ಬಂಟ್ವಾಳ: ಮಕ್ಕಳ ಅಭಿರುಚಿಗೆ ಪೂರಕವಾಗಿರುವ ಚಿತ್ರ ಕಲೆಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿವೆ, ಸ್ಪರ್ಧೆ ಕೇವಲ ಬಹುಮಾನಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ರೂಪಿಸುವಲ್ಲಿ ಪೂರಕವಾಗಿರರಬೇಕು ಎಂದು ಮಂಗಳೂರು ಶ್ರೀಶಿರ್ಡಿ ಬಾಬ ರಿಯಲ್ ಎಸ್ಟೇಟ್ ಮತ್ತು ಪ್ರೋಮೊಟರ‍್ಸ್ ಮಾಲಕ ಎಚ್ ರತೀಂದ್ರನಾಥ್ ಹೇಳಿದರು ಅವರು ಬಿ.ಸಿ.ರೋಡ್ ಶ್ರೀ ಸಾಯಿ ಕಿಡ್ಸ್ ಝೋನ್ ಪ್ಲೇ ಸ್ಕೂಲ್ ನ ವತಿಯಿಂದ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ದ.ಕ.ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಿ.ಎಸ್.ಉಲ್ಲಾಸ್ ಕುಮಾರ್, ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್ , ಮಂಗಳೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ನಿರ್ದೇಶಕ ರಾಜೇಶ್ ಅಮೀನ್ ಮಂಗಳೂರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಐತಪ್ಪ ಪೂಜಾರಿ ಸ್ವಾಗತಿಸಿ ಆರತಿ ಅಮೀನ್ ವಂದಿಸಿದರು. ಶ್ರೀದರ್ ಅಮೀನ್ ಕಾರ‍್ಯ ಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English