ವಿಶ್ವಯೋಗ ದಿನದ ಪ್ರಯುಕ್ತ ನಲ್ಕೆಮಾರು ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

11:51 PM, Monday, June 22nd, 2015
Share
1 Star2 Stars3 Stars4 Stars5 Stars
(5 rating, 4 votes)
Loading...
 World  Yoga Day

ಬಂಟ್ವಾಳ : ತಾಲೂಕು ಮೂಡುನಡುಗೋಡು ಗ್ರಾಮ, ಕರೆಂಕಿ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಅಮ್ಟಾಡಿ ಯುವಕ ಮಂಡಲದ ಸಹಕಾರದಲ್ಲಿ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಈ ತಿಂಗಳ ಕಾರ್ಯಕ್ರಮವು ಅಮ್ಟಾಡಿ ಗ್ರಾಮದ ನಲ್ಕೆಮಾರು ಶಾಲೆಯಲ್ಲಿ ನಡೆಯಿತು.

ಶಾಲೆಯಲ್ಲಿ ಮೇಜು, ಬೆಂಚು, ಬಾಗಿಲಿನ ದುರಸ್ತಿ , ಮಕ್ಕಳಿಗೆ ಕೈ ತೊಳೆಯಲು ನಳ್ಳಿಗಳ ವ್ಯವಸ್ಥೆ , ತರಕಾರಿ ಮತ್ತು ಇತರ ಸಸಿಗಳನ್ನು ನೆಟ್ಟು ಶಾಲಾ ಕೃಷಿಗೆ ಅಭಿವೃದ್ಧಿ , ಶಾಲಾ ಸುತ್ತಮುತ್ತಲು ಸ್ವಚ್ಛತೆ , ಬಯಲು ರಂಗಮಂದಿರದ ಮೆಟ್ಟಿಲುಗಳ ನಿರ್ಮಾಣ ಮಾಡಲಾಯ್ತು. ವಿಶೇಷವಾಗಿ ವಿಶ್ವಯೋಗ ದಿನದ ಪ್ರಯುಕ್ತ ಬೆಳಗ್ಗೆ ಸಾಮೂಹಿಕ ಯೋಗದ ಮೂಲಕ ಅಮ್ಟಾಡಿ ಯುವಕ ಮಂಡಲ ಹಾಗೂ ಗ್ರಾಮಸ್ಥರು ಮತ್ತು ಶ್ರೀ ದುರ್ಗಾ ಫ್ರೆಂಡ್ಸ್‌ಕ್ಲಬ್‌ನ ಸರ್ವಸದಸ್ಯರು ಚಾಲನೆ ನೀಡಿದರು. ಹಿರಿಯ ಸಾಹಿತಿಗಳಾದ ಏರ್ಯ ಲಕ್ಷ್ಮಿನಾರಾಯಣ ಆಳ್ವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಾ ಸಂಘದ ಸದಸ್ಯರಾದ ಜಿ.ಕೆ.ಭಟ್ ಯೋಗವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್‌ನ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ನವೀನ್ ಸೇಸಗುರಿ, ಕೋಶಾಽಕಾರಿ ವಿನೋದ ಕುಮಾರ್ ಕರೆಂಕಿ , ಪೂವಪ್ಪ ಮೆಂಡನ್, ರಾಮಚಂದ್ರ ಪೂಜಾರಿ ಕರೆಂಕಿ, ಬಾಲಕೃಷ್ಣ ಗೌಡ, ಪತ್ರಕರ್ತ ಸಂದೀಪ್ ಸಾಲ್ಯಾನ್, ಗ್ರಾ.ಪಂ.ಅಧ್ಯಕ್ಷೆ ಬಬಿತಾ ಕೋಟ್ಯಾನ್, ಜಯಾನಂದ ಕೋಟ್ಯಾನ್, ಯೋಗೀಶ್ ಪೂಜಾರಿ, ಶೇಖರ ಶೆಟ್ಟಿ , ದಾಮೋದರ ಏರ್ಯ ಉಪಸ್ಥಿತರಿದ್ದರು. ರಾಜೇಶ್ ನಾಕ್ ಉಳಿಪಾಡಿಗುತ್ತು ಭೇಟಿ ನೀಡಿದರು.

ಕೇಶವ ಎಚ್.ಕಟೀಲು ಅವರು ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕಿ ಅಪೋಲಿನ್ ಪಿಂಟೋ ವಂದಿಸಿದರು. ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English