ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಂಕಿಯೊಂದಿಗೆ ಆಟ (ತೂಟೆದಾರ ಸೇವೆ)

8:38 PM, Wednesday, April 22nd, 2015
Share
1 Star2 Stars3 Stars4 Stars5 Stars
(5 rating, 5 votes)
Loading...

kateelu tutedara

ಕಟೀಲು : ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಕೊನೆಯದಿನ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ನಡೆಯುತ್ತದೆ. ತೂಟೆ ಎಂದರೆ ತೆಂಗಿನ ಗರಿಗಳಿಂದ ಮಾಡಿದ ಕಟ್ಟು. ಅದನ್ನು ಉರಿಸಿ ಒಬ್ಬರ ಮೇಲೊಬ್ಬರು ಎಸೆಯುವುದು ಇದಕ್ಕೆ ತೂಟೆದಾರ ಎನ್ನುತ್ತಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಮಧ್ಯೆ ನಡೆಯುವ ಈ ತೂಟೆದಾರದಲ್ಲಿ ಗ್ರಾಮದ ಹಚ್ಚಿನ ಭಕ್ತರು ಭಾಗವಹಿಸುವುದು ತಲ ತಲಾಂತರದಿಂದ ನಡೆದು ಬಂದ ಪದ್ದತಿ.

ಅಜಾರು ಸಮೀಪದ ಜಲಕದ ಕಟ್ಟೆಯಲ್ಲಿ ಸ್ಥಾನ ಮುಗಿಸಿ ಬಂದು ಅಜಾರಿನಲ್ಲಿ ರಕ್ತೆಶ್ವರೀ ಸನ್ನಿಧಿಯ ಬಳಿಯ ಬಯಲಿನಲ್ಲಿ ತೂಟೆದಾರ ನಡೆಯುತ್ತದೆ. ಅತ್ತೂರು ಮತ್ತು ಕೊಡೆತ್ತೂರು ಮಾಗಣೆ ಭಕ್ತರು ಎರಡು ತಂಡಗಳಾಗಿ ಉರಿಯುವ ತೂಟೆಯನ್ನು ಒಂದು ತಂಡದ ಮೇಲೆ ಇನ್ನೊಂದು ತಂಡದವರು ವೈರಿಗಳಂತೆ ಎಸೆಯುತ್ತಾರೆ. ಅಜಾರು ಸಮೀಪದ ಹೀಗೆ ರಕ್ತೆಶ್ವರೀ ಸನ್ನಿಧಿಯ ಬಳಿ ಮೂರು ಸುತ್ತುಗಳು ತೂಟೆದಾರ ನಡೆಯುತ್ತದೆ. ನಂತರ ಅಲ್ಲಿಂದ ದೇವಸ್ಥಾನದ ರಥ ಬೀದಿಯಲ್ಲಿ ಹೀಗೆಯೇ 9 ತಂಡಗಳು ಒಬ್ಬರ ಮೇಲೊಬ್ಬರು ಉರಿಯುತ್ತಿರುವ ತೂಟೆಗಳನ್ನು ಎಸೆಯುತ್ತಾರೆ. ಹೀಗೆ ಮೂರು ಸುತ್ತುಗಳು ನಡೆಯುತ್ತದೆ. ನಂತರ ದೇವಸ್ಥಾನದ ಮುಂದೆ ತೂಟೆದಾರದಲ್ಲಿ ಪಾಲ್ಗೊಂಡವರಿಗೆ ಓಕುಳಿ ನೀರನ್ನು ತಯಾರಿಸಿ ಇಡುತ್ತಾರೆ. ಅದರಲ್ಲಿ ಸ್ನಾನ ಮಾಡಿ ಬರುತ್ತಾರೆ.

ಆರಾಟದ ದಿನ ರಾತ್ರಿ ರಥೊತ್ಸವದ ನಂತರ ಭಕ್ತರು ಮೈಮೇಲೆ ಶಾಲು ಹಾಗೂ ಧೋತಿಯನ್ನು ಮಾತ್ರ ತೊಟ್ಟುಕೊಳ್ಳುತ್ತಾರೆ. ಉರಿಯುವ ಬೆಂಕಿ ತಮ್ಮ ಮೈ ಮೇಲೆ ಬಿದ್ದರೂ ಯಾವುದೇ ರೀತಿಯ ಸುಟ್ಟ ಗಾಯಗಳು ಆಗುವುದಿಲ್ಲ. ಒಂದು ವೇಳೆ ಚಿಕ್ಕ ಪುಟ್ಟ ಗಾಯಗಳು ನಡೆದರೂ ಅದಕ್ಕೆ ದೇವರ ಪ್ರಸಾದವೇ ಔಷಧಿ. ವಿಶೇಷವೆಂದರೆ ತಮಗೆ ಆಪ್ತರಾದವರು ತೂಟೆದಾರದಲ್ಲಿ ವೈರಿಗಳಂತೆ ವರ್ತಿಸುತ್ತಾರೆ. ಆದರೆ ತೂಟೆದಾರ ಮುಗಿದಂತೆ ಎಲ್ಲರೂ ಒಂದಾಗುತ್ತಾರೆ. ಇದು ನೋಡುತ್ತಿರುವ ಭಕ್ತರಿಗೆ ಮನರಂಜನೆಯಾದರೂ ಇದರ ಹಿಂದೆ ಧಾರ್ಮಿಕ ನಂಬಿಕೆಯು ಇದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English