ಬಂಗಲೆಗಳಲ್ಲಿ ಆಳಾಗಿ ದುಡಿಯುವ ಬಂಗಾರದ ಪದಕ ವಿಜೇತೆ

8:05 PM, Tuesday, April 7th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Rishu Mittal

ಖೈಥಾಲ್ : ಬಾಕ್ಸಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಚಿನ್ನದ ಪದಕ ವಿಜೇತೆ ರಿಶು ಮಿತ್ತಲ್ ತನ್ನ ಶಾಲೆಯ ಶುಲ್ಕ ಭರಿಸಲಾಗದೇ ಮನೆಗೆಲಕ್ಕೆ ಹೋಗುತ್ತಿದ್ದಾಳೆ ಎಂಬ ಕರಾಳ ಸತ್ಯ ಬೆಳಕಿಗೆ ಬಂದಿದೆ. 2014ರಲ್ಲಿ ನಡೆದ ಹರಿಯಾಣ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯ 46 ಕೆಜಿ ವಿಭಾಗದಲ್ಲಿ ಆಕೆ ಬಂಗಾರದ ಪದಕವನ್ನು ಗಳಿಸಿದ್ದಳು ಮತ್ತು ಕಳೆದ ಡಿಸೆಂಬರ್ ತಿಂಗಳಲ್ಲಿ ಗ್ವಾಲಿಯರ್‌ನಲ್ಲಿ ನಡೆದ ನ್ಯಾಷನಲ್ ಗೇಮ್ಸ್‌ನಲ್ಲಿ ಹರಿಯಾಣಾವನ್ನು ಪ್ರತಿನಿಧಿಸಿದ್ದಳು.

2012 ಮತ್ತು 2013ರಲ್ಲಿ ಕ್ರಮವಾಗಿ ಭಿವಾನಿ ಮತ್ತು ಫರಿದಾಬಾದ್‌ನಲ್ಲಿ ಆಕೆ ಕಂಚಿನ ಪದಕಗಳನ್ನು ಗೆದ್ದಿದ್ದಳು.

10 ನೇ ತರಗತಿ ವಿದ್ಯಾರ್ಥಿಯಾಗಿರುವ ಆಕೆ ತನ್ನ ಸಹೋದರನ ಜತೆ ವಾಸವಾಗಿದ್ದಾಳೆ. ಆತ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾನೆ. ತನ್ನ ಶಾಲೆಯ ಶುಲ್ಕವನ್ನು ಕಟ್ಟಲು ಆಕೆ ಬೆಳಿಗ್ಗೆ ಎದ್ದು ಬಂಗಲೆಗಳಲ್ಲಿ ಕೆಲಸ ಮಾಡುತ್ತಾಳೆ. ನಂತರ ಶಾಲೆಗೆ ಹೋಗಿ ಸಾಯಂಕಾಲ ಕ್ರೀಡಾಂಗಣದಲ್ಲಿ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಾಳೆ.

ರಿಶು ಚಿನ್ನದ ಪದಕ ಗೆದ್ದಿರುವುದರಿಂದ ಆಕೆಯ ಹೆಸರು ರಾಜ್ಯಮಟ್ಟದ ಅಥ್ಲಿಟ್‌ಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಹೀಗಾಗಿ ಹರಿಯಾಣ ಸರಕಾರ ಆಕೆಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲಿದೆ. ಆದರೆ ಈ ಸಹಾಯಧನ ಮುಂದಿನ ವರ್ಷದಿಂದ ಕೊಡಲ್ಪಡುವುದು ಎಂದು ಆಕೆಯ ತರಬೇತಿದಾರ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English