ಕೊಂಕ್ಣಿ ಶಿಕ್ಷಕರ ವಾರ್ಷಿಕ ಸಮಾವೇಶ

7:37 PM, Tuesday, April 7th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Jecinta

ಮಂಗಳೂರು : “ನಾವು ಕೊಂಕಣಿಗರು. ನಮ್ಮ ಮಾತೃಭಾಷೆ ಕೊಂಕಣಿಯನ್ನು ಮಾತನಾಡಲು, ಬರೆಯಲು ಹಿಂಜರಿಯಬಾರದು. ಜಾತಿ ಗಣತಿಯಲ್ಲಿ ಭಾಷೆಯ ಬಗ್ಗೆ ಕೊಂಕಣಿಯನ್ನೇ ಉಲ್ಲೇಖಿಸಬೇಕು.” ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜೆಸಿಂತ ಆಲ್ಪ್ರೆಡ್ ಹೇಳಿದರು.

ಇವರು ನಗರದ ಸಿಒಡಿಪಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕೊಂಕಣಿ ಶಿಕ್ಷಕರ ವಾರ್ಷಿಕ ಸಮಾವೇಶದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದಲ್ಲಿ ಮಾಂಡ್ ಸೊಭಾಣ್ ಪ್ರಾಯೋಜಿತ ‘ದಿ. ಜೆಸ್ಸಿ ಕ್ಯಾಸ್ತೆಲಿನೊ ಸ್ಮಾರಕ ಶ್ರೇಷ್ಟ ಕೊಂಕಣಿ ಶಿಕ್ಷಕ ಪುರಸ್ಕಾರವನ್ನು ಉದ್ಯಾವರದ ಸೈಂಟ್ ಫ್ರಾನ್ಸಿಸ್ ಕ್ಷೇವಿಯರ್ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ತೆರೆಜಾ ಜೊಯ್ಸ್ ಪುರ್ಟಾಡೊ ಇವರಿಗೆ ನೀಡಲಾಯಿತು. ಅವರಿಗೆ ಹೂಗುಚ್ಛ, ಸ್ಮರಣಿಕೆ, ಹಾಗೂ ರೂ. 5000/- ನಗದು ನೀಡಿ ಮೇಯರ್ ಅವರು ಗೌರವಿಸಿದರು. ಮಾಂಡ್ ಸೊಭಾಣ್ ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.

ಅಕಾಡೆಮಿಯ ಈ ಅವಧಿಯ 26 ಪ್ರಕಟನೆಯಾದ ಹೆರೊಲ್ಪಿಯುಸ್ ಇವರು ಬರೆದ ‘ಕೊಂಕ್ಣಿ ಕ್ರಿಸ್ತಾಂವ್ ಕಾಜಾರಾಂ’ ಪುಸ್ತಕವನ್ನು ಮೇಯರ್‌ರವರು ಲೊಕಾರ್ಪಣೆಗೈದರು.

ಸ್ವಾಗತಿಸಿ ಪ್ರಸ್ತಾವನೆಗೈದ ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತಲಿನೊರವರು ನಾವು ಕೊಂಕಣಿ ಶಿಕ್ಷಣಕ್ಕಾಗಿ ಬಹಳ ಕೆಲಸ ಮಾಡಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿಗೆ ಅವಕಾಶ ದೊರೆಯುವ ಸಂಭವವಿದೆ. ಆದುದರಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಕೊಂಕಣಿ ಕಲಿಕೆಯ ಪ್ರಯೋಜನ ಪಡೆಯಬೇಕಾದರೆ ಶಿಕ್ಷಕರು ಕೊಂಕಣಿ ಕಲಿಸುವ ಮತ್ತು ಪ್ರೇರೇಪಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಕರೆ ಕೊಟ್ಟರು. ಅದೇ ರೀತಿ ಕೊಂಕಣಿ ಶಿಕ್ಷಕರಿಗಾಗಿ ಸರಕಾರದೆದುರು ಬೇಡಿಕೆ ಇಡುವಾಗ ಹತ್ತನೇ ತರಗತಿಯಲ್ಲಿ ಕೊಂಕಣಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ‘ಮಾತೃಭಾಷೆ ಕಲಿಯುವ ಅಗತ್ಯ’ ಎಂಬ ವಿಷಯದ ಮೇಲೆ ಮಣಿಪಾಲದ ಟಿ.ಎಮ್.ಎ. ಪೈ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಮಹಾಬಲೇಶ್ವರ್ ರಾವ್ ಇವರು ಉಪನ್ಯಾಸ ನೀಡಿದರು. ರೊನಿ ಕ್ರಾಸ್ತಾ ಕೊಂಕಣಿ ಕ್ವಿಜ್ ನಡೆಸಿದರು. ಮುಂದಿನ ಶೈಕ್ಷಣಿಕ ವರ್ಷದ ತಯಾರಿಯನ್ನು ರಿಜಿಸ್ಟ್ರಾರ್ ಡಾ. ದೇವದಾಸ್ ಪೈ ನಡೆಸಿ ಕೊಟ್ಟರು.

ಕಾರ್ಯಕ್ರಮವನ್ನು ಅಕಾಡೆಮಿ ಸದಸ್ಯರಾದ ಲೊರೆನ್ಸ್ ಡಿಸೊಜಾ ಮತ್ತು ಕೊಂಕ್ಣಿ ಪ್ರಚಾರ್ ಸಂಚಾಲನದ ಶೆಲ್ಡನ್ ಕ್ರಾಸ್ತಾ ಇವರು ನಿರ್ವಹಿಸಿದರು. ಐವನ್ ಮಸ್ಕರೇನ್ಹಸ್ ಇವರು ಧನ್ಯವಾದಗೈದರು.

ಇಂದು ನಿಧನರಾದ ಕೊಂಕಣಿ ಮುಂದಾಳು ಶ್ರೀ ರಘುನಾಥ್ ಶೇಟ್ ಇವರಿಗೆ ಈ ಸಭೆಯು ಶೃದ್ಧಾಂಜಲಿ ಅರ್ಪಿಸಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English