ಮಂಗಳೂರು : ತೋಕೂರು – ಪಾದೂರು ಕಚ್ಚಾ ತೈಲ ಸಾಗಾಟಕ್ಕೆ ಭೂ ಸ್ವಾಧೀನವನ್ನು 1962ನೇ ಪೈಪ್ ಲೈನ್ ಕಾಯಿದೆ ಪ್ರಕಾರ ಮಾಡಿ ಕೊಟ್ಟಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವುದರಿಂದ 2013ರ ಭೂ ಸ್ವಾಧೀನ ಮತ್ತು 2014-15ರ ತಿದ್ದುಪಡಿ ಆಧ್ಯಾದೇಶ ಒಳಪಡಿಸಿ ಕಾಯದ್ದೆಯನ್ವಯ ಸಂಪೂರ್ಣ ಭೂ ಸ್ವಾಧೀನಗೊಳಿಸಿ ಪಾರದರ್ಶಕವಾಗಿ ಪರಿಹಾರ ನೀಡಬೇಕೆಂದು ತೋಕೂರು ಪಾದೂರು ಐಎಸ್ಪಿಆರ್ಎಲ್ ಪೈಪ್ಲೈನ್ ಬಾಧಿತರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪೈಪ್ನಲೈನ್ ಬಗ್ಗೆ ಯೋಜನೆಯನ್ನು ತಯಾರಿಸುವಾಗ ರೈತರನ್ನು ಕತ್ತಲಲ್ಲಿ ಇಡಲಾಗಿದೆ. ಗಡಿಗುರುತು, ಪಂಚನಾಮೆ ಇತ್ಯಾದಿ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸದೆ ನಿವೃತ್ತ ಅಧಿಕಾರಿಗಳಿಂದ ನಿಯಮಬಾಹಿರವಾಗಿ ಸ್ಥಳ ತನಿಖೆ ಮಾಡದೆ ಕಚೇರಿಯೊಳಗೆ ಕುಳಿತು ಸರ್ವೇ ಕಾರ್ಯ ಮಾಡಲಾಗಿದೆ ಎಂದು ಪೈಪ್ಲೈನ್ ಬಾಧಿತರು ದೂರಿದ್ದಾರೆ.
ಈ ಬಗ್ಗೆ ಬಾಧಿತ ರೈತರಿಗೆ ಸರಿಯಾದ ನೊಟೀಸನ್ನೂ ನೀಡಿಲ್ಲ ಏಕಪಕ್ಷೀಯವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡಲಾಗಿದೆ. ಇದರ ಪರಿಣಾಮವಾಗಿ ಈಗ ಯಂತ್ರಗಳ ಮೂಲಕ ಬಲಾತ್ಕಾರವಾಗಿ ಅತಿಕ್ರಮಣ ಮಾಡಿ ಪೈಪ್ಲೈನ್ ಕಾಮಗಾರಿಯನ್ನು ಮಾಡಲಾಗುತ್ತದೆ. ಇದರಿಂದ ಪೈಪ್ಲೈನ್ ಹಾದು ಹೋಗುವ ದಕ. ಉಡುಪಿ ಜಿಲ್ಲೆಯ 24 ಗ್ರಾಮಗಳಲ್ಲಿ ಬಿಗುವಿನ ವಾತಾವರಣವಿದೆ. ಗುತ್ತಿಗೆದಾರರು ಯಾವುದೇ ರೀತಿಯ ಮಾರ್ಗದರ್ಶನವಿಲ್ಲದೆ ನೆಲವನ್ನು ಬಗೆಯಲು ಹೊರಟಿದ್ದಾರೆ ಎಂದು ಬಾಧಿತರು ತಮ್ಮ ಅಳಲನ್ನು ತೋಡಿಕೊಂಡರು.
ರೈತರ ಜಮೀನಿಗೆ ಮಾರುಕಟ್ಟೆ ಬೆಲೆಯ ಶೇಕಡಾ 10ನ್ನು ಪರಿಹಾರವಾಗಿ ನೀಡಲಾಗುವ 118 ವರ್ಷಗ ಹಿಂದಿನ ಕಾಯಿದೆಯನ್ನು ಅನುಸರಿಸಲಾಗುತ್ತದೆ. ಪೈಪ್ಲೈನ್ ಹಾದು ಹೋಗುವ ಇಕ್ಕೆಲಗಳಲ್ಲಿ ಭೂಪರಿವರ್ತನೆ ಮಾಡಲು ಅಸಾಧ್ಯವಾದ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಪೈಪ್ಲೈನ್ ಕೆಲಸವನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದು ಸರಿಯಲ್ಲ ಅತ್ಯಾಧುನಿಕ ಕಾನೂನಿನ ಪ್ರಕಾರ ಜಮೀನಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಹೆಚ್ಚು ಪರಿಹಾರವನ್ನು ನೀಡಬೇಕು. ಭೂಮಿ ಕಳೆದುಕೊಳ್ಳುವ ಕುಟುಂಬಗಳ ಸದಸ್ಯರಿಗೆ ಉದ್ಯೋಗ ನೀಡಬೇಕು. ಪೈಪ್ನ ಇಕ್ಕೆಲಗಳ ಭೂಪರಿವರ್ತನೆ ಸಾಧ್ಯವಿಲ್ಲ ಎಂಬ ಅಂಶವನ್ನು ಕೈಬಿಡಬೇಕು ಮಾತ್ರವಲ್ಲದೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಹೇಳಿದಂತೆ ಮಂಗಳೂರು ಬಂದರಿನಿಂದ ಕಾಪುವರೆಗೆ ಸಮುದ್ರದ ಅಂಚಿನಲ್ಲಿ ಪೈಪ್ ಲೈನ್ ಅಳವಡಿಸುವುದರ ಮೂಲಕ ರೈತರಿಗೆ, ಕೃಷಿಭೂಮಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಬಾಧಿತ ರೈತರ ಮತ್ತು ಸಂಬಂಧಪಟ್ಟ ತೈಲ ಸಂಸ್ಥೆಗಳ ಸಭೆ ಕರೆದು ಸಮಾಲೋಚನೆ ನಡೆಸಬೇಕು ಎಂದು ಬಾಧಿತ ರೈತರ ವಿನಂತಿಮಾಡಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಾಧಿತರ ಹೋರಾಟ ಜನಜಾಗೃತಿ ಸಮಿತಿಯ ಅಬ್ದುಲ್ ವಾಹಿದ್, ವಿನಯ್ ಎಲ್ ಶೆಟ್ಟಿ, ಜಗದೀಶ್ ಪಿ ಮತ್ತು ಕಳತ್ತೂರು ಉಡುಪಿ ಪೈಪ್ಲೈನ್ ಬಾಧಿತರ ಹೋರಾಟ ಜನಜಾಗೃತಿಯ ಸಮಿತಿಯ ಡಾ. ದೇವೀ ಪ್ರಸಾದ್ ಶೆಟ್ಟಿ ಬೆಳಪು, ಲಾರೆನ್ಸ್ ಫೆನರ್ಾಂಡಿಸ್, ಚಿತ್ತರಂಜನ್ ಭಂಡಾರಿ, ಗುಣಪಾಲ ಶೆಟ್ಟಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೈಪ್ಲೈನ್ ಬಾಧಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English