- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯ ಬಜೆಟ್ : ಗ್ರಾಮೀಣ ಅಭಿವೃದ್ಧಿಯ ಜೊತೆಗೆ ನಗರ ಅಭಿವೃದ್ಧಿಗೆ ವಿಶೇಷ ಆದ್ಯತೆ

ರಾಜ್ಯ ಬಜೆಟ್ [1]ಬೆಂಗಳೂರು : ರಾಜ್ಯ ಸರಕಾರದ ಆಡಳಿತಾವದಿಯ ಎರಡೂವರೆ ವರ್ಷದ ಅವದಿಯಲ್ಲಿ ಸತತವಾಗಿ ಆರನೇ ಬಾರಿಗೆ  ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನ್ನದಾತನ ಹೊಲದಲ್ಲಿ ಚಿನ್ನದ ಹೊಳೆಯನ್ನೇ ಹರಿಸಿದ್ದಾರೆ.
ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ ಎಂದಿಗೂ ಅನ್ನದಾತರ ಪರ ಎಂದ ಸಿಎಂ, ರೈತರ ನಾಡಗೀತೆ ‘ನೇಗಿಲ ಹಿಡಿದು.. ಉಳುವ ಯೋಗಿಯ..’ ಸಾಲುಗಳನ್ನು ಹೇಳಿದರು. ನಂತರ ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೆ ಮೇಲು ಎನ್ನುತ್ತಾ ಆಯವ್ಯಯ ಪತ್ರವನ್ನು ಸದನದಲ್ಲಿ ಮಂಡಿಸಿದರು.
ಕೃಷಿ ಬಜೆಟ್ ಮಂಡಿಸಿದ ಬಳಿಕ  ಸಾಮಾನ್ಯ ಬಜೆಟ್ ಮಂಡಿಸಿದರು.

ಯಡಿಯೂರಪ್ಪ ಅವರು ಮಂಡಿಸಿದ ವಿಶೇಷ ಮುಂಗಡಪತ್ರದ ಮುಖ್ಯಾಂಶಗಳು ಇಂತಿವೆ.
* ಕೃಷಿ ಆಯವ್ಯಯ ಗಾತ್ರ 85,319ಕೋಟಿ ರು
* ಯೋಜನಾ ವೆಚ್ಚ 47,289ಕೋಟಿ ರು
* ಶೇ.1ರ ಬಡ್ಡಿದರದಲ್ಲಿ ರೈತರಿಗೆ ಕೃಷಿ ಸಾಲ
* 500ಕೋಟಿ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ
* ಕೆರೆಗಳ ಪುನರುಜ್ಜೀವನಕ್ಕೆ 1000 ಕೋಟಿ ರು
* ಸಣ್ಣ ಬಂದರು ನಿರ್ಮಾಣಕ್ಕೆ 100 ಕೋಟಿ
* ರೈತರ ಪಂಪ್ ಸೆಟ್ ಗಳಿಗೆ 12ದಶಲಕ್ಷ ಯೂನಿಟ್ ವಿದ್ಯುತ್ ಪೂ
* ರೈತರ ಮಕ್ಕಳ ಶಿಕ್ಷಣಕ್ಕೆ ಸಾಲ.
* ಕೃಷಿ ಮಾರಾಟ ಮಂಡಳಿಗೆ 400 ಕೋಟಿ ರು. ಸಾಲ ಪಡೆಯಲು ಅವಕಾಶ, 40 ಕೋಟಿ ರು. ಅನುದಾನ.
* 12.98 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರ ಹೆಚ್ಚಳ.
* ಜೈನು ಸಾಕಾಣಿಕೆಗೆ ಪ್ರೋತ್ಸಾಹ ಧನ
* ನೀರಾವರಿ ವಲಯಕ್ಕೆ 13,587 ಕೋಟಿ ರು
* ಸಾವಯವ ಕೃಷಿಗೆ 200 ಕೋಟಿ ರು ಅನುದಾನ
* ಪುಷ್ಪೋದ್ಯಮಕ್ಕೆ 10 ಕೋಟಿ ರು ಅನುದಾನ
* ಶಿಥೀಲಿಕರಣ ಘಟಕಗಳ ನಿರ್ಮಾಣ
* ಹನಿ ನೀರಾವರಿ ಯೋಜನೆಗೆ 100 ಕೋಟಿ ರು
* 500 ಕೋಟಿ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ
* ಗುಣಮಟ್ಟದ ವಿದ್ಯುತ್ ಪೂರೈಕೆಗೆ 3900 ಕೋಟಿ ರು
* ಕೃಷಿ ಯಂತ್ರೋಪಕರಣ ಖರೀದಿಗೆ 100 ಕೋಟಿ
* 30 ಜಿಲ್ಲೆಗಳಲ್ಲಿ ಭೂ ಚೇತನ ಕಾರ್ಯಕ್ರಮ ಜಾರಿ
* 1 ಲಕ್ಷ ಅಕ್ರಮ ಪಂಪ್ ಸೆಟ್ ಸಕ್ರಮ
* 50 ಮೀನು ಮಾರುಕಟ್ಟೆ ಸ್ಥಾಪನೆಗೆ 5 ಕೋಟಿ
* 10 ಲಕ್ಷ ರೈತ ಕುಟುಂಬ ಅಭಿವೃದ್ಧಿಗೆ ಸುವರ್ಣ ಭೂಮಿ ಯೋಜನೆ
* ಸುವರ್ಣಭೂಮಿ ಯೋಜನೆಗೆ 1000 ಕೋಟಿ ರು ಅನುದಾನ
* ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಚಾಲನೆ
* ಜೈವಿಕ ಇಂಧನಕ್ಕೆ 125 ಕೋಟಿ ರು
* ಯಾಂತ್ರಿಕ ಮೀನುಗಾರಿಕೆಗೆ ಡೀಸೆಲ್ ಪೂರೈಕೆ ಹೆಚ್ಚಳ
* ತೀರ್ಥಹಳ್ಳಿಯ ಪುರುಷೋತ್ತಮರಾವ್ ಗೆ ಸಾವಯವ ಕೃಷಿ ರತ್ನ ಪ್ರಶಸ್ತಿ ಘೋಷಣೆ
* ಕಳೆದ ಬಜೆಟ್ ಗಾತ್ರ 70,063 ಕೋಟಿ ರು, ಶೇ. 21.7ರಷ್ಟು ಹೆಚ್ಚಳ
* ಜೂನ್‌ನಲ್ಲಿ ಜಾಗತಿಕ ಕೃಷಿ ಬಂಡವಾಳ ಸಮ್ಮೇಳನ
* ಕೃಷಿ ವಿವಿಗಳಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್ ಆರಂಭ
* ಒಂದು ಲಕ್ಷ ಹೆಕ್ಟೇರ್ ಕಾಡಿನಲ್ಲಿ ಜೈವಿಕ ಇಂಧನ ಸಸಿ ನೆಡುತೋಪು
* ಅರಣ್ಯ ಕೃಷಿ ಪ್ರೋತ್ಸಾಹಕ್ಕೆ ಐದು ವರ್ಷಗಳ ಯೋಜನೆ
* ಹೆಚ್ಚುವರಿ ಬೀಜೋತ್ಪಾದನೆಗೆ 5 ಕೋಟಿ
* ಭತ್ತ, ಕಬ್ಬು ಬೆಳೆ ಹೆಚ್ಚಳಕ್ಕೆ 2 ಕೋಟಿ ಅನುದಾನ
* ಹಸಿರು ಹೊನ್ನು, ಬರಡು ಬಂಗಾರ ಯೋಜನೆ
* ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಧನ
* ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ
* ಹಳದಿರೋಗ ನಿಯಂತ್ರಣಕ್ಕೆ 3 ಕೋಟಿ ರು
* ಪುಷ್ಪೋದ್ಯಮ ಅಭಿವೃದ್ಧಿಗೆ ವಿಶೇಷ ವಲಯ ಸ್ಥಾಪನೆ
* ಶೀತಲ ಕೇಂದ್ರ ವಿದ್ಯುತ್ ದರದಲ್ಲಿ 2 ರೂ. ಇಳಿಕೆ
* ಎಪಿಎಂಸಿ ಅಭಿವೃದ್ಧಿಗೆ 10 ಕೋಟಿ ರು
* ಚಾಮರಾಜನಗರ, ತಿಪಟೂರಿನಲ್ಲಿ ಕೊಬ್ಬರಿ ಸಂಸ್ಕರಣಾ ಘಟಕ
* ಬೃಹತ್ ಆಧುನಿಕ ಸಗಟು ಮಾರಾಟ ಕೇಂದ್ರ ಸ್ಥಾಪನೆ
* ಪಶು ಆಸ್ಪತ್ರೆಗೆ ಬಲವರ್ಧನೆ ಅಭಿವೃದ್ಧಿಗೆ 18.7ಕೋಟಿ ರು
* ಗ್ರಾಮೀಣ ವಿದ್ಯಾರ್ಥಿಗಳಿಗೆ ಆದಾಯ ಪ್ರಮಾಣ ಪತ್ರ ಕಡ್ಡಯವಿಲ್ಲ
* ಪಶು ಆಹಾರ ಘಟಕಕ್ಕೆ 10 ಕೋಟಿ
* ಮಂಡ್ಯ, ಬೆಳಗಾವಿಯ ಸಕ್ಕರೆ ಸಂಶೋಧನಾ ಕೇಂದ್ರಕ್ಕೆ 2.5 ಕೋಟಿ ರು ನೆರವು ಹೆಚ್ಚಳ
* ಪುಷ್ಪ ಮಾರಾಟ ವ್ಯಾಟ್ ತೆರಿಗೆಯಿಂದ ಮುಕ್ತ, ಪುಷ್ಪ ಹರಾಜು ಕೇಂದ್ರಕ್ಕೆ 10 ಕೋಟಿ
* ನಿರಂತರ ಜ್ಯೋತಿ ಯೋಜನೆಗೆ 500 ಕೋಟಿ ರು
* ಪಶುಗಳಿಗೂ ಆಂಬುಲೆನ್ಸ್ ಯೋಗ
* 50 ಸಾವಿರ ಜೇನು ಪೆಟ್ಟಿಗೆ ವಿತರಣೆ
* ಬಾಗಲಕೋಟೆ ತೋಟಾಗರಿಕಾ ಕಾಲೇಜಿಗೆ 60 ಕೋಟಿ ರು
* ಪ್ರೊ. ನಂಜುಂಡಸ್ವಾಮಿ ಹೆಸರಿನಲ್ಲಿ ಕೃಷಿರತ್ನಪ್ರಶಸ್ತಿ (10 ಸಾವಿರ ಮೊತ್ತ)
* ಪಶು ಸಂಗೋಪಣೆ, ಮೀನುಗಾರಿಕೆಗೆ 1077ಕೋಟಿ ರು
* ಚಾಮರಾಜನಗರ ಜಿಲ್ಲೆಗೆ ಕಬಿನಿ ನೀರು ಹರಿಸಲು 100 ಕೋಟಿ ರು
* ರಾಜ್ಯದ ಎಲ್ಲಾ ಹಳೆ ಅಣೆಕಟ್ಟುಗಳ ಅಭಿವೃದ್ಧಿ
* 100 ತಾಲೂಕುಗಳಳಲ್ಲಿ 100 ಉಗ್ರಾಣ ಸ್ಥಾಪನೆ
* ಆಂತರಿಕ ಉತ್ಪನ್ನದಲ್ಲಿ ಶೇ. 17ರಷ್ಟು ಹೆಚ್ಚಳ
* ರಾಜ್ಯದ ವಿತ್ತೀಯ ಮಾಹಿತಿ ಮೂರು ತಿಂಗಳಿಗೊಮ್ಮೆ ಆರ್ಥಿಕ ಇಲಾಖೆ ವೆಬ್ ನಲ್ಲಿ ಪ್ರಕಟ
* ಕೃಷಿ ರತ್ನ ಪ್ರಶಸ್ತಿ ವಿಜೇತ ಪುರುಷೋತ್ತಮ ರಾವ್ ಪ್ರತಿಷ್ಠಾನಕ್ಕೆ 10 ಲಕ್ಷ ರು
* ಮೈಶುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿ
* ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಗೆ 4345 ಕೋಟಿ ತು
* ಮಲ್ನಾಡ್ ಗಿಡ್ಡ ಪಶು ತಳಿ ಅಭಿವೃದ್ಧಿ ಭರವಸೆ
* ಕುಂದಾಪುರದಲ್ಲಿ ಕೇರಳ ಮಾದರಿ ಒಳ ಬಂದರು ನಿರ್ಮಾಣಕ್ಕೆ 40 ಕೋಟಿ
ಸಾಮಾನ್ಯ ಬಜೆಟ್
*ಗುಲ್ಬರ್ಗಾ ವಿಘ್ನೇಶ್ವರ ಲಾ ಕಾಲೇಜಿಗೆ 1 ಕೋಟಿ ರೂ.
*ಬೆಂಗಳೂರು ವಕೀಲರ ಸಂಘದ ಕಟ್ಟಡಕ್ಕೆ 1 ಕೋಟಿ
*ಬೆಂಗಳೂರು ಬಾರ್ ಕೌನ್ಸಿಲ್ ಕಟ್ಟಡಕ್ಕೆ 2 ಕೋಟಿ
*ನೆಲಮಂಗಲದವರೆಗೆ ಲೋಕಲ್ ರೈಲು
*ನ್ಯಾಯಾಲಯ ಮೂಲ ಸೌಕರ್ಯಕ್ಕೆ 27 ಕೋಟಿ
*ಬಾರ್ ಅಸೋಸಿಯೇಷನ್‌ಗೆ ಜೆರಾಕ್ಸ್ ಯಂತ್ರ
*ಜೈಲು ಭದ್ರತಾ ಉಪಕರಣಗಳಿಗೆ 8 ಕೋಟಿ
*1060 ಸಿಬ್ಬಂದಿ ಕೈಗಾರಿಕಾ ಭದ್ರತಾ ಪಡೆ ರಚನೆ
*ಪೊಲೀಸ್ ಠಾಣೆ ಕಾಮಗಾರಿಗಳಿಗೆ 25 ಕೋಟಿ
*ಬಿಬಿಎಂಪಿಯಲ್ಲಿ ಯೋಜನಾ ನಿರ್ವಹಣಾ ಘಟಕ
*ಖಾಸಗಿ ಸಹಭಾಗಿತ್ವದಲ್ಲಿ 4 ಬೃಹತ್ ಆಸ್ಪತ್ರೆ
*ಬೆಂಗಳೂರಿಗೆ 4770 ಕೋಟಿ ರೂ.
*1ನೇ ಹಂತದ ಮೆಟ್ರೋಗೆ 630 ಕೋಟಿ
*ಹೆಬ್ಬಾಳ-ಜೆಪಿ ನಗರ ಮಾನೋ ರೈಲು
*ಜಲಮಂಡಳಿ ಯೋಜನೆಗೆ 1150 ಕೋಟಿ ರೂ.
*ಬಿಬಿಎಂಪಿಗೆ 350 ಕೋಟಿ ರೂ.
*ಮಿನರ್ವ್ ವೃತ್ತ-ಹಡ್ಸನ್ ವೃತ್ತ ಫ್ಲೈ ಓವರ್
*ತ್ಯಾಜ್ಯವಸ್ತು ವಿಲೇವಾರಿಗೆ ಒತ್ತು
*ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರಕ್ಕೆ 150 ಕೋಟಿ ರೂ.
*ಬಿಸಿನೆಸ್ ಪಾರ್ಕ್‌ಗೆ 5 ಸಾವಿರ ಕೋಟಿ
*ರಾಷ್ಟ್ರೀಯ ಪಟುಗಳಿಗೆ ತರಬೇತಿ ಭತ್ಯೆ
*ಆಧುನಿಕ ತರಬೇತಿಗೆ 10 ಕೋಟಿ
*ಶಿವಮೊಗ್ಗ ಯೋಗ ಕೇಂದ್ರಕ್ಕೆ 25 ಲಕ್ಷ
*ಶಿರಸಿ ನಿಸರ್ಗ ಟ್ರಸ್ಟ್‌ಗೆ 25 ಲಕ್ಷ
*ವಿರಾಜಪೇಟೆ ಒಳಾಂಗಣ ಸ್ಟೇಡಿಯಂಗೆ 5 ಕೋಟಿ
*ಶಿವಮೊಗ್ಗ ಕ್ರೀಡಾ ಸಮುಚ್ಚಯಕ್ಕೆ 10 ಕೋಟಿ
*ಬಳ್ಳಾರಿ ಕ್ರೀಡಾ ಸಮುಚ್ಛಯಕ್ಕೆ 5 ಕೋಟಿ
*ಉಚಿತ ಬೈಸಿಕಲ್ ಯೋಜನೆಗೆ 250 ಕೋಟಿ ರೂ.