- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನವವಿವಾಹಿತೆಯ ಶವ ಮನೆಯ ಬಾವಿಯಲ್ಲಿ ಪತ್ತೆ

Safida [1]

ಕಾಸರಗೋಡು : ನವವಿವಾಹಿತೆಯ ಶವ ಕಾಸರಗೋಡು ಜಿಲ್ಲೆಯ ಅಂಬಲಟ್ಟರ ಎಂಬಲ್ಲಿ ಬಾವಿಯಲ್ಲಿ ಪತ್ತೆಯಾದ ಬಗ್ಗೆ ಶುಕ್ರವಾರ ವರದಿಯಾಗಿದೆ.

ಮೃತ ವಿವಾಹಿತ ಯುವತಿಯನ್ನು ಸಫೀದಾ (19) ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸಫೀದಾ ನಾಪತ್ತೆಯಾಗಿದ್ದರು. ಮನೆಯವರು ಸಫೀದಾಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಅಗ್ನಿ ಶಾಮುಕ ದಳದ ಸಿಬ್ಬಂದಿ ಶವವನ್ನು ಮೇಲಕ್ಕೆತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.