ಹಿರಿಯ ಪತ್ರಕರ್ತ ಎಂ.ವಿ ಕಾಮತ್ ನಿಧನ

6:55 PM, Thursday, October 9th, 2014
Share
1 Star2 Stars3 Stars4 Stars5 Stars
(5 rating, 6 votes)
Loading...
mv Kamath

ಉಡುಪಿ : ನಾಲ್ಕು ದಶಕಗಳ ಸುದೀರ್ಘ‌ ಕಾಲ ಭಾರತೀಯ ಪತ್ರಿಕಾರಂಗಕ್ಕೆ ಅನುಪಮ ಸೇವೆ ಸಲ್ಲಿಸಿರುವ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಮಾಧವ ವಿಟ್ಟಲ ಕಾಮತ್‌ (ಎಂ. ವಿ. ಕಾಮತ್‌‌) ಅವರು ಗುರುವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕೆಲವು ದಿನಗಳ ಹಿಂದೆ ವಾರ್ಧಕ್ಯದ ಕೆಲವು ತೊಂದರೆಗಳಿಂದಾಗಿ ಕಾಮತ್‌ ಅವರನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂಲತಃ ಉಡುಪಿಯವರಾದ ಎಂ. ವಿ. ಕಾಮತ್‌ ಅವರ ಅಂತ್ಯಕ್ರಿಯೆಯು ಗುರುವಾರ ನಡೆಯಲಿದೆ ಎಂದು ಅವರ ಸೋದರ ಸಂಬಂಧಿ ಜಯರಾಮ ಕಾಮತ್‌ ತಿಳಿಸಿದ್ದಾರೆ.

ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯ ವಾಷಿಂಗ್ಟನ್‌ ಬಾತ್ಮೀದಾರರಾಗಿಯೂ ಸೇವೆಸಲ್ಲಿಸಿದ್ದ ಎಂ. ವಿ. ಕಾಮತ್‌ ಅವರು ಉದಯವಾಣಿ ದಿನಪತ್ರಿಕೆಯಲ್ಲಿ “ಪ್ರಚಲಿತ” ಎಂಬ ಅಂಕಣದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.

1921ರಲ್ಲಿ ಉಡುಪಿಯಲ್ಲಿ ಜನಿಸಿದ ಅವರು, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿದ್ದ ಕಾಮತ್‌, ಪ್ರಾರಂಭದ ಐದು ವರ್ಷಗಳ ಕಾಲ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅನಂತರದಲ್ಲಿ ಮಾಧ್ಯಮ ಕ್ಷೇತ್ರದತ್ತ ಒಲವು ತೋರಿಸಿ ಪ್ರಾರಂಭದ ಎರಡು ವರ್ಷಗಳ ಕಾಲ “ದಿ ಸಂಡೇ ಟೈಮ್ಸ್‌ ” (1967-69) ಪತ್ರಿಕೆ ಸಂಪದಾಕರಾಗಿ ಸೇವೆ ಸಲ್ಲಿಸಿದ್ದರು.

ಪತ್ರಿಕಾ ರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿರುವ ಇವರು ತಮ್ಮ ಆತ್ಮಚರಿತ್ರೆ A Reporter at Large ಸೇರಿದಂತೆ 50ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.

ಕಾಮತ್‌ ಅವರು ಮಣಿಪಾಲ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English