ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ 03 ವರುಷದ ಹೆಣ್ಣು ಮಗಳಿಗೆ ಆರ್ಥಿಕ ಸಹಾಯ ಮಾಡಿ

7:51 PM, Tuesday, May 19th, 2015
Share
1 Star2 Stars3 Stars4 Stars5 Stars
(5 rating, 7 votes)
Loading...
samna

ಸುಳ್ಯ : ರಕ್ತದ ಕ್ಯಾನ್ಸರ್ (Leukemia) ನಿಂದ ಬಳಲುತ್ತಿರುವ ಸುಮಾರು 03 ವರುಷದ ಪ್ರಾಯದ ಶಮ್ನಾಳ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯ ಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು, ಕೇರ್ಪಲ ಗ್ರಾಮದಲ್ಲಿರುವ ಸುಮಾರು 03 ವರುಷ ಪ್ರಾಯದ ಶಮ್ನಾಳು ರಕ್ತದ ಕ್ಯಾನ್ಸರ್ (Leukemia) ನಿಂದ ಬಳಲುತ್ತಿದ್ದಾಳೆ. ಹುಟ್ಟಿನಿಂದ ಈ ಮಗುವು ಅನಾರೋಗ್ಯದಿಂದಲೇ ದಿನಕಳೆಯುತ್ತಿದ್ದು, ಹಲವು ಆಸ್ಪತ್ರೆಗಳಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿ ಆಗಿರಲಿಲ್ಲ. ಇತ್ತೀಚೆಗೆ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಮಂಗಳೂರು ಹಾಗೂ ಮೈಸೂರು ಇಲ್ಲಿರುವ ಕೆ.ಆರ್ ಮೆಡಿಕಲ್ ಆಸ್ಪತ್ರೆಯಲ್ಲಿ ತೋರಿಸಿ ಪರೀಕ್ಷಿಸಲಾಗಿ, ಅದು ರಕ್ತದ ಕ್ಯಾನ್ಸರ್ (Leukemia) ಎಂಬುದಾಗಿ ವೈದ್ಯಕೀಯ ಪರೀಕ್ಷೆಯಿಂದ ಧೃಢಪಟ್ಟಿತ್ತು.

ಚಿಕಿತ್ಸೆಗಾಗಿ ಸುಮಾರು 7ಲಕ್ಷದವರೆಗೆ ಖರ್ಚು ಆಗಬಹುದೆಂದೂ, ಹೆಚ್ಚುಕಡಿಮೆ 2 ವರ್ಷಗಳವರೆಗೆ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧೋಪಾಚಾರಗಳನ್ನು ವೈದ್ಯರ ಸಲಹೆಯ ಮೇರೆಗೆ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹೇಳಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿದ್ದುಕೊಂಡು ಜೀವನ ಸಾಗಿಸುತ್ತಿರುವ ಅಬ್ದುಲ್ ನಝೀರ್ ಹಾಗೂ ಶಹನಾಜ್ ಮಗುವಿನ ಹೆತ್ತವರು. ಚಿಕಿತ್ಸೆಗಾಗಿ ಬೇಕಾಗುವ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಅವರಿಗೆ ಜೀವನ ಪೂರ್ತಿ ದುಡಿದರೂ ಅಸಾಧ್ಯವಾದ ಮಾತು. ಶಹನಾಜ್ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಅಬ್ದುಲ್ ನಝೀರ್ ಶಾಶ್ವತ ಅಂಗವೈಕಲ್ಯದಿಂದ ಮನೆಯಲ್ಲಿಯೇ, ಕುಳಿತಲ್ಲಿಯೇ ಇರುವಂತಹ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಸಾಲ ಮಾಡಿ ಶಮ್ನಾಳನನು ಆಸ್ಪತ್ರೆಗೆ ಸೇರಿಸಲಾಗಿದೆ. ಇಲ್ಲಿಯ ತನಕ ಆಕೆಯ ಚಿಕಿತ್ಸೆಗೆ ಸುಮಾರು 70,000ರೂ. ಖರ್ಚಾಗಿದ್ದು, ಸಾಲಮಾಡಿ ಭರಿಸಲಾಗಿದೆ.

ತುಂಬಾ ಕಷ್ಟದಲ್ಲಿ ಇದ್ದು ಆರ್ಥಿಕ ಹೊಡೆತನದಿಂದ ನರಳುತ್ತಿರುವ. ಈ ಬಡ ತಂದೆ ತಾಯಿಯ ಕಷ್ಟಕ್ಕೆ ಕೈ ಜೋಡಿಸಿ.
ಬ್ಯಾಂಕಿನ ವಿಳಾಸ ಇಂತಿದೆ.
BANK ACCOUNT DETAILS

ACCOUNT HOLDER NAME : ABDUL NAZEER P.M.

ACCOUNT NO. : 20086851431

IFSC CODE NO. : SBIN0010451

BANK NAME : STATE BANK OF INDIA SULLIA, D.K.

PHONE NO. : 8197932475

1 ಪ್ರತಿಕ್ರಿಯೆ - ಶೀರ್ಷಿಕೆ - ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ 03 ವರುಷದ ಹೆಣ್ಣು ಮಗಳಿಗೆ ಆರ್ಥಿಕ ಸಹಾಯ ಮಾಡಿ

  1. Bert, xepfxwoe.com

    Wonder carissima le foto tutte sono molto carine, ecco dico questo perchè ho deciso di fare un commento del tipo scassac.zi, ecco, lo so che a voja a di' i commenti critici un scassac. sono.Ma io sti consigli li trovo un pocherello tanto ovvi. Insomma – che per montare un set coi pupi ci dovevo giocare toh! Pensavo di prenderli a sassate!Che la luce delle sei di sera è la più bella lo si impara con la prima macchinetta, e via mi sa con tutti gli altri. Ecco mo' per un po' speremo non faccio più commenti scnBoac.susae vacanze:)

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English