ಮಂಗಳೂರು : ಭಾರತೀಯ ಕ್ರಾಂತಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಸುಪ್ರಿಂ ಕೋಟ್೯ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿದ್ದ ಅಬ್ದುಲ್ ನಾಸಿರ್ ಮದನಿಗೆ ಜಾಮೀನು ನೀಡಿರುವುದನ್ನು ಖಂಡಿಸಿದ್ದಾರೆ. ಆ ಬಗ್ಗೆ ಸೋಮವಾರ ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.
1992 ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಹತ್ಯೆಗೆ ಸಂಚು, 1998 ಕೊಯಂಬುತ್ತೂರು ಬಾಂಬ್ ಸ್ಪೋಟ, 2008 ಬೆಂಗಳೂರು ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧಿಯಾಗಿದ್ದ ಅಬ್ದುಲ್ ನಾಸಿರ್ ಮದನಿಗೆ ಸುಪ್ರಿಂ ಕೋಟ್೯ ನೀಡಿರುವ ಜಾಮೀನು ರದ್ದುಪಡಿಸಬೇಕು ಎಂದು ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ .
ಮಸೀದಿ ಧರ್ಮ ಗುರುಗಳಿಗೆ ರಾಜ್ಯ ಸಕಾ೯ರ ರೂ. 3400 ಮಾಸಿಕ ವೇತನ ನೀಡುವ ನಿಧಾ೯ರ ಹಿಂತೆಗೆದುಕೊಳ್ಳಬೇಕು. ದೇಶಕ್ಕೆ ಯಾವುದೇ ಕೊಡುಗೆ ನೀಡದ ಮದರಸಾಗಳಿಗೆ ರೂ. 100 ಕೋಟಿ ಅನುದಾನ ಪ್ರಕಟಿಸುವ ಪ್ರಧಾನಿ ನರೇಂದ್ರ ಮೋದಿ, ಅದನ್ನು ಮರುಪರಿಶೀಲಿಸಬೇಕು. ಹಿಂದು ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಕಾವೂರು ಇನ್ಸ್ಪೆಕ್ಟರನ್ನು ಪೊಲೀಸ್ ಇಲಾಖೆಯಿಂದ ವಜಾ ಮಾಡಬೇಕು. ಸಾಧ್ವಿ ಪ್ರಜ್ಞಾ ಸಿಂಗ್, ಬಾಪು ಆಸಾರಾಮ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.23ರಂದು ಐದು ಸಾವಿರ ವಿಧವಾ ಮಹಿಳೆಯರನ್ನು ಸೇರಿಸಿ ವಿಧವೆ ಅರ್ಚಕಿಯರಿಂದ ಲಕ್ಷ್ಮೀಪೂಜೆ ನಡೆಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ
ತಾಂತ್ರಿಕ ವಿಧಿ ವಿಧಾನ ಮೂಲಕ ದೇವರ ಪ್ರತಿಷ್ಠೆ ಮಾಡಿದರೆ ಅಡ್ಡಿ ಇಲ್ಲ, ವೈದಿಕ ವಿಧಿ ವಿಧಾನಗಳಂತೆ ಪ್ರತಿಷ್ಠೆ ಮಾಡಿದ್ದರೆ, ಪೂಜೆ ಮಾಡುವವರಿಗೆ ಪಂಚಶುದ್ಧಿ, ಪೂಜಾ ವಿಧಾನ ಗೊತ್ತಿರಬೇಕು. ಅದಿಲ್ಲದ ಮಹಿಳೆಯರು ಪೂಜೆ ಮಾಡುವಂತಿಲ್ಲ. ದೇವರ ಪ್ರತಿಷ್ಠೆ ಬಗ್ಗೆ ಜನಾರ್ದನ ಪೂಜಾರಿ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.
ಹಿಂದು ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜೇಶ್ ಪೂಜಾರಿ, ಸಂಘಟನಾ ಕಾರ್ಯದಶಿ೯ ಧಮೇ೯ಂದ್ರ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರವಣ್ ಕುಮಾರ್, ಜಿಲ್ಲಾ ಕಾಯಾ೯ಧ್ಯಕ್ಷ ಚೇತನ್ ಮಲ್ಯ, ರಾಜ್ಯ ಯುವ ವಿಭಾಗದ ಪ್ರಧಾನ ಕಾರ್ಯದಶಿ೯ ರೋಹಿದಾಸ್, ಉಪಾಧ್ಯಕ್ಷ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English