನ ನಡೆಯಿತು. ಇದರಲ್ಲಿ ಎನ್.ಸಿ.ಸಿ ಜೂನಿಯರ್ ತಂಡ ದ್ವಿತೀಯ ಸ್ಥಾನ ಪಡೆದರೆ, ಆರ್.ಎಸ್.ಪಿ. ತಂಡ ಪ್ರಥಮ ಸ್ಥಾನ ಪಡೆಯಿತು.
62 ನೇ ಗಣರಾಜ್ಯೋತ್ಸವ [4]ದ.ಕ ಜಿಲ್ಲಾ ಪೊಲೀಸ್ ವತಿಯಿಂದ ಕ್ಷಿಪ್ರ ಕಾರ್ಯಪಡೆ ಭಯೋತ್ಪಾದಕರನ್ನು ನಿಗ್ರಹಿಸುವ ಕಿರು ಪ್ರಹಸನವನ್ನು ಕಾಲ್ ಸೈನ್ (ಚಾರ್ಲಿ, ಆಲ್ಫ,ಸಿರ)ಗಳನ್ನು ಉಪಯೋಗಿಸಿ ವೀಕ್ಷಕರಿಗೆ ಅಣಕು ಪ್ರದರ್ಶನವನ್ನು ನೀಡಿದರು. ಪ್ರತಿಭಟನಾ ಗಲಭೆ ಸಂದರ್ಭಗಳಲ್ಲಿ ಪ್ರತಿಭಟನಾಕಾರರನ್ನು ರಬ್ಬರ್ ಬುಲೆತ್, ಆಶ್ರುವಾಯು, ಗೋಲಿಬಾರ್ಗಳ ಮೂಲಕ ನಿಗ್ರಹಿಸುವ ಅಣಕುನೋಟವನ್ನು ಈ ಸಂದರ್ಭ ಪ್ರದರ್ಶಿಸಲಾಯಿತು. ನಂತರ ಸರಕಾರಿ ಪ್ರೌಢಶಾಲೆ ಬಲ್ಮಠ ಹಾಗೂ ಮಿಲಾಗ್ರಿಸ್ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
62 ನೇ ಗಣರಾಜ್ಯೋತ್ಸವ [5]ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷ ಯೋಗೀಶ್ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಕ್ಯಾ. ಗಣೇಶ್ ಕಾರ್ನಿಕ್, ಕೆ.ಸಂತೋಷ್ ಭಂಡಾರಿ, ಜಿಲ್ಲಾಧಿಕಾರಿ ಸುಭೋದ್ ಯಾದವ್,  ಪೊಲೀಸ್ ಕವಿಷನರ್ ಸೀಮಂತ್ ಕುಮಾರ್ ಸಿಂಗ್, ಎಸ್.ಪಿ. ಸುಬ್ರಹ್ಮಣ್ಯೇಶ್ವರ್ ರಾವ್, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಪ್ರಕಾಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

62 ನೇ ಗಣರಾಜ್ಯೋತ್ಸವ [6]ಹೆಚ್ಹಿನ ಚಿತ್ರಗಳು [7]