- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಆಟೋ ರಿಕ್ಷಾ ಚಾಲಕರ ದಿನ ಆಚರಣೆ

Auto drivers day [1]

ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜು ಹಾಗೂ ಅವರ ಪೂರ್ವ ವಿದ್ಯಾರ್ಥಿ ಸಂಘ, ಮಂಗಳೂರಿನಲ್ಲಿ ಆದಿತ್ಯವಾರ, 29 ಮಾರ್ಚ್, 2015 ರಂದು ಆಟೋ ರಿಕ್ಷಾ ಚಾಲಕರ ದಿನವನ್ನು ಕಾಲೇಜಿನ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಸುಮಾರು 45 ರಿಕ್ಷಾ ಚಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಇವರಲ್ಲಿ ಮೂವರು ರಿಕ್ಷಾ ಚಾಲಕರನ್ನು ಸನ್ಮಾನಿಸಲಾಯಿತು. ಇವರಲ್ಲಿ ಮೋಂತು ಲೋಬೋ ಅವರನ್ನು ಕುಡ್ಲ ಆಟೋ ರಾಜ, ಕೆ. ಮೊಹಮ್ಮದ್ ಅವರನ್ನು ಕುಡ್ಲ ಆಟೋ ಆತ್ಮ ಭಾಂಧವ ಹಾಗೂ ಸುಂದರ್ ಶೆಟ್ಟಿ ಅವರನ್ನು ಕುಡ್ಲ ಆಟೋ ಮಿತ್ರ ಎಂಬ ಬಿರುದು ಹಾಗೂ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ದ.ಕ. ಜಿಲ್ಲೆಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಬೆಸೆಂಟ್ ಸಂಧ್ಯಾ ಕಾಲೇಜಿನ ಈ ಕಾರ್ಯಕ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಶ್ರೀ. ಉದಯ ನಾಯಕ್, ಸಹಾಯಕ ಆಯುಕ್ತರು, ನಗರ ಸಂಚಾರಿ ಪೋಲಿಸ್ ವಿಭಾಗ, ಶ್ರೀ ಸುನೀಲ್ ಕುಮಾರ್ ಬಜಾಲ್, ಸಿ.ಪಿ.ಐ (ಎಮ್), ಶ್ರೀ ಮನೇಲ್ ಅಣ್ಣಪ್ಪ ನಾಯಕ್, ಬೆಸೆಂಟ್ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ಶ್ರೀ ಕುಡುಪಿ ಜಗದೀಶ್ ಶೆಣೈ, ಬೆಸೆಂಟ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾರ್ಮೆಲೀಟಾ ಗೋವಿಯಸ್ ಆಟೋ ರಿಕ್ಷಾ ಚಾಲಕರ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದ ಸಂಯೋಜನಾ ಅಧಿಕಾರಿ ಆಗಿರುವ ಶ್ರೀ. ಈಶ್ವರ್ ಪೂಜಾರಿ, ಬಂದಂತಹ ಅಥಿತಿಗಳನ್ನು ಸ್ವಾಗತಿಸಿದರು.

ಪ್ರೋಪೆಸರ್ ಡಾ. ಸತೀಸ್ ಕುಮಾರ್ ಶೆಟ್ಟಿ, ಶ್ರೀ. ಮಹಾವೀರ, ಶ್ರೀ. ಗೋಪಾಲ್ ರೆಡ್ಡಿ ಇವರು ರಿಕ್ಷಾ ಚಾಲಕರ ಬಗ್ಗೆ ಗೌರವದ ಮಾತುಗಳನ್ನಾಡಿದರು ಮತ್ತು ಶ್ರೀ ವಿಶ್ವನಾಥ್ ಆಚಾರ್, ಅರ್ಥಶಾಸ್ತ್ರ ವಿಭಾಗ, ಇವರು ವಂದನಾರ್ಪಣೆಗೈದರು.

ರಿಕ್ಷಾ ಚಾಲಕರ ಗೌರವಾರ್ಥ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.