ಮಂಗಳೂರು : ಬಡತನ ದೇಶದ ಒಂದು ದೊಡ್ಡ ಪಿಡುಗಾಗಿದ್ದು ,ಇದರಿಂದಾಗಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಅಪೌಷ್ಠಿಕತೆ ಮಕ್ಕಳು ನಾನಾ ರೋಗರುಜಿನಗಳಿಗೆ ತುತ್ತಾಗಿ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಅಧ:ಪತನಕ್ಕೆ ಕಾರಣರಾಗುತ್ತಿದ್ದಾರೆ. ಆದ್ದರಿಂದ ಇಂತಹ ಅಪೌಷ್ಠಿಕತೆಯ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಾವಲ್ಲರೂ ಮುಂದಾಗಬೇಕೆಂದು ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳ ಹಾಗೂ ಮಕ್ಕಳ ಅಪೌಷ್ಠಿಕತೆ ತಡೆಗಟ್ಟುವುದರ ಕಾರ್ಯ ಯೋಜನೆ ಸಮಿತಿಯ ಗೌರವಾನ್ವಿತ ಅಧ್ಯಕ್ಷ ಎನ್.ಕೆ. ಪಾಟೀಲ್ ತಿಳಿಸಿದರು.
ಅವರು ಇಂದು ನಗರದ ರೊಜಾರಿಯೋ ಕ್ಯಾಥಡ್ರಲ್ ಚರ್ಚ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಕೀಲರ ಸಂಘ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ಅಪೌಷ್ಠಿಕತೆ ತಡೆಗಟ್ಟುವುದರ ಬಗೆಗಿನ ಸಮಗ್ರ ಕಾರ್ಯ ಯೋಜನೆ- ಅನುಷ್ಠಾನ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗ್ಗೆ ಏರ್ಪಡಿಸಿದ್ದ ಅರಿವು -ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದವರಲ್ಲಿ ವಿವಿಧ ರೀತಿಯ ದೈಹಿಕ ಬೆಳವಣಿಗಳಾಗುತ್ತಿರುತ್ತವೆ. ಇಂತಹ ಪ್ರಾಯದಲ್ಲಿ ಹದಿಹರೆಯದವರಿಗೆ ಸೂಕ್ತವಾದ ಪೌಷ್ಠಿಕ ಆಹಾರ ಅಥವಾ ಸಮತೋಲನ ಆಹಾರ ದೊರಕದಿದ್ದರೆ ಅವರು ಅಂಗಹೀನರಾಗಿ ರಕ್ತ ಹೀನತೆಯಿಂದ ಬಳಲುವ ಮೂಲಕ ರೋಗರುಜಿನಗಳಿಗೆ ತುತ್ತಾಗುತ್ತಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ನಾವು ಸದೃಢ ಭಾರತ ನಿಮರ್ಾಣಕ್ಕಾಗಿ ಇಂತಹ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಮತೋಲನ ಪೌಷ್ಠಿಕ ಆಹಾರಗಳನ್ನು ಒದಗಿಸುವುದರ ಜೊತೆಗೆ ಉತ್ತಮ ವೈದ್ಯಕೀಯ ನೆರವನ್ನು ನೀಡುವುದು ಸಕರ್ಾರದ ಕರ್ತವ್ಯವಾಗಿದೆಯೆಂದು ತಿಳಿಸಿದ ನ್ಯಾಯಮೂರ್ತಿಗಳು ನಮ್ಮ ಮಕ್ಕಳಿಗೆ ಅವರ ಬಾಲ್ಯದ ಹಕ್ಕನ್ನು ನೀಡೋಣ ಯಾವ ಮಗುವು ಶಿಕ್ಷಣದಿಂದ ವಂಚಿತರಾಗದಂತೆ ಶ್ರಮಿಸೋಣ ಎಂದು ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಗೌರವಾನ್ವಿತ ಕಾರ್ಯಾಧ್ಯಕ್ಷರು, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಕೆ.ಎಲ್.ಮಂಜುನಾಥ ಇವರು ಮಾತನಾಡಿ,ದಕ್ಷಿಣಕನ್ನಡ ಜಿಲ್ಲೆ ರಾಜ್ಯದಲ್ಲಿ ಅಪೌಷ್ಠಿಕತೆ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಶ್ಲಾಘನೀಯವಾಗಿದ್ದು, ಅಪೌಷ್ಠಿಕತೆ ನಿವಾರಣೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆಯೆಂದು ಪ್ರಶಂಸಿದರು. ಜಿಲ್ಲೆಯಲ್ಲಿ 2010 ರಿಂದ 2014 ರ ವರೆಗೆ ಒಟ್ಟು 2583 ಮಕ್ಕಳನ್ನು ಅಪೌಷ್ಠಿಕತೆ ಮಕ್ಕಳೆಂದು ಗುರುತಿಸಲಾಗಿದ್ದು, ಈ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ಪೌಷ್ಠಿಕ ಆಹಾರ ಮತ್ತು ವೈದ್ಯಕೀಯ ನೆರವನ್ನು ನೀಡುವುದರ ಮೂಲಕ ಸುಧಾರಣೆ ಪಡಿಸಿದ್ದಾರೆ. ಇನ್ನುಳಿದಂತೆ 378 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು,ಅವರನ್ನು ಸುಧಾರಣೆ ಮಾಡಿ ಜಿಲ್ಲೆಯನ್ನು ಅಪೌಷ್ಠಿಕತೆಯಲ್ಲಿ ಶೂನ್ಯ ಸ್ಥಾನಕ್ಕೆ ತರಬೇಕೆಂದು ಸಲಹೆ ನೀಡಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ನಿಂದ ಬಳಲುತ್ತಿರುವವರ ಸಂಖ್ಯೆ ಸುಮಾರು 15,000 ಗಳಷ್ಠಿದ್ದು, ಎಂಡೋಸಲ್ಫಾನ್ ಪೀಡಿತರನ್ನು ಪ್ರತೀ ಗ್ರಾಮಗಳಲ್ಲಿ ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಸಕರ್ಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕೆಂದು ತಿಳಿಸಿದ ನ್ಯಾಯಮೂರ್ತಿ ಎಂಡೋ ಪೀಡಿತರು ಪೋಷಕರು ಅಥವಾ ತಂದೆ ತಾಯಿಗಳನ್ನು ಕಳೆದುಕೊಂಡಾಗ ಸಮಾಜಕ್ಕೆ ದೊಡ್ಡ ಹೊರೆಯಾಗಲಿದ್ದಾರೆ. ಆದ್ದರಿಂದ ಇವರ ಪುನರ್ ವಸತಿಗೆ ಜಿಲ್ಲಾಡಳಿತ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗಳು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ಎಲ್.ನಾರಾಯಣ ಸ್ವಾಮಿ ಮಾತನಾಡಿ ವಿಶ್ವದಲ್ಲಿ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ರಾಷ್ಟ್ರ ಭಾರತ. ಭಾರತದಲ್ಲಿ ಇರುವ ಶೇಕಡಾ 50 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಇವರ ಮರಣಕ್ಕೆ ಉಪವಾಸವೇ ಕಾರಣವಾಗಿದೆಯೆಂದು ವಿಷಾದಿಸಿ.ನಮ್ಮಲ್ಲಿ ಬಡತನವನ್ನು ಕಿತ್ತೊಗೆಯಲು ಬಡವರಿಗೆ ಆಥರ್ಿಕ ಸದೃಢತೆಗೆ ನೆರವಾಗಬೇಕೆಂದು ಸಲಹೆ ಇತ್ತರು.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಡಾ .ಕೆ. ಭಕ್ತವತ್ಸಲ, ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ,ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಅಶೋಕ ಅರಿಗ,ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ್ಯೆ ಉಮಾ ಎಂ.ಜಿ ಉಪಸ್ಥಿತರಿದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮಾ.ಎಂ.ಜಿ. ಸ್ವಾಗತಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್.ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.
Click this button or press Ctrl+G to toggle between Kannada and English