ಬ್ಯುಟೀಷಿಯನ್ ಗೆ ರಾಡ್‌ನಿಂದ ಹಲ್ಲೆ ನಡೆಸಿದ ಗೋವಾ ದಂಪತಿಗಳು

12:30 AM, Saturday, November 1st, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Surabhi
ಸುರತ್ಕಲ್‌ : ಗೋವಾ ಮೂಲದ ದಂಪತಿಗಳು ಸುರತ್ಕಲ್‌ ನಲ್ಲಿರುವ ಸುರಭಿ ಬ್ಯೂಟಿಪಾರ್ಲರ್‌ ಗೆ ಫೆಶಿಯಲ್‌ ಮಾಡಿಸಿ ಕೊಳ್ಳಲು ಬಂದಿದ್ದು ಆದಾದ ಬಳಿಕ ದಂಪತಿಗಳು ಬ್ಯುಟೀಷಿಯನ್ ಗೆ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಹಲ್ಲೆಗೊಳಗಾದ ಯುವತಿ ಕಾಂತೇರಿ ಧೂಮಾವತಿ ದೈವಸ್ಥಾನದ ಕಟ್ಟಡದಲ್ಲಿ ಸುರಭಿ ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ಅಕ್ಷತಾ (19) ಎಂದು ಗುರುತಿಸಲಾಗಿದೆ.

ಫೆಶಿಯಲ್‌ ಮಾಡಿಕೊಳ್ಳಲೆಂದು ಬಂದ ಹೆಂಗಸು ಫೆಶಿಯಲ್‌ ಮಾಡಿಕೊಂಡ ಬಳಿಕ ಹಣ ಕೇಳಿದಾಗ ಆಕೆಯ ಪತಿ ಅಕ್ಷತಾ ಮೇಲೆ ರಾಡ್‌ ನಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಆಭರಣವನ್ನು ಕಸಿಯಲು ಯತ್ನಿಸಿದ್ದಾನೆ.

ಈ ವೇಳೆ ಅಕ್ಷತಾ ಬೊಬ್ಬಿಟ್ಟಾಗ ದಂಪತಿಗಳಿಬ್ಬರು ಹೆದರಿ ಓಡಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದರು.

ಈ ದಂಪತಿಗಳು ಕಳೆದೊಂದು ವಾರದಿಂದ ಮಂಗಳೂರಿನ ಲಾಡ್ಜ್ ಒಂದರಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ.

ಸುರತ್ಕಲ್‌ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English