ತುಟ್ಟಿಭತ್ತೆ ಪಡೆಯುವುದು ಭಿಕ್ಷೆಯಲ್ಲ-ಹಕ್ಕು: ಪಿ.ಸಂಜೀವ

10:55 PM, Wednesday, July 30th, 2014
Share
1 Star2 Stars3 Stars4 Stars5 Stars
(5 rating, 6 votes)
Loading...
beedi

ಬಂಟ್ವಾಳ : ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ಪಾವತಿಸುವುದಕ್ಕೆ ಅಡ್ಡಿ ಮಾತಾಡುವ ಮಾಲಕರು ಪದೇ ಪದೇ ಸಭೆ ಕರೆದು ಕಾಲಾಹರಣ ಮಾಡುತ್ತಿರುವುದು ಸರಿಯಲ್ಲ, ಬೀಡಿ ಉತ್ಪಾದನೆ ಕುಂಠಿತಗೊಳ್ಳಲು ಸರಕಾರದ ಕೈಗಾರಿಕಾ ವಿರೋಧಿ ನೀತಿ ಕಾರಣ ಎಂಬ ವಾಸ್ತವಾಂಶ ತಿಳಿದಿದ್ದರೂ ಮಾಲಕರು ಸಂಬಂಧಪಟ್ಟ ಸರಕಾರದ ವಿರುದ್ಧ ಧ್ವನಿ ಎತ್ತದೆ ಬೀಡಿ ಕಾರ್ಮಿಕರಿಗೆ ಕಾನೂನು ಪ್ರಕಾರ ಕೊಡಬೇಕಾಗಿದ್ದ ತುಟ್ಟಿಭತ್ತೆಯನ್ನು ಎಪ್ರಿಲ್ ಒಂದರಿಂದಲೇ ಪಾವತಿಸಬೇಕಾಗಿದ್ದರೂ ಅನಾವಶ್ಯಕವಾಗಿ ವಿಳಂಬಿಸುತ್ತಿರುವುದು ಖಂಡನೀಯ, ಆದುದರಿಂದ ಮಾಲಕರು ಕಾರ್ಮಿಕರನ್ನು ಭಿಕ್ಷುಕರೆಂದು ಪರಿಗಣಿಸಬಾರದು ಬದಲಾಗಿ ಕಾರ್ಮಿಕರ ಪ್ರಸ್ತುತ ಸ್ಥಿತಿಗತಿಯನ್ನು ಅರ್ಥೈಸಿಕೊಂಡು ಕೊಡಬೇಕಾದ ಮಜೂರಿಯಲ್ಲಿ ಯಾವುದೇ ಕಡಿತಮಾಡದೆ ಪೂರ್ತಿಮೊತ್ತವನ್ನು ಕೂಡಲೇ ಪಾವಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ(ಸಿ.ಪಿ.ಐ) ಜಿಲ್ಲಾ ಕಾರ್ಯದರ್ಶಿ ಪಿ.ಸಂಜೀವ ಆಗ್ರಹಿಸಿದರು.

ಆವರು ಇಂದು ಫರಂಗಿಪೇಟೆ ಟೆಲಿಫೋನ್ ಬೀಡಿ ಕಂಪೆನಿ ಎದುರು ನಡೆದ ಬೀಡಿ ಕಾರ್ಮಿಕರ ಹಕ್ಕೊತ್ತಾಯ ಚಳವಳಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ನೇತೃತ್ವದಲ್ಲಿ ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ರೂ.21.15 ಪಾವತಿಸುವಂತೆ ಒತ್ತಾಯಿಸಿ ಜಿಲ್ಲಾ ವ್ಯಾಪಿ ಹಕ್ಕೊತ್ತಾಯ ಚಳವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಆಶ್ರಯದಲ್ಲಿ ಬೀಡಿ ಕಾರ್ಮಿಕರ ಹಕ್ಕೊತ್ತಾಯ ಚಳವಳಿ ಮೆ| ಪಿ.ಕೆ.ಟಿ.ಪಿ (ಪ್ರೈ) ಲಿ., ಫರಂಗಿಪೇಟೆ ಕಂಪೆನಿ ಎದುರು ನಡೆಯಿತು.

ಚಳವಳಿಗಾರರನ್ನು ಉದ್ದೇಶಿಸಿ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಪ್ರ.ಕಾರ್ಯದರ್ಶಿ ವಿ.ಸೀತರಾಂ ಬೇರಿಂಜ, ಎಐಟಿಯುಸಿ ಜಿಲ್ಲಾಧ್ಯಕ್ಷರಾದ ವಿ.ಕುಕ್ಯಾನ್, ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಸಂದರ್ಭೋಚಿತವಾಗಿ ಮಾತನಾಡಿದರು.

ಚಳವಳಿಯ ನೇತೃತ್ವವನ್ನು ಎಐಟಿಯುಸಿ ಜಿಲ್ಲಾ ಮುಖಂಡರುಗಳಾದ ಎಚ್.ವಿ.ರಾವ್, ಎಂ.ಕರುಣಾಕರ್, ಡಿ.ಹೆನ್ರಿಲೋಬೋ, ಕೆ.ಈಶ್ವರ್, ಸರಸ್ವತಿ ಕಡೇಶಿವಾಲಯ, ಸುನೀತಾ ತೇವುಕಾಡು, ಸುಲೋಚನ ಕವಾತ್ತಾರು, ಚಿತ್ತಾಕ್ಷಿ, ಶಮಿತಾ, ದಯಾವತಿ ಮುಂತಾದವರು ವಹಿಸಿದ್ದರು.

ಪ್ರಾರಂಭದಲ್ಲಿ ಸಂಘದ ಪ್ರ.ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English