ಹಿಂದೂ ದೇವಸ್ಥಾನಗಳಲ್ಲಿನ ಭಕ್ತರ ಬಂಗಾರ ಸರಕಾರ ಮುಟ್ಟಬಾರದು

8:59 PM, Monday, May 11th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Sanatana

ಮಂಗಳೂರು: ಹಿಂದೂ ದೇವಸ್ಥಾನಗಳಲ್ಲಿನ ಬಂಗಾರ ಬ್ಯಾಂಕ್‌ಗಳಲ್ಲಿಡುವ ಹಾಗೂ ಯೋಗದಿಂದ ಓಂ ತೆಗೆಯುವ ಸರಕಾರದ ಪ್ರಸ್ತಾಪ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಿತು.

ಸನಾತನ ಸಂಸ್ಥೆಯ ಸಂಗೀತಾ ಪ್ರಭು ಮಾತನಾಡಿ, ಸರಕಾರ ದೇವಸ್ಥಾನಗಳ ಬಂಗಾರವನ್ನು ಬ್ಯಾಂಕ್‌ಗಳಲ್ಲಿಡುವ ಪ್ರಸ್ತಾವ ಕೈಬಿಡಬೇಕು ಎಂದರು.

ರಾಷ್ಟ್ರೀಯ ಹಿಂದೂ ಆಂದೋಲನದ ವಿವೇಕ ಪೈ ಮಾತನಾಡಿ, ದೇವಸ್ಥಾನಗಳಲ್ಲಿನ ಧನವನ್ನು ಭಕ್ತರು ಧರ್ಮಕಾರ್ಯಕ್ಕಾಗಿ ನೀಡಿರುತ್ತಾರೆ. ಇದರ ಬಳಕೆ ಅಭಿವೃದ್ಧಿಗೆ ಅಲ್ಲ, ಹಿಂದೂ ಧರ್ಮದ ಪ್ರಸಾರಕ್ಕೆ. ಸರಕಾರ ದೇವಸ್ಥಾನಗಳಲ್ಲಿನ ಬಂಗಾರ ತೆಗೆದುಕೊಳ್ಳಲು ನಿರ್ಧರಿಸಿದಲ್ಲಿ ಅದರ ವಿರುದ್ಧ ದೇವಸ್ಥಾನಗಳ ಭಕ್ತರೇ ರಾಷ್ಟ್ರವ್ಯಾಪಿ ಆಂದೋಲನ ಮಾಡುವರು ಎಂದರು.

ಜಾತ್ಯತೀತತೆಗೆ ಯೋಗದಿಂದ ಓಂ ತೆಗೆಯುವುದೆಂದರೆ ಯೋಗ ಮಾಡುವವರೆಲ್ಲರಿಗೂ ಹಾನಿ ಮಾಡಿದಂತಾಗುತ್ತದೆ. ಚಲನಚಿತ್ರ, ನಾಟಕಗಳ ಮೂಲಕ ನಡೆಯುತ್ತಿರುವ ಅಶ್ಲೀಲತೆ ತಡೆಗಟ್ಟಬೇಕು ಎಂದು ಅವರು ಆಗ್ರಹಿಸಿದರು.

ಹಿಂದೂ ಮಹಾಸಭಾದ ಧರ್ಮೇಂದ್ರ ಮಾತನಾಡಿ, ಹಿಂದೂ ಧರ್ಮದ ಆತ್ಮವಾದ ಓಂ ಅನ್ನು ಯೋಗದಿಂದ ತೆಗೆಯಬಾರದು ಹಾಗೂ ಹಿಂದೂ ದೇವಸ್ಥಾನಗಳಲ್ಲಿನ ಬಂಗಾರ ತೆಗದುಕೊಳ್ಳಬಾರದು ಎಂದು ಆಗ್ರಹಿಸಿದರು.

ಹಿಂದೂ ಮಹಾಸಭಾದ ನಾಗೇಶ ವಾಮಂಜೂರು, ವಿವೇಕ್‌ ಅಂಚನ್‌, ಸುಧೀರ್‌ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English