- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶ್ರೀ ಸಂಜೀವ ಶ್ರೀನಿವಾಸ ರಾವ್ ಕಟೀಲು ನಿಧನ

Sanjeeva Srinivasa [1]

ಮುಂಬಯಿ : ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ ಮುಂಬಯಿ ಪ್ರಾಂತ್ಯದ ಮಾಜಿ ಕಾರ್ಯಾಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ವೈದ್ಯಕೀಯ ಸಲಹಾಗಾರ ಬೃಹನ್ಮುಂಬಯಿ ಅಲ್ಲಿನ ಹೆಸರಾಂತ ತುಳು-ಕನ್ನಡಿಗ ವೈದ್ಯಾಧಿಕಾರಿ ಡಾ| ಸುರೇಶ್ ಎಸ್.ರಾವ್ ಕಟೀಲು ಅವರ ಜನಕ, ಸಂಜೀವನಿ ಟ್ರಸ್ಟ್ ಮುಂಬಯಿ ಇದರ ವಿಶ್ವಸ್ಥ ಕಾರ್ಯಾಧ್ಯಕ್ಷ ಕಟೀಲು ಸಂಜೀವ ರಾವ್ (90.) ಅವರು ಕಳೆದ ಬುಧವಾರ ಸಂಜೆ ತಮ್ಮ ಕಟೀಲು ಅಲ್ಲಿನ ಸ್ವನಿವಾಸದಲ್ಲಿ ನಿಧನರಾದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಕ್ರೀಯರಾಗಿ ಶ್ರಮಿಸಿದ್ದ ಪೆರ್ಮುದೆ ಅಲ್ಲಿನ ಶ್ರೀನಿವಾಸ ಪೆಜತ್ತಾಯ ಮತ್ತು ಪದ್ಮಾವತಿ ಪೆಜತ್ತಾಯ ದಂಪತಿ ಯ ಸುಪುತ್ರರಾಗಿದ್ದ ಸಂಜೀವ ರಾವ್ ಅವರು 1942 ರಲ್ಲಿ ಮುಂಬಯಿಗೆ ಆಗಮಿಸಿದ್ದರು. ವಿಲೇಪಾರ್ಲೆ ಚಾಳ್‌ನಲ್ಲಿ ನೆಲೆಯಾಗಿ ಬಟ್ಟೆ ಹೊಲಿಯುವ ಕಾಯಕವನ್ನು ಕೈಗೊಂಡು ಸುಮಾರು 20 ವರ್ಷಗಳ ಕಠಿಣ ಪರಿಶ್ರಮದಿಂದ ದರ್ಜಿ ಆಗಿ ಶ್ರಮಿಸಿದ್ದರು. ಕಳೆದ ವಾರದ ವರೇಗೂ ಮುಂಬಯಿ ಅಂಧೇರಿ ಅಲ್ಲಿನ ತಮ್ಮ ಸುಪುತ್ರ ಡಾ| ಸುರೇಶ್ ರಾವ್ ಜೊತೆ ವಾಸವಾಗಿದ್ದರು.

ನಿವೃತ್ತ ಜೀವನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಸಂಸ್ಕೃತ ಕಾಲೇಜಿನ ಉಸ್ತುವರಿ ನೋಡುಕೊಂಡಿದ್ದ ಸಂಜೀವ ರಾವ್ ಅವರ ಜನ್ಮೋತ್ಸವದ ಷಷ್ಠ್ಯಬ್ಧಿಯ ನಿಮಿತ್ತ ಸುಪುತ್ರ ಡಾ| ಸುರೇಶ್ ರಾವ್ ಅವರು ಬ್ರಾಹ್ಮಣ ಜನ್ಮದ ಸಂಸ್ಕಾರ ಹಾಗೂ ನಿತ್ಯಾನುಷ್ಠನದ ಪ್ರಾಮುಖ್ಯತೆಗೆ ಮನ್ನಣೆ ನೀಡುವ ಸಾಕ್ಷ್ಯ ಚಿತ್ರದ ತೌಳವ ನಿತ್ಯಾನುಷ್ಠಾನಂ ಸಿಡಿಯನ್ನೂ ಪ್ರಕಟಿಸಿದ್ದರು.

ಮೃತರು ಪತ್ನಿ ಶ್ರೀಮತಿ ಕಾತ್ಯಾಯಿನಿ ರಾವ್, ಹಿರಿಯ ಸುಪುತ್ರ ಡಾ| ಸುರೇಶ್ ಎಸ್.ರಾವ್, ಸತೀಶ ಎಸ್.ರಾವ್, ಸುಪುತ್ರಿಯರು, ಸೊಸೆಯಂದಿರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರ ರಾತ್ರಿ ಕಟೀಲುನಲ್ಲಿ ನೆರವೇರಿಸಲಾಗಿದ್ದು, ನೂರಾರು ಗಣ್ಯರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ ಸಂಸ್ಥೆಯ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಮತ್ತು ಸರ್ವ ಪದಾಧಿಕಾರಿಗಳು, ವೇ| ಮೂ| ಲಕ್ಷ್ಮೀನಾರಾಯಣ ಅಸ್ರಣ್ಣ ಕಟೀಲು, ವೇ| ಮೂ| ಅನಂತ ಪದ್ಮನಾಭ ಅಸ್ರಣ್ಣ ಕಟೀಲು, ವೇ| ಮೂ| ಹರಿನಾರಾಯಣ ಅಸ್ರಣ್ಣ ಕಟೀಲು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಸ್.ಪ್ರದೀಪಕುಮಾರ ಕಲ್ಕೂರ ಮಂಗಳೂರು, ಭುವನಾಭಿರಾಮ ಉಡುಪ, ಸುಧೀರ್ ಆರ್.ಶೆಟ್ಟಿ, ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷ ಕೆ.ಅನಂತರಾಮ್, ಆಡಳಿತ ನಿರ್ದೇಶಕ ಕೆ.ಜಯರಾಮ ಭಟ್, ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ವಿದ್ವಾನ್ ಆರ್.ಎಲ್ ಭಟ್, ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿಗಳಾದ ರೇಂಜಾಳ ರಾಮದಾಸ ಉಪಾಧ್ಯ, ಪ್ರಕಾಶ್ ಆಚಾರ್ಯ ರಾಮಕುಂಜ, ಅಂಧೇರಿ ಪಶ್ಚಿಮದ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್, ಶ್ರೀ ಬಾಲಾಜಿ ಪ್ರತಿಷ್ಠಾನ ಮೀರಾರೋಡ್‌ನ ಪಲಿಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಕಲ್ಲಂಜೆ ರಾಧಾಕೃಷ್ಣ ಭಟ್, ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿ ಚೆಂಬೂರುನ ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ವಿಷ್ಣು ಎಸ್.ಕಾರಂತ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌ| ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಮತ್ತಿತರ ನೂರಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.