ಬೆಂಗಳೂರು: ಫೇಸ್‌ಬುಕ್‌ನಲ್ಲಿ ಬಾಯಿಗೆ ಬಂದದ್ದನ್ನೆಲ್ಲಾ ಬರೆಯುವುದು, ಮತ್ತೊಬ್ಬರ ಪೋಸ್ಟ್‌ಗಳಿಗೆ ಪ್ರಚೋದನಕಾರಿಯಾಗಿ, ಅವಮಾನಿಸುವ ಅಥವಾ ಗೇಲಿ ಮಾಡುವ ಕಮೆಂಟ್ ಹಾಕಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ.
ಪುರೋಹಿತಶಾಹಿ ಉಪಯೋಗಕ್ಕಿಲ್ಲ ಎನ್ನುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಹೋರಾಟಗಾರ್ತಿ ಪ್ರಭಾ ಎನ್. ಬೆಳವಂಗಲ ಅವರಿಗೆ ಟೀಕೆ ಮಾಡುವ ಭರದಲ್ಲಿ ‘ನಿಮ್ಮಂಥವರನ್ನು ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸಬೇಕು’ ಎಂದು ಕಮೆಂಟ್ ಮಾಡಿದ ವಿ.ಆರ್.ಭಟ್ ಎಂಬುವರ ವಿರುದ್ಧ ಚಂದ್ರ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿ.ಆರ್.ಭಟ್ ಮಾಡಿದ ಕಮೆಂಟ್‌ಗೆ ಫೇಸ್‌ಬುಕ್‌ನಲ್ಲಿ ವ್ಯಾಪಕ ಖಂಡನೆ ಹಾಗೂ ಟೀಕೆ ವ್ಯಕ್ತವಾಗುತ್ತಿದ್ದಂತೆ ತಮ್ಮ ಕಮೆಂಟ್ ಅನ್ನು ಅವರು ಹಿಂಪಡೆದಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಪ್ರಭಾ ಅವರಿಗೆ ಬೆಂಬಲ ಸೂಚಿಸಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೊನೆಗೆ ಸೋಮವಾರ ಮಧ್ಯಾಹ್ನ ಪ್ರಭಾ ಸೇರಿದಂತೆ ಇತರರು ವಿ.ಆರ್.ಭಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರಿನನ್ವಯ ಚಂದ್ರ ಬಡಾವಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ 66ಎ ಹಾಗೂ ಐಪಿಸಿ ಕಲಂ 504,506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಭಾ ಎನ್.ಬೆಳವಂಗಲ ಅವರ ಪೋಸ್ಟ್‌ಗೆ ವಿ.ಆರ್.ಭಟ್ ಹಾಕಿದ ಕಮೆಂಟ್
ವಿ.ಆರ್.ಭಟ್: ಸನ್ಮಾನ್ಯ ಬಹುದೊಡ್ಡ ಹೋರಾಟಗಾರ್ತಿಯವರೇ, ನಿಮ್ಮ ಮಾನವೀಯತೇ ಮುಖಕ್ಕಿಷ್ಟು ಬೆಂಕಿ ಹಾಕ. ನಿಮಗೇನ್ ಗೊತ್ರಿ, ಸನಾತನ ಧರ್ಮದ ತಳಹದಿ, ನಿಮ್ಮಂಥೋರು ಕೇಸರಿ ಬಣ್ಣದ ಬಾವುಟಗಳನ್ನು ಬಳಸುತ್ತಾರೆ ನೋಡಿ ಅದನ್ನು ಮೊದಲು ಬ್ಯಾನ್ ಮಾಡಬೇಕು. ಎದೆಗೆಬಿದ್ದ ಅಕ್ಷರ ಓದಿಕೊಂಡವರದ್ದು ಮತ್ತು ಆ ತರಗತಿಯವರದ್ದೆಲ್ಲ ಇದೆ ಪಾಡು! ಪಾಪ ಅವರಿಗೇನು ಗೊತ್ತು, ತಾವು ಹೇಳಿದ್ದೆ ಸತ್ಯ ಅಂತಾರೆ. ಮೊದಲು ನಿಮ್ಮಂಥಾ ಮಹಿಳೆಯರ ಜುಟ್ಟುಗಳನ್ನು ಹಿಡಿದು ಅತ್ಯಾಚಾರಿಗಳು ಅತ್ಯಾಚಾರ ನಡೆಸಿದರೆ ಸರಿಯಾಗುತ್ತದೆ.
ಎನ್ ಪ್ರಭಾ ಕಂಪ್ಲೇಂಟ್
ರಿಗೆ,
ಠಾಣಾಧಿಕಾರಿಗಳು
ಚಂದ್ರ ಲೇಔಟ್ ಪೊಲೀಸ್ ಠಾಣೆ
ಬೆಂಗಳೂರು
ರಿಂದ,
ಎನ್ ಪ್ರಭಾ
ನಂ: 965
ರುಕ್ಮಿಣಿ ರೆಸಿಡೆನ್ಸ್
3 ಮೈನ್, ಚಂದ್ರಲೇಔಟ್ ಮೊದಲನೇ ಹಂತ
ಚಂದ್ರ ಲೇಔಟ್
ಬೆಂಗಳೂರು
ದೂರವಾಣಿ : 9980787426
ಮಾನ್ಯರೇ,
ವಿಷಯ : ಸಾಮಾಜಿಕ ಅಂತರ್ಜಾಲ ತಾಣ ಫೇಸ್ ಬುಕ್ ನಲ್ಲಿ ಅತ್ಯಾಚಾರ ಬೆದರಿಕೆ ಮತ್ತು ಅತ್ಯಾಚಾರಕ್ಕೆ ಪ್ರಚೋದನೆ ನೀಡಿರುವ ಬಗ್ಗೆ ದೂರು,
ನಾನು ನಂ: 965, ರುಕ್ಮಿಣಿ ರೆಸಿಡೆನ್ಸ್, 3 ಮೈನ್, ಚಂದ್ರಲೇಔಟ್ ಮೊದಲನೇ ಹಂತ, ಚಂದ್ರ ಲೇಔಟ್, ಬೆಂಗಳೂರು ಈ ವಿಳಾಸದಲ್ಲಿ ವಾಸವಿದ್ದು, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದಶರ್ಿಯಾಗಿರುತ್ತೇನೆ. ಹಲವಾರು ಮಹಿಳಾ ಪರ ಹೋರಾಟ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯಳಾಗಿದ್ದೇನೆ. ನಾನು ಪ್ರತಿನಿದಿಸುವ ಭಾರತ ಜ್ಞಾನ ವಿಜ್ಞಾನ ಸಮಿತಿಯು ಜನರಲ್ಲಿ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ತೊಡೆದು ಹಾಕಿ, ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣ ಪೇಸ್ ಬುಕ್ ನಲ್ಲಿಯೂ ಕೂಡಾ ನಾನು ಮತ್ತು ಸಮಿತಿಯ ಸದಸ್ಯರು ಸಕ್ರೀಯರಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದೇ ಉದ್ದೇಶದಿಂದ ನಿನ್ನೆ ಮದ್ಯಾಹ್ನ 2 ಗಂಟೆಯ ವೇಳೆಗೆ “ವೈಜ್ಞಾನಿಕ ಸಂಶೋಧನೆ, ವೈಜ್ಞಾನಿಕ ಚಿಂತನೆ, ಶ್ರಮ ಸಂಸ್ಕೃತಿಯ” ಬಗ್ಗೆ ಸ್ಟೇಟಸ್ ಹಾಕಿದ್ದೆ. (ಫೇಸ್ ಬುಕ್ ಸ್ಟೇಟಸ್ ಬಗ್ಗೆ ಧಾಖಲೆ ಲಗತ್ತಿಸಿದ್ದೇನೆ) ಸ್ಟೇಟಸ್ ಬಗ್ಗೆ ಆರೋಗ್ಯಕರ ಚರ್ಚೆ ನಡೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ನಾನು ಹಾಕಿದ ಸ್ಟೇಟಸ್ ಗೆ ಬೆಂಗಳೂರು ನಿವಾಸಿ ವಿ ಆರ್ ಭಟ್ ಎಂಬಾತ ಫೇಸ್ ಬುಕ್ ನಲ್ಲೇ ಪ್ರತಿಕ್ರಿಯೆ ನೀಡುತ್ತಾ “ಸನ್ಮಾನ್ಯ ಬಹುದೊಡ್ಡ ಓರಾಟಗಾರ್ತಿಯವರೇ, ನಿಮ್ಮ ಮಾನವೀಯ ಮುಖಕ್ಕಷ್ಟು ಬೆಂಕಿ ಹಾಕ, ನಿಮಗೇನ್ ಗೊತ್ರಿ ಸನಾತನ ಧರ್ಮದ ತಳಹದಿ, ನಿಮ್ಮಂತವರು ಕೇಸರಿ ಬಣ್ಣದ ಬಾವುಟಗಳನ್ನು ಬಳಸುತ್ತಾರೆ ನೋಡಿ- ಅದನ್ನು ಮೊದಲು ಬ್ಯಾನ್ ಮಾಡಬೇಕು. ಎದೆಗೆ ಬಿದ್ದ ಅಕ್ಷರ ಓದಿಕೊಂಡವರದ್ದು ಮತ್ತು ಆ ತರಗತಿಯವರದ್ದೆಲ್ಲ ಇದೇ ಪಾಡು. ಪಾಪ ಅವರಿಗೇನು ಗೊತ್ತು – ತಾವು ಹೇಳಿದ್ದೇ ಸತ್ಯ ಅಂತಾರೆ. ಮೊದಲು ನಿಮ್ಮಂತವರ ಜುಟ್ಟು ಹಿಡಿದು ಅತ್ಯಾಚಾರ ನಡೆಸಿದರೆ ಸರಿಯಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾನೆ. (ದಾಖಲೆ ಲಗತ್ತಿಸಿದ್ದೇನೆ). ಈ ರೀತಿಯ ಪ್ರತಿಕ್ರಿಯೆ ನೀಡಿದ ನಂತರವೂ ಆತ ಇದಕ್ಕಿಂತಲೂ ಕೆಟ್ಟದಾದ ಶಬ್ದಗಳಲ್ಲಿ ಮತ್ತೆ ಪ್ರತಿಕ್ರಿಯೆ ನೀಡಿರುತ್ತಾನೆ. ಮಹಿಳಾ ಸಂಘಟನೆಯ ಕಾರ್ಯಕರ್ತರು ಮತ್ತು ಸಮಾನ ಮನಸ್ಕರು ಈತನ ಪ್ರತಿಕ್ರಿಯೆಯನ್ನು ಖಂಡಿಸಿದ್ದರಿಂದ ಆತ ತಕ್ಷಣ ಅದನ್ನು ಡಿಲೀಟ್ ಮಾಡಿದ್ದಾನೆ. ವಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚಾಗಿರುವ ಈ ಸಂಧರ್ಭದಲ್ಲಿ ಅದರ ವಿರುದ್ಧದ ಚಳುವಳಿ ನಡೆಸುತ್ತಲೇ ಬಂದಿರುವ ನಾನು ಮತ್ತು ನಮ್ಮಂತವರ ಮೇಲೆ ಅತ್ಯಾಚಾರ ಮಾಡಬೇಕು ಎಂದು ಕರೆ ಕೊಡುವ ಈತ ಅತ್ಯಾಚಾರದ ಬೆದರಿಕೆ ಮತ್ತು ಅತ್ಯಾಚಾರಕ್ಕೆ ಪ್ರಚೋಧನೆ ನೀಡಿದ್ದಾನೆ. ಮಹಿಳೆಯೋರ್ವಳನ್ನು ಅತ್ಯಾಚಾರ ಮಾಡಬೇಕು ಎಂದು ಹೇಳುವ ವಿಕೃತ ಮನಸ್ಥಿತಿಯು ಮನುಷ್ಯ ಸಮಾಜದ ಕ್ಷಮೆಗೆ ಅನರ್ಹವಾದ ವಿಚಾರವಾಗಿದೆ. ಆದುದರಿಂದ ಪರಿಷ್ಕೃತ ಕಾಯ್ದೆಯ ಪ್ರಕಾರ ಅತ್ಯಾಚಾರದ ಬೆದರಿಕೆ ಮತ್ತು ಅತ್ಯಾಚಾರಕ್ಕೆ ಪ್ರಚೋಧನೆ ನೀಡುವುದೂ ಕೂಡಾ ಅತ್ಯಾಚಾರದಷ್ಟೇ ಘನಘೋರ ಕ್ರಿಮಿನಲ್ ಅಪರಾಧವಾಗಿದ್ದು ನಾನು ಆರೋಪಿಸಿದ ವಿ ಆರ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇನೆ.
Click this button or press Ctrl+G to toggle between Kannada and English
August 8th, 2014 at 23:55:47
ಹತ್ತಿಯಂತಿರಬೇಕು ಮನುಜ
ಕೃತಕ ಲೇಪನವಿರದ ಅತಿಶುಭ್ರ ಬಿಳುಪಿಂದ
ಮಿಂಚುತ್ತಲಿರಬೇಕು ಮನವು
ನಾನತ್ತು ನೀ ನಗಲು
ಅದು ನಿನ್ನ ಸ್ವಾರ್ಥ
ನೀನತ್ತು ನಾ ನಗಲು
ಅದಕಿಲ್ಲ ಅರ್ಥ
ನೀನಾನು ಜೊತೆಗೂಡಿ
ಜಗಕೆ ನಗು ಎಸೆಯದಿರೆ
ಈ ಜಗದಿ ನಾವಿನ್ನು
ಬದುಕುವುದೇ ವ್ಯರ್ಥಾ