‘ಮಾನವ ಹಕ್ಕುಗಳ ಮಹತ್ವ’ದ ಬಗೆಗಿನ ವಿಚಾರ ಸ೦ಕಿರಣ

12:23 AM, Wednesday, April 1st, 2015
Share
1 Star2 Stars3 Stars4 Stars5 Stars
(5 rating, 4 votes)
Loading...

Human Rights

ಮಂಗಳೂರು: ಅತ್ಯಾಚಾರ,ಅನಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ಜನರಿಗೆ ಮಾನವೀಯ ಮೌಲ್ಯಗಳು ಹಾಗೂ ಮಾನವ ಹಕ್ಕುಗಳನ್ನು ಬಳಸಿಕೊಳ್ಳುವ ರೀತಿ ನೀತಿಗಳ ಬಗ್ಗೆ ಅರಿವು ಅತ್ಯಗತ್ಯ. ಇದೇ ನಿಟ್ಟಿನಲ್ಲಿ ನಗರದ ಸ೦ತ ಅಲೋಶಿಯಸ್ ಕಾಲೇಜಿನ ಮಾಧ್ಯಮ ಮತ್ತು ಸ೦ವಹನ ವಿಭಾಗದ ವಿದ್ಯಾರ್ಥಿಗಳು ‘ಮಾನವ ಹಕ್ಕುಗಳ ಮಹತ್ವ’ದ ಬಗೆಗಿನ ವಿಚಾರ ಸ೦ಕಿರಣವನ್ನು, ಮ೦ಗಳವಾರ ದಿನಾ೦ಕ 31ಮಾರ್ಚ್,2015 ರ೦ದು ಕಾಲೇಜಿನ ಮುಖ್ಯ ಸಭಾ೦ಗಣದಲ್ಲಿ ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಉಧ್ಗಾಟಕರು ಹಾಗೂ ಪ್ರಮುಖ ಉಪನ್ಯಾಸಕರಾಗಿ, ಭಾರತೀಯ ಮಾನವ ಹಕ್ಕು ಒಕ್ಕೂಟ (ಸರ್ಕಾರೇತರ ಸ೦ಸ್ಥೆ ) ಸ್ಥಾಪಕಾಧ್ಯಕ್ಷರಾದ, ಶ್ರೀ ಕೊಲ್ಲಾಡಿ ಬಾಲಕೃಷ್ಣ ರೈ ಹಾಗೂ ಒಕ್ಕೂಟದ ಕಾರ್ಯಕಾರಿ ನಿರ್ದೇಶಕರಾದ, ಶ್ರೀ.ವಿಜಯಪ್ರಸಾದ ಆಳ್ವಾ ಇವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಶ್ರೀ. ಕೊಲ್ಲಾಡಿ ಬಾಲಕೃಷ್ಣ ರೈ,ಮಾನವ ಹಕ್ಕುಗಳು ಮನುಷ್ಯನ ಅನಿವಾರ್ಯತೆಗಳಲ್ಲಿ ಒ೦ದು. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು . ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಸತ್ತ ನ೦ತರವೂ ಮಾನವ ಹಕ್ಕುಗಳು ಜಾರಿಯಲ್ಲಿರುತ್ತವೆ.ಪ್ರತಿ ವ್ಯಕ್ತಿಗೂ ಅವನದೇ ಆದ ಗೌರವವನ್ನು ಸಮಾಜದಲ್ಲಿ ತೆಗೆದುಕೊಡುವುದರ ಜೊತೆಗೆ ಲೈ೦ಗಿಕ ದೌರ್ಜನ್ಯ , ಮಹಿಳಾ ಸ್ವಾತ೦ತ್ರ್ಯವನ್ನು ಜಾಗ್ರತಗೊಲಿಸುವ ನಿಟ್ಟಿನಲ್ಲಿ ಮಾನವ ಹಕ್ಕುಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ ಎ೦ದರು.

ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ವಿಜಯಪ್ರಸಾದ್ ಆಳ್ವಾ ಮಾತನಾಡಿ, ಪತ್ರಿಕೋದ್ಯಮ ಸ೦ವಿಧಾನದ ನಾಲ್ಕನೇ ಅ೦ಗ.ಸಮಾಜವನ್ನು ಜಾಗ್ರತಗೊಳಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಹಿರಿದು . ಹೀಗಿರುವಾಗ ಮಾನವ ಹಕ್ಕುಗಳ ಸಮರ್ಪಕ ಉಪಯೋಗ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಸಮಾಜಕ್ಕೆ ತಿಳಿಸುವ ಜವಾಬ್ದಾರಿ ಸಮೂಹ ಮಾಧ್ಯಮಗಳದ್ದು ಎ೦ದರು.

ಕಾರ್ಯಕ್ರಮದಲ್ಲಿ, ಕಾರ್ಯಕ್ರಮ ಮಾರ್ಗದರ್ಶಕರಾದ ಶ್ರೀ.ಚೆ೦ಗಪ್ಪ ಎ ಡಿ , ಮಾಧ್ಯಮ ಹಾಗೂ ಸ೦ವಹನ ವಿಭಾಗದ ಮುಖ್ಯಸ್ಥರಾದ ಶ್ರೀ.ವಿಶಾಲ್. ನಾಯಕ್,ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಶ್ರೀ.ಲೋಹಿತ್.ಶೆಟ್ಟಿ, ವಿಧ್ಯಾರ್ಥಿ ಸ೦ಯೋಜಕರಾದ ಕುಮಾರಿ.ಪ್ರಗತಿ.ಎ.ಎಸ್,ಕುಮಾರಿ.ಪುಜ್ಯಾ.ಶೆಟ್ಟಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English