ಮಂಗಳೂರು : ಅಗೋಸ್ತು ತಾ. 2 ಮತ್ತು 3 ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜರಗಲಿರುವ ದ.ಕ. ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ವಿಶ್ವಮಾನ್ಯ ಕನ್ನಡಿಗ ಕಂಪ್ಯೂಟರ್ ವಿಜ್ಞಾನಿ, ಸಾಫ್ಟ್ವೇರ್ ಭಾಷಾ ತಜ್ಞ ಗಣಕ ಮಹೋಪಾಧ್ಯಾಯ – ಡಾ. ಕಿನ್ನಿಕಂಬಳ ಪದ್ಮನಾಭರಾವ್ ಆಯ್ಕೆಯಾಗಿದ್ದಾರೆ. ಸಾಹಿತ್ಯ ಮತ್ತು ಭಾಷಾ ಕ್ಷೇತ್ರ ಮತ್ತು ಗಣಕ ತಂತ್ರಜ್ಞಾನಗಳ ಸಮನ್ವಯದ ಸಂಕೇತವಾಗಿ, ಹೊಸ ಅಶೋತ್ತರಗಳ ನೆಲೆಯಲ್ಲಿ ಅವರಿಗೆ ಅರ್ಹ ಗೌರವ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.
ಕಂಪ್ಯೂಟರ್ ವಿಜ್ಞಾನ, ಸಾಹಿತ್ಯ, ತತ್ವಶಾಸ್ತ್ರ, ಗಣಿತ, ಎಂಜಿನಿಯರಿಂಗ್, ಮುದ್ರಣ ತಂತ್ರಜ್ಞಾನ, ಕನ್ನಡ, ಸಂಸ್ಕೃತ, ತುಳು ಭಾಷೆಗಳಲ್ಲಿ ವಿದ್ವಾಂಸರಾದ, ನೈಜ ಬಹುಶ್ರುತ ಕೆ.ಪಿ. ರಾವ್ – ಸತತ ಅಧ್ಯಯನ, ಅಸಾಧಾರಣ ಸಂಶೋಧನಾಸಕ್ತಿ, ಪರಂಪರೆಯ ಕಾಳಜಿ, ಆಧುನಿಕತೆಗಳ ತುಡಿತಗಳ ಸಮುಚ್ಚಯ. ಭಾರತೀಯ ಭಾಷೆಗಳ ಕಂಪ್ಯೂಟರೀಕರಣದ ಆಚಾರ್ಯರೆಂದೆ ಖ್ಯಾತರಾದ ಇವರ ಹಲವು ಕೊಡುಗೆಗಳಲ್ಲಿ ಪ್ರಸ್ತುತ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು (‘ನುಡಿವಿನ್ಯಾಸ’) ರೂಪಿಸಿದ್ದು ಶ್ರೀ ಕೆ.ಪಿ. ರಾವ್.
ಕಿನ್ನಿಕಂಬಳ ಸರಕಾರಿ ಶಾಲೆ, ಎಲೋಶಿಯಸ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ, ಹೋಮಿಭಾಭಾ, ಡಾನ್ ಕ್ನುಥ್, ಪ್ರೊ| ವಾರ್ಸೋಕ್, ಡಾ| ರಾಜಾರಾಮಣ್ಣ, ಡಿಡಿ ಕೋಸಾಂಬಿ, ಸೇಡಿಯಾಪು ಮೊದಲಾದ ಮಹಾ ಪ್ರತಿಭಾವಂತರ ಒಡನಾಟ, ದೇಶ ವಿದೇಶಗಳ ತಿರುಗಾಟಗಳು, ಸತತ ಅಧ್ಯಯನಗಳ ಹಿನ್ನಲೆಯುಳ್ಳ ರಾವ್ – ಐಐಟಿ ಮುಂಬಯಿ, ಟಾಟಾ ವಿಜ್ಞಾನ ಸಂಸ್ಥೆ ಮಣಿಪಾಲ, ನಿಟ್ಟೆಗಳಲ್ಲಿ ನಾಲ್ಕು ದಶಕಗಳ ಕಾಲ ಅಧ್ಯಾಪಕ ಜೊತೆಗೆ ವಿಕಿ ಪಿಡಿಯಾ, ಯೂಟ್ಯೂಬ್ ಸಹಿತ ಹಲವು ಕೋಶಗಳಿಗೆ ಸಂಪಾದಕ, ಕಂಪ್ಯೂಟರ್ ದಾಖಲಾತಿ, ರಕ್ಷಣೆ, ಭಾಷಾ ರೂಪಗಳಲ್ಲಿ ಹಲವು ವಿನ್ಯಾಸಗಳ ಕೊಡುಗೆ, ಉಚ್ಛಾರ ತರ್ಕದ ಅನ್ವಯ ನೀಡಿದ ಮೊದಲ ಸಂಶೋಧಕ. ಇದೀಗ ಪಾಣಿನೀಯ ವ್ಯಾಕರಣದ ಕಂಪ್ಯೂಟರೀಕರಣದ ಬೃಹತ್ ಯೋಜನೆ ರೂಪಿಸಿದ್ದಾರೆ.
ಹಂಪಿ ವಿವಿಯ ನಾಡೋಜ, ಕರ್ನಾಟಕ ರಾಜ್ಯೋತ್ಸವ ಗೌರವ, ಆಳ್ವಾಸ್ ನುಡಿಸಿರಿ – ಸಹಿತ ಹಲವು ಗೌರವಗಳಿಗೆ ಪಾತ್ರರು.
ಪತ್ನಿ ಶ್ರೀಮತಿ ನಿರ್ಮಲಾ ಈರ್ವರು ಮಕ್ಕಳ ನಾಲ್ವರು ಮೊಮ್ಮಕ್ಕಳ ಸುಖ ಸಂಸಾರಿ ಕೆ.ಪಿ. ರಾವ್ ಅತ್ಯಂತ ಸರಳ ವ್ಯಕ್ತಿ, ಅವಧೂತ. ಎಪ್ಪತ್ತನಾಲ್ಕರ ಹರೆಯದಲ್ಲೂ ನಿತ್ಯ ವಿದ್ಯಾಭ್ಯಾಸ, ನಿತ್ಯ ಶೋಧಕ, ಆಸಕ್ತರಿಗೆ ಸದಾ ಸಹಾಯ ನೀಡಲು ಸಿದ್ಧ.
ಇದೀಗ ಸಮಸ್ತ ಭಾರತೀಯ ಭಾಷೆಗಳಿಗೆ ದತ್ತಾಂಶವನ್ನು ಏಕಕಾಲಕ್ಕೆ ಅನುವಾದಿಸಲು ಅನುವಾದ ತಂತ್ರಾಂಶವನ್ನು ರೂಪಿಸುವ ಅದ್ಭುತ ಆವಿಷ್ಕಾರ – ಕೆ. ಪಿ. ರಾಯರ ವಿಜ್ಞಾನ ಮಹಾಶೋಧನೆ.
19ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ : ಪುಸ್ತಕಗಳ ಬಿಡುಗಡೆ
ಪೊಳಲಿಯಲ್ಲಿ ಜರಗಲಿರುವದಕ್ಷಿಣಕನ್ನಡಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 19 ನೂತನ ಸಾಹಿತ್ಯ ಕೃತಿಗಳನ್ನು ಸಮ್ಮೇಳನದ ಅಂಗವಾಗಿ ಹೊರತರಲು ನಿರ್ಧರಿಸಲಾಗಿದ್ದು, ತತ್ಸಂಬಂಧಿಆಯ್ಕೆ ಸಮಿತಿಯನ್ನುರೂಪಿಸಲಾಗಿದೆ. ಕೃತಿಕಾರರುತಮ್ಮ ಕೃತಿಗಳನ್ನು ಅವರೇ ಮುದ್ರಿಸಬೇಕಾಗುತ್ತದೆ. ಕಥೆ, ಕವನ, ಬಾಲ ಸಾಹಿತ್ಯ, ವಿಮಶರ್ೆ, ಕಾದಂಬರಿ, ನಾಟಕ, ಯಕ್ಷಗಾನ ಇವುಗಳಿಗೆ ಸಂಬಂಧಪಟ್ಟಂತೆಒಂದು ಪ್ರತಿಯನ್ನು, (ಕೈಬರಹ, ಡಿ.ಟಿ.ಪಿ. ಪ್ರತಿ) ಪೊಳಲಿ ನಿತ್ಯಾನಂದಕಾರಂತ, ಕನ್ನಡ ಸಾಹಿತ್ಯ ಸಮ್ಮೇಳನ ಕಛೇರಿ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಕೊಡಿಯಾಲ್ ಬೈಲ್, ಮಂಗಳೂರು-3 ಇಲ್ಲಿಗೆಜುಲೈತಾ.19ರೊಳಗೆ ತಲುಪಿಸಬೇಕು. ಆಯ್ಕೆಯಾದ ಪುಸ್ತಕದ 100 ಮುದ್ರಿತ ಪ್ರತಿಗಳನ್ನು ಸಮ್ಮೇಳನಕ್ಕೆ ಮುನ್ನ ಪರಿಷತ್ತಿಗೆತಂದುಒಪ್ಪಿಸಬೇಕು. ಕೃತಿಕಾರರುತಮ್ಮ ಸಂಪೂರ್ಣ ವಿಳಾಸ ದೂರವಾಣಿ ಸಂಖ್ಯೆ ನಮೂದಿಸಿರಬೇಕು. ಆಯ್ಕೆಯಾದ ಕೃತಿಗಳಿಗೆ ಸೂಕ್ತ ಗೌರವಧನವನ್ನು ಮುದ್ರಿತ ಪ್ರತಿಗಳನ್ನು ಅವಲೋಕಿಸಿ (ಪುಟ ಸಂಖ್ಯೆಗಳನ್ನು) ಗಮನಿಸಿ ಪರಿಷತ್ತಿನ ವತಿಯಿಂದ ನೀಡಲಾಗುವುದು.
Click this button or press Ctrl+G to toggle between Kannada and English