- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಡುಪಿ ಹಿಂದೂ ಸಮಾಜೋತ್ಸವಕ್ಕೆ ವ್ಯಾಪಕ ಬಂದೋಬಸ್ತ್

udupi Samavesha [1]

ಉಡುಪಿ: ಕುಂಜಿಬೆಟ್ಟು ಎಂ.ಜಿ.ಎಂ ಮೈದಾನದಲ್ಲಿ ಮಾ.9 ಸೋಮವಾರದಂದು ನಡೆಯಲಿರುವ `ವಿರಾಟ್ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮಕ್ಕೆ ಸಿದ್ದತೆ ನಡೆಯುತ್ತಿದ್ದು ಈ ವೇಳೆ ಯಾವುದೇ ಅಹಿತಕರ ಘಟನೆಗಳಾಗದಂತೆ ಉಡುಪಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ.

ಒಂದು ಲಕ್ಷಕ್ಕೂ ವಿಕ್ಕಿ ಜನರು ಭಾಗವಹಿಸುವ ನೀರಿಕ್ಷೆ ಇದೆ. ಶೋಭಯಾತ್ರೆಯು ಅಂದು ಮಧ್ಯಾಹ್ನ 2 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಲಯನ್ಸ್ ಸರ್ಕಲ್, ಡಯಾನ ಸರ್ಕಲ್, ಕೆ.ಎಂ ಮಾರ್ಗ, ಹನುಮಾನ್ ವೃತ್ತ, ಸರ್ವಿಸ್ ಬಸ್ಸು ನಿಲ್ದಾಣ, ಶೀರಿಬೀಡು ಜಂಕ್ಷನ್, ಸಿಟಿ ಬಸ್ಸು ನಿಲ್ದಾಣ, ಕಲ್ಸಂಕ, ಕಡಿಯಾಳಿ, ಕುಂಜಿಬೆಟ್ಟು, ಮಾರ್ಗವಾಗಿ ಕುಂಜಿಬೆಟ್ಟು ಎಂ.ಜಿ.ಎಂ ಮೈದಾನದ ಸಭಾ ಕಾರ್ಯಕ್ರಮ ಸ್ಥಳಕ್ಕೆ ತಲುಪಲಿದೆ. ಈ ಶೋಭಯಾತ್ರೆಯ ನಂತರ ಸಭಾ ಕಾರ್ಯಕ್ರಮವು ಕುಂಜಿಬೆಟ್ಟು ಎಂಜಿಎಂ ಮೈದಾನದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ನಡೆಯಲಿದೆ.

6 ಮಂದಿ ಡಿವೈಎಸ್ಪಿ, 20 ಸರ್ಕಲ್ ಇನ್ಸ್‌ಪೆಕ್ಟರ್, 75 ಉಪನಿರೀಕ್ಷಕರು (ಎಸ್ಸೈ), 145 ಸಹಾಯಕ ಉಪನಿರೀಕ್ಷಕರು (ಎ.ಎಸ್ಸೈ), 1005 ಪೊಲೀಸ್ ಕಾನ್ಸ್‌ಟೇಬಲ್, 48 ಡಬ್ಲ್ಯೂ.ಪಿ.ಸಿ. ಹಾಗೂ 100 ಮಂದಿ ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ 15 ಕೆ.ಎಸ್.ಆರ್.ಪಿ., ಮತ್ತು 24 ಡಿ.ಎ.ಆರ್. ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲಿದೆ.

ಜಿಲ್ಲೆಗಳಲ್ಲಿರುವ ಕ್ಯೂಆರ್ಟಿ ತಂಡಗಳನ್ನು ಈ ಸಂದರ್ಭ ಬಳಸಿಕೊಳ್ಳಲಾಗುವುದು. ಎಲ್ಲೆಂದರಲ್ಲಿ ಸಿಸಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ಗಡಿಭಾಗ ಸೇರಿದಂತೆ ಆಯಕಟ್ಟಿನ ಇತರೆಡೆಗಳಲ್ಲಿ 22 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುವುದು.

ಮಾ.9 ಸೋಮವಾರ ಬೆಳಿಗ್ಗೆ 6.00 ಗಂಟೆಯಿಂದ ಮಾ.10 ರಂದು ಬೆಳಿಗ್ಗೆ 6.00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಪಾನ ನಿಷೇಧ ಜ್ಯಾರಿಗೊಳಿಸಲಾಗಿದೆ.