ಪಿಲಿಕುಳ ಉದ್ಯಾನವನದಲ್ಲಿ ಎರಡು ಹುಲಿಗಳ ನಡುವೆ ಭೀಕರ ಕಾಳಗ

10:30 PM, Monday, October 13th, 2014
Share
1 Star2 Stars3 Stars4 Stars5 Stars
(5 rating, 4 votes)
Loading...

pilikula Tigers

ಮಂಗಳೂರು : ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಪಾರ್ಕ್‌ ನಲ್ಲಿ ಎರಡು ಹುಲಿಗಳ ನಡುವೆ ಕಾಳಗ ಉಂಟಾಗಿ ಹೆಣ್ಣು ಹುಲಿ ತೀವ್ರ ಗಾಯಗೊಂಡ ಘಟನೆ ಆಕ್ಟೋಬರ್‌ 13ರ ಸೋಮವಾರದಂದು ನಡೆಯಿತು.

ಪಿಲಿಕುಳದ ಉದ್ಯಾನವನದಲ್ಲಿ ಕುಮಾರ್‌ ಹಾಗೂ ಬಂಟಿ ಎಂಬ ಗಂಡು ಮತ್ತು ಹೆಣ್ಣು ಹುಲಿಗಳೆರಡು ಇದ್ದಕ್ಕಿದ್ದಂತೆಯೇ ಪರಸ್ಪರ ಕಚ್ಚಾಟಕ್ಕೆ ಇಳಿದು
ನೋಡುಗರಿಗೆ ಆರಂಭದಲ್ಲಿ ಹುಲಿಗಳ ಆಟದಂತೆ ಕಂಡುಬಂದ ಈ ಕಚ್ಚಾಟ ಬರಬರುತ್ತಾ ಕಾವುಪಡೆಯತು.

ಕುಮಾರ್‌ ಎಂಬ ಗಂಡು ಹುಲಿ ಮತ್ತು ನಾಲ್ಕೂವರೆ ವರ್ಷದ ಬಂಟಿ ಎಂಬ ಹೆಣ್ಣು ಹುಲಿಗಳ ನಡುವೆ ಉಂಟಾದ ಪರಸ್ಪರ ಕಚ್ಚಾಡಿಕೊಂಡ ಇವರಿಬ್ಬರಲ್ಲಿ ಇದೀಗ ತೀವ್ರವಾಗಿ ಗಾಯಗೊಂಡಿರುವ ಬಂಟಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಿಲನದ ಸಂದರ್ಭದಲ್ಲಿ ಹುಲಿಗಳು ಸ್ವಲ್ಪ ಪ್ರಮಾಣದಲ್ಲಿ ವ್ಯಗ್ರವಾಗುವುದು ಸಾಮಾನ್ಯವಾಗಿದ್ದರೂ ಇಲ್ಲಿ ನಡೆದ ಘಟನೆ ಭಿನ್ನವಾಗಿತ್ತು.

ಗಾಯಗೊಂಡಿರುವ ಬಂಟಿಗೆ ಇದೀಗ ಚಿಕಿತ್ಸೆ ನೀಡಲಾಗುತ್ತಿದ್ದು ಅದರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ . ಬಂಟಿಯ ಆರೋಗ್ಯ ಪರಿಸ್ಥಿತಿ ಸುದಾರಿಸಲು ಮಂಗಳವಾರ ಬೆಳಿಗ್ಗೆವರೆಗೆ ಸಮಯದ ಅವಶ್ಯಕತೆಯಿದೆ ಎಂದು ಪಾರ್ಕ್‌ನ ನಿರ್ದೇಶಕರಾದ ಜಯಪ್ರಕಾಶ್‌ ಭಂಡಾರಿಯವರು ಹೇಳಿದ್ದಾರೆ.

ಇಲ್ಲಿದ್ದ ಇತರೇ ಹೆಣ್ಣು ಹುಲಿಗಳನ್ನು ಇದೀಗ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಮತ್ತು ಮುಂಜಾಗರೂಕತಾ ಕ್ರಮವಾಗಿ ಘಟನೆಯ ಸಂದರ್ಭದಲ್ಲಿ ಪಾರ್ಕ್‌ನಲ್ಲಿದ್ದ ಜನರನ್ನೂ ಸಹ ಸುರಕ್ಷಿತ ಜಾಗಕ್ಕೆ ಕಳುಹಿಸಲಾಗಿತ್ತು .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English