ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳವು ಚತುರ್ವಿದದಾನಗಳಿಗೆ ಹೆಸರುವಾಸಿಯಾಗಿದ್ದು ಆರೋಗ್ಯದಾನವು ಅನೂಚಾನವಾಗಿ ನಡೆಯುತ್ತಾ ಬಂದಿದೆ. ಇತ್ತೀಚೆಗೆ ಜರುಗಿದ ಶ್ರೀ ಮಂಜುನಾಥ ಸ್ವಾಮಿಯ ಅಷ್ಟಬಂಧ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಶ್ರೀ ಕೇತ್ರದಲ್ಲಿ ಜರಗಿದ ಆರೋಗ್ಯ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವೂ ಒಂದು.
ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಣ್ಣಿನ ಆಸ್ಪತ್ರೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಜರಗಿದ ಈ ಶಿಬಿರದಲ್ಲಿ 375 ಮಂದಿ ಉಚಿತ ತಪಾಸಣೆಯ ಪ್ರಯೋಜನ ಪಡೆದುಕೊಂಡರು. 45 ಮಂದಿ ಕಣ್ಣಿನ ಪೊರೆ ಚಿಕಿತ್ಸೆಯನ್ನು ಮಂಗಳೂರು ಧರ್ಮಸ್ಥಳ ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ. 158 ಮಂದಿಗೆ ಓದುವ ಕನ್ನಡಕವನ್ನು ನೀಡಲಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್‌ನ ಟ್ರಸ್ಟೀಯಾಗಿರುವ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರು ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ದೋಷವುಳ್ಳ 71 ಮಂದಿಗೆ ಬೈಫೋಕಲ್ ಕನ್ನಡಕವನ್ನು ವಿತರಿಸಿದರು.
ಒಂದು ದಿನದ ಈ ಶಿಬಿರಕ್ಕೆ ಅಂದಾಜು ಖರ್ಚು ರೂ 4,43,000/-ವನ್ನು ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟಿನಿಂದ ಭರಿಸಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಶಿಶುಪಾಲ ಪೂವಣಿಯವರು ತಿಳಿಸಿದರು.
Click this button or press Ctrl+G to toggle between Kannada and English