- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ಪುರಭವನ ನವೀಕರಣಕ್ಕೆ ಚಾಲನೆ

Mahabala Marla [1]

ಮಂಗಳೂರು : ಮಂಗಳೂರು ಪುರಭವನಕ್ಕೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪುರಭವನದ ಆಧುನೀಕರಣ ಮತ್ತು ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು.

ಅವರು ಮಂಗಳವಾರ(ಸೆ.16) ಪುರಭವನದಲ್ಲಿ ಮಾತನಾಡಿ, ಪುರಭವನಕ್ಕೆ ಸಂಪೂರ್ಣ ಎ.ಸಿ.ಅಳವಡಿಕೆ,ನೆಲಹಾಸು,ಹೊರಭಾಗದಲ್ಲಿ ಗ್ರಾನೈಟ್ ಅಳವಡಿಕೆ,ಆಕರ್ಷಕ ಬಾಗಿಲು ,ವಿಐಪಿ ಕೊಠಡಿ,ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು,ಡಿಸೆಂಬರ್ 29 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೋ,ಉಪಮೇಯರ್ ಕವಿತಾ,ಅಯುಕ್ತ ಗೋಕುಲದಾಸ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.