ಪ್ರವೀಣ್ ಬೈಕಂಪಾಡಿ ಇನ್ನು ನೆನಪು ಮಾತ್ರ

9:01 PM, Tuesday, June 9th, 2015
Share
1 Star2 Stars3 Stars4 Stars5 Stars
(4 rating, 5 votes)
Loading...
Praveen Baikampady

ಮುಂಬಯಿ : ಬಹುಮುಖ ಪ್ರತಿಭೆಯ ಯುವ ಕಲಾವಿದ ಪ್ರವೀಣ್ ಬೈಕಂಪಾಡಿ ಅವರದ್ದು ಸರಳ ಸಜ್ಜನಿಕೆ ಸ್ವಾಭಾವ. ಮೃದು ಮತ್ತು ಮಿತಭಾಷಿ ಆಗಿದ್ದ ಪ್ರವೀಣ್ ಸುಮಧುರ ಕಂಠಸಿರಿಯಲ್ಲಿ ಪ್ರವೀಣರಾಗಿದ್ದರು. ಸಂಗೀತ ಎಂದಾಕ್ಷಣ ಮನಸ್ಸು ಉಲ್ಲಸಿತವಾಗುತ್ತದೆ. ಈ ಕಲೆ ಎಲ್ಲರ ಪಾಲಿಗೆ ಕರಗತವಾದುದಲ್ಲ. ಈ ರೀತಿಯ ಕಲಾ ಸಾಧನಗಳೆರಡೂ ಒಂದೇ ಕಡೆ ವಿಲೀನಗೊಂಡು ಏಕಮೇವ ವ್ಯಕ್ತಿಯ ಮೈಗೂಡಿಕೊಂಡು ಜೀವ ಕಳೆ ತಳೆದಿದೆ. ಈ ರೀತಿಯ ಕಲಾವಿಧನ್ನು ಕಲಾಕಾರನೆಂದೇ ಬಣ್ಣಿಸಬಹುದು. ಇಂತಹ ಕಲಾವಿದರಂದ ನಮ್ಮ ಮುಂಬಯಿ ರಂಗ ಹೊರತಾಗಿಲ್ಲ. ಮಾತ್ರವಲ್ಲದೆ ಪ್ರತಿಭೆಗೆ ತಕ್ಕ ಅವಕಾಶವನ್ನು ಕಲ್ಪಿಸಿ ಸದಾ ಕೈಬೀಸಿ ಕರೆಯುತ್ತಿದೆ. ಅಂತಹ ಕಲಾವಿದರಲ್ಲಿ ಪ್ರವೀಣ್ ಟಿ.ಬೈಕಂಪಾಡಿ ಓರ್ವರು. ಕವಿತೆಯ ಮೂಲವನ್ನು ತನ್ನ ಮಧುರ ಕಂಠಸ್ವರದಿಂದ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವಲ್ಲಿ ಯಶಕಂಡವರಲ್ಲಿ ಪ್ರವೀಣ್ ಕೂಡಾ ಓರ್ವರು.

ಮೂಲತಃ ಮಂಗಳೂರು ನಗರ ಪ್ರದೇಶದ ಬೈಂಕಪಾಡಿ ಅಲ್ಲಿನ ತುಕರಾಮ ಟಿ.ಸುವರ್ಣ (ದಿವಂಗತರು) ಹಾಗೂ ರುಕ್ಮಿಣಿ ಸುವರ್ಣ ಅವರ ಸುಪುತ್ರರೇ ಪ್ರವೀಣ್. ತನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಹುಟ್ಟೂರಿನ ಬೈಕಂಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಬಳಿಕ ಉನ್ನತ ಶಿಕ್ಷಣವನ್ನು ಮುಂಬಯಿ ಫೋರ್ಟ್ ನೈಟ್ ಹೈಸ್ಕೂಲ್‌ನಲ್ಲಿ ಪಡೆದಿದ್ದರು.

ಮೊಗವೀರ ಸಮುದಾಯದ ಪ್ರತಿಭಾನ್ವಿತ ಕಲಾಕಾರನಾಗಿ, ಮುಂಬಯಿ ರಂಗಸ್ಥಳದ ಬಹುಮುಖಿ ನಿಷ್ಟಾವಂತ ಕಲಾಕಾರನಾಗಿ ಮೆರೆದ ಪ್ರವೀಣ್ ಮುಂಬಯಿ ರಂಗದಲ್ಲಿ ತನ್ನ ಸುಮಧುರ ಕಂಠಸಿರಿ ಯೊಂದಿಗೆ ಹಿನ್ನಲೆ ಗಾಯಕನಾಗಿ ಪರಿಚಯಿಸಲ್ಪಡುತ್ತಿದ್ದರೆ, ಇನ್ನೊಂದಡೆ ನಾಟಕ ಸಂಗೀತ ಕಲಾವಿದರನ್ನಾಗಿ, ಮುಖಕ್ಕೆ ಬಣ್ಣ ಬಳಿದು ತನ್ನ ಪಾಲಿಗೆ ದಕ್ಕಿದ ಯಾವುದೇ ಪಾತ್ರವಿರಲಿ, ಅದನ್ನು ಚೆನ್ನಾಗಿ ಅರ್ಥ್ಯೆಸಿಕೊಂಡು ಯಶಸ್ವಿಯಾಗಿ ಅಭಿನಯಿಸಿದ ಓರ್ವ ರಂಗನಟನಾಗಿ, ರಂಗದ ಅಂತರಂಗ, ಬಹಿರಂಗ ಎರಡರ ತಿಳುವಳಿಕೆಯುಳ್ಳ ಬಹುಮುಖ ಪ್ರತಿಭೆಯ ರಂಗಕರ್ಮಿಯಾಗಿ ತನ್ನನ್ನು ತಾನು ರಂಗಕ್ಕೆ ಸಮರ್ಪಿಸಿಕೊಂಡವರಾಗಿದ್ದಾರೆ. ಮುಂಬಯಿ ರಂಗದ ಬಹುತೇಕ ಹೆಚ್ಚಿನ ಎಲ್ಲಾ ನಾಟಕ ಕಲಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಯುವ ಕಲಾವಿದನ ಜೊತೆಗೆ ನಾಟಕ ರಂಗದ ವಿವಿಧ ಕ್ಷೇತ್ರದಲ್ಲಿ ಅಭಿರುಚಿಯನ್ನು ಹೊಂದಿದ್ದಾರೆ. ಖ್ಯಾತ ರಂಗನಟ, ನಿರ್ದೇಶಕರಾದ ಸದಾನಂದ ಸುವರ್ಣರಂತಹ ಹಿರಿಯರ ನಾಟಕಗಳಲ್ಲಿ ನಟಿಸಿದ ರಂಗನಟರಾದ ವಾಮನ್ ರಾಜ್, ಮೋಹನ್ ಮಾರ್ನಾಡ್, ಸಾಯಿ ಬಲ್ಲಾಳ್ ಜೊತೆ ಅಭಿನಯಿಸಿದ ಹೆಗ್ಗಳಿಕೆ ಈ ಕಲಾವಿದನದ್ದಾಗಿದೆ. ಮುಂಬಯಿ ರಂಗದಲ್ಲಿ ಸಕ್ರಿಯರಾಗಿರುವ ಪ್ರವೀಣ್‌ರನ್ನು ಪರಿಚಯಿಸುವುದರಿಂದ ಇವರ ಮುಂದಿನ ಕಲಾ ಸೇವೆಗೆ ಸ್ಪೂರ್ತಿ ನೀಡಿದಂತಾಗಬಹುದು. ಇದರ ಪರಿಚಯದಿಂದ ಕೂಡಿದ ರಂಗ ಪ್ರತಿಭೆಯನ್ನಿಲ್ಲಿ ತೆರೆದಿಡುವ ಪ್ರಯತ್ನ ಮಾಡಲಾಗಿದೆ.

ಮುಂಬಯಿ ರಂಗದಲ್ಲಿ ವಿವಿಧ ಕಲಾ ಸಂಸ್ಥೆಗಳಿಂದ ಪ್ರದರ್ಶಿಸಲ್ಪಡುವ ಕನ್ನಡ ನಾಟಕಗಳಲ್ಲಿ ಉತ್ಸಾಹೀ ನಟನಾಗಿ ಅಷ್ಟೇ ಉತ್ತಮ ಹಿನ್ನಲೆ ಸಂಗೀತಗಾರ, ಹಾಡುಗಾರನಾಗಿ ಚಿರಪರಿಚಿತರಾಗಿರುವ ಪ್ರವೀಣ್ ಬೈಕಂಪಾಡಿಯವರ ರಂಗ ಪ್ರತಿಭೆಯನ್ನು, ಅವರ ವಿವಿಧ ಕಲಾ ಪ್ರತಿಭೆಯನ್ನು ಬಾಲ್ಯದಿಂದಲೇ ನಿರೀಕ್ಷಿಸುವಂತಿದೆ, ಅದು ಶಾಲಾ ವಾರ್ಷಿಕೋತ್ಸವದಲ್ಲಿನ ನಾಟಕ, ಡ್ಯಾನ್ಸ್, ಬಾವಗೀತೆ ಮುಖಾಂತರ ಬೆಳಕಿಗೆ ಬಂದಿದ್ದರೂ ಇವರಲ್ಲಿ ಸುಪ್ತ ಪ್ರತಿಭೆಗೆ ಮುಕ್ತ ಅವಕಾಶ ದೊರಕಿದ್ದು, ಮಾರ್ಗದರ್ಶನ, ಪ್ರೇರಣೆಯ ಭದ್ರ ತಳಹದಿ ದೊರಕಿದ್ದು ಮಾತ್ರ ಮುಂಬಯಿಯ ಹವ್ಯಾಸಿ ರಂಗದಿಂದಲೇ ಎಂದು ಹೇಳಬಹುದು.

ಅವರು ಕೇವಲ ಸಂಗೀತ ಕಾರ‍್ಯಕ್ರಮದಲ್ಲಿ ಭಾಗವಹಿಸುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿರದೆ, ನಾಟಕ ರಂಗದಲ್ಲೂ ಹಿನ್ನಲೆ ಸಂಗೀತಗಾರನಾಗಿ ಪ್ರಬುದ್ದ ರಂಗನಟನಾಗಿ, ದೀಪ ಸಂಯೋಜಕನಾಗಿ, ರಂಗ ವಿನ್ಯಾಸಗಾರನಾಗಿಯೂ ಪರಿಚಯಿಸಲ್ಪಡುತ್ತಿರುವುದು ಒಂದು ಸ್ಪಷ್ಟ ನಿದರ್ಶನ, ಮಾತ್ರವಲ್ಲದೆ ಈ ನಿಟ್ಟನಲ್ಲಿ ಹಿನ್ನಲೆ ಗಾಯಕನಾಗಿ ತನ್ನಲ್ಲಿರುವ ಪ್ರತಿಭೆಯನ್ನು ಸಂಪೂರ್ಣ ಹೊರಗೆಡಲು ಸಹಕಾರಿಯಾದ ಪದ್ಮನಾಭಸಹಿತ ನಾಟಕ ರಂಗಕ್ಕೆ ಪರಿಚಯಿಸುವಲ್ಲಿ ಪ್ರಧಾನ ಪಾತ್ರವಹಿಸಿದ ನವೀನ್ ಬೆಂಗ್ರೆ ರಂಗದಲ್ಲಿ ಓರ್ವ ರಂಗಕರ್ಮಿಯಾಗಿ ಪರಿಚಯಿಸಿದರು ಸದಾ ಶ್ರಮಿಸಿದ ಹಿರಿಯರ ಸದಾನಂದ ಸುವರ್ಣ, ಶಿಮುಂಜೆ ಪರಾರಿ, ಜಗದೀಶ್ ಕೆಂಚನಕೆರೆ, ಮೋಹನ್ ಮಾರ್ನಡ್, ನಾರಾಯಣ ನಂದಳಿಕೆ, ಕರುಣಕರ ಕಾಪು, ದೇವದಾಸ್ ಸಾಲ್ಯಾನ್, ಸಾಯಿ ಬಲ್ಲಾಳ್, ವಾಮನ್‌ರಾಜ್ ಮುಂತಾದವರ ಆತ್ಮೀಯ ಸಹಕಾರವನ್ನು ಸ್ಮರಿಸುತ್ತಿರುವುದು ಇವರಲ್ಲಿರುವ ಕಲಾಪ್ರೇಮಕ್ಕೆ ಕೈಗನ್ನಡಿಯಾಗಿದೆ.

ಪತ್ರಕರ್ತ ಶ್ರೀಧರ್ ಉಚ್ಚಿಲ್ ಅವರ ಕಲಾಕ್ಷೇತ್ರ ಕೃತಿಯಲ್ಲಿ ಉಲ್ಲೇಖಿಸಿದಂತೆ ಪ್ರವೀಣ್ ಅವರು ಪ್ರಪ್ರಥಮವಾಗಿ ಶೇಖರ್ ಗುಜರಾನ್‌ರವರ ನೇತೃತ್ವದ ‘ಭೂಮಿಕಾ ಆರ್ಟ್ಸ್ ಕುಡ್ಲ’ ಇವರ ‘ಕಾಂತುನ ಕನ’ ನಾಟಕದಲ್ಲಿ ಭಟ್ಟನ ಪಾತ್ರದೊಂದಿಗೆ ಕಂಡುಕೊಳ್ಳುವಂತಿದೆ. ಮುಂದೆ ಮುಂಬಯಿ ರಂಗದ ಹೆಚ್ಚಿನ ಎಲ್ಲಾ ನಾಟಕ ಬಳಗದವರ ಜೊತೆ, ಹಿರಿಯ, ಕಿರಿಯ ಕಲಾವಿದರೊಡಗೂಡಿ ಕಲಾಸೇವೆಗೈದ ಶ್ರೇಯಸ್ಸು ಇವರದಾಗಿದೆ. ಇವರು ಪಲ್ಲವಿ ಆರ್ಟ್ಸ್ ತಂಡದ ‘ತೆಡಿಲ್’ ನಾಟದಲ್ಲಿ ಕುಡುಕನ ಪಾತ್ರ ಸದಾನಂದ ಸುವರ್ಣರ ಜಗದೀಶ್ ಕೆಂಚನಕೆರೆ ಅವರ ನಿರ್ದೇಶನದ ‘ಗುಡ್ಡದ ಭೂತ’ ನಾಟಕದಲ್ಲಿ (ರಾಮಕೃಷ್ಣನ ಪಾತ್ರ), ಮೋಹನ್ ಮಾರ್ನಡ್ ಅವರ ‘ಟಿಪ್ಪು ಸುಲ್ತಾನ್’ ನಾಟಕದಲ್ಲಿ (ಸದೀಪ ಪಾತ್ರ), ರಮೇಶ ಶಿವಪುರ ನಿರ್ದೇಶನದ ‘ಗುಂಡೊಡ್ ಪದ್ರಾಡ್’ ನಾಟಕದ (ಹುಚ್ಚನ ಪಾತ್ರ), ಎಸ್.ಎಸ್.ಕಾರ್ಕಳ್ ನಿರ್ದೇಶನದ ‘ಪಂಡ ಆವಂದ್’ ನಾಟಕದ ಶಂಬು ಪಾತ್ರ, ಡಾ| ಭರತ್ ಕುಮಾರ್ ಪೊಲಿಪು ನಿರ್ದೇಶನದ ‘ಗಿಡಗಳೊಂದಿಗೆ ಮಾತನಾಡುವ ಹುಡುಗನ ಕಥೆ’, ನಾಟಕದ ಕಾನ್ಸಸ್ಟೇಬಲ್ ಪಾತ್ರ, ಗಿರೀಶ್ ಕಾರ್ನಾಡ್ ಅವರ ಯುವ ಕಲಾವಿದನಿಂದ ಆಕೇಸ್ಟ್ರಾ ರಂಗದ ಗಾಯಕನಾಗಿ, ರಂಗಭೂಯ ತೆರೆಯ ಮರೆಯ ಹಿನ್ನಲೆ ಸಂಗೀತಗಾರನಾಗಿಯೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬಯಿ ರಂಗದಲ್ಲಿ ಮಾತ್ರವಲ್ಲದೆ ನೆರೆಯ ಭಿವಂಡಿ, ಪಾಲ್ಗರ್, ಪುಣೆ, ಪನ್ವೇಲ್ ಮುಂತಾದ ಕಡೆ ಹಲವಾರು ಕಾರ‍್ಯಕ್ರಮ ನೀಡಿ ಸಂಗೀತ ರಸಿಕರ ಮನಸೂರೆಗೊಂಡ ಹಿರಿಮೆ ಇವರದಾಗಿದೆ. ನಾಟಕರಂಗದಲ್ಲಿ ಶಿಮಂಜೆ ಪರಾರಿಯವರ ಅನುವಾದಿತ ಜಗದೀಶ್ ಕೆಂಚನಕೆರೆ ನಿರ್ದೇಶನೆ ‘ಜೋಕುಲು ಬಾಲೆಲು’ , ಖ್ಯಾತ ರಂಗ ನಿರ್ದೇಶಕರಾದ ಆನಗಳ್ಳಿಯವರ ‘ಸಿರಿ ಸಂಪಿಗೆ (ಕನ್ನಡ), ಸದಾನಂದ ಸುವರ್ಣರ ‘ಗೊಂದೊಳು’ (ಪಾಡ್ದನ), ದೇವದಾಸ್ ಸಾಲ್ಯಾನ್‌ರ ನಿರ್ದೇಶನದ ‘ಅಜ್ಜೆರ್ ಇಜ್ಜೆರ್’, ‘ಆಜ್ಜಿಗೇರ‍್ಲಾ ಇಜ್ಜಿ’, ಕರುಣಾಕರ ಕಾಪು ನಿರ್ದೆಶನದ ‘ಕೋರ‍್ದಬ್ಬು ತನ್ನಿ ಮಾನಿಂಗ’, ‘ಬದಿಕ್ ಬಲಿ’ ವಿ.ಕೆ ಸುವರ್ಣ ನಿರ್ದೇಶನದ ‘ಕರಿಯೆ ಕಟ್ಟಿ ಕರಿಯಮಣಿ’, ಸತ್ಯ ಒರಿಪಾಲೆ, ಚಂದ್ರಪ್ರಕಾಶ್ ಥಿಯೇಟರ‍್ಸ್ ತಂಡದ ಪ್ರಕಾಶ ಶೆಟ್ಟಿ ನಿರ್ದೇಶನದ ‘ಪುದರ್ ದೀಲೆ’ ‘ಕಾಲ ಚಕ್ರ’ (ತುಳು) ವಿಜಯ ಕುಮಾರದ್ ನಿದೇರ್ಶನದ ‘ಬೂತದ ಇಲ್ಲ್’ (ಪುಣೆಯಲ್ಲಿ), ಜಗದೀಶ್ ಕೆಂಚನಕೆರೆ ನಿದೇರ್ಶನದ ‘ಮಾಮ ಬತ್ತೆರ್’ ಮುಂತಾದ ನಾಟಕಗಳು ಇವರ ಹಿನ್ನಲೆ ಸಂಗೀತ ಹಾಡುಗಾರಿಕೆಯೊಂದಿಗೆ ಕಲಾರಸಿಕರಿಗೆ ಮುದ ನೀಡಿದ್ದವು. ಇದರಲ್ಲಿ ‘ಜೋಕಲು ಬಾಲೆಲು’ ನಾಟಕವು ಯಶಸ್ವಿ ೧೦ ಪ್ರಯೋಗವನ್ನು ಕಂಡಿದ್ದರೆ ಇಲ್ಲೊ ಪ್ರವೀಣ್ ಅವರ ಯೋಗದಾನವೂ ಬಹಳಷ್ಟಿದೆ. ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ‘ಕಂಗೀಲು’ ನೃತ್ಯಕ್ಕೆ ಸಂಗೀತ ನೀಡಿದ್ದಾರೆ. ತ್ರಿಭುವನ್ ರೋಡಿನಲ್ಲಿ ಜಗರುವ ನಾಟಕಗಳಲ್ಲಿ ರಂಗವಿನ್ಯಾಸ, ದೀಪ ಸಂಯೋಜನೆ ಮಾಡಿದ್ದಾರೆ. ಕರುಣಾಕರ ಕಾಪು ಅವರ ಮುಂದಾಳುತ್ವದ ತವರಿನ ನಾಟಕ ಪ್ರವಾಸದಲ್ಲಿ ಪಾಲುಗೊಂಡಿದ್ದ ಇವರನ್ನು ‘ಕೋರ‍್ದಬ್ಬು ತನ್ನಿ ಮಾನಿಗ’ ನಾಟಕ ಪ್ರದರ್ಶನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವಿರೇಂದ್ರ ಹೆಗ್ಗಡೆ ಅವರ ಹಸ್ತದಿಂದ ಸನ್ಮಾನಿಸಲ್ಪಟ್ಟಿದ್ದಾರೆ.‘ಜೋಕು ಬಾಲೆಲು’ ನಾಟಕದ ಹತ್ತನೇ ಪ್ರಯೋಗ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಟಕದ ಮೂಲ ಕೃತಿಕರ್ತ ಅಶೋಕ್ ಪಾಠೋಳೆ ಇವರನ್ನು ಪುರಸ್ಕರಿಸಿದ್ದಾರೆ.

ನಾಟಕ ಅಥವಾ ನಟನೆ, ಸಂಗೀತ ಎನ್ನುವಂತದ್ದು ಒಂದು ಸಂಕೀರ್ಣ ಕಲೆ. ಒಂದು ಕ್ರೀಯೆಯ ಅನುಕರಣೆ ಇಲ್ಲಿ ಅಭಿನಯ ಕಲಾವಿದ ಪಾಲಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಕಲಾವಿದ ತನ್ನ ಸ್ವಸಾಮರ್ಥ್ಯ ನಟನೆಯ ಪಾತ್ರಕ್ಕೆ ಜೀವ ತುಂಬಿ ರಂಗಕಲಾರಸಿಕರ ಗಮನ ಸೆಳೆಯುತ್ತಾರೆ. ಇದಕ್ಕೆ ನಿಷ್ಠನಾಗಿ ಕಲೆಯ ಪಾವಿತ್ರ ತೆಯನ್ನು ಕಾಪಾಡಿ ತನ್ನ ಶಿಸ್ತುಬದ್ಧ ಬದುಕನ್ನು ಕಲಾತ್ಮಕವಾಗಿಸಿದ ಪ್ರವೀಣ್ ವಿಧಿ ಲೀಲೆಗೆ ಮನ್ನಿಸಿ ಆಕಸ್ಮಿಕವಾಗಿ ಕಣ್ಮರೆಯಾಗಿ ಕಲಾ ಸಾಗರದಿಂದ ಅಕಾಲಿಕವಾಗಿ ಸ್ವರ್ಗ ಸಾಗರದಲ್ಲಿ ಲೀನವಾಗಿದ್ದು ಊಹೆಗೂ ನಿಲುಕದ್ದಾಗಿದೆ. ಅವರ ನಿಧನದಿಂದ ದುಃಖಪಪ್ತರಾದ ಪತ್ನಿ ಗೀತಾ ಪ್ರವೀಣ್ ಹಾಗೂ ಏಕೈಕ ಸುಪುತ್ರಿ ದಿಷಿ ಪ್ರವೀಣ್ ಮತ್ತು ಕುಟುಂಬಕ್ಕೆ ಶ್ರೀ ದೇವರು ಬಲತುಂಬಿ ಅನುಗ್ರಹಿಸಲಿ ಎಂದು ಪ್ರಾರ್ಥನೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English