- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಒಂದು ಕೋಟಿ ಸಾಲ ತೀರಿಸದ ಪೂಜಾ ಗಾಂಧಿ, ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

pooja Gandhi [1]

ಬೆಂಗಳೂರು : ನಟಿ ಪೂಜಾ ಗಾಂಧಿ ವಿರುದ್ಧ ಒಂದು ಕೋಟಿ ರೂಪಾಯಿ ಸಾಲ ತೀರಿಸದ ಆರೋಪ ಕೇಳಿಬಂದಿದೆ. ‘ಅಭಿನೇತ್ರಿ’ ಚಿತ್ರದಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ, ಆ ಸಿನಿಮಾ ಕಂಪ್ಲೀಟ್ ಮಾಡುವುದಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಆಕೆಯ ತಂದೆ ಪವನ್ ಗಾಂಧಿ, ಡಾ.ಸುನೀಲ್ ಶರ್ಮಾ ಅವರಿಂದ ಒಂದು ಕೋಟಿ ರೂಪಾಯಿ ಸಾಲ ಪಡೆದಿದ್ದರು. ‘

ಅಭಿನೇತ್ರಿ’ ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಿ ಬಂದ ಹಣದಲ್ಲಿ ಸಾಲ ತೀರಿಸುವುದಾಗಿ ಹೇಳಿದ್ದ ಪೂಜಾ ಗಾಂಧಿ ಈವರೆಗೂ ಹಣ ಹಿಂದಿರುಗಿಸಿಲ್ಲ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ, ನಿರ್ಮಾಪಕ ಮತ್ತು ಫೈನಾನ್ಶಿಯರ್ ಸುನೀಲ್ ಶರ್ಮಾ ದೂರು ನೀಡಿದ್ದಾರೆ.

ಡಾ: ಸುರೇಶ್ ಶರ್ಮಾರು ಪೂಜಾ ಗಾಂಧಿ ಹಾಗೂ ಅವರ ತಂದೆಯಾದ ಪವನ್ ಗಾಂಧಿಯವರು ವಿನಯದಿಂದ ಬಂದು ತಮ್ಮ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರೈಸಲು ರೂ.1,00,00,000/- ಹಣ ಬೇಕೆಂದು ಕೇಳಲು, ನಾನು ಅವರಿಗೆ ಹಣವನ್ನು ಕೊಟ್ಟೆ. ಅವರು ಒಂದು ತಿಂಗಳಲ್ಲಿ ಹಿಂತಿರುಗಿಸಿ ಕೊಡುತ್ತೇವೆಂದು ಭರವಸೆ ಕೊಡಲು ಹಾಗೂ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನ ಮಾರಾಟ ಮಾಡಿ ಬರುವ ಹಣವನ್ನ ಒಂದು ತಿಂಗಳಲ್ಲಿ ಕೊಡುತ್ತೇವೆಂದು ಹೇಳಿದರು.

ಪೂಜಾಗಾಂಧಿ ಅವರು ಚಲನಚಿತ್ರ ರಂಗದಲ್ಲಿ ಉತ್ತುಂಗದಲ್ಲಿ ಇದ್ದಾರೆಂದು ನಂಬಿ ನಾನು ಅಷ್ಟು ದೊಡ್ಡ ಮೊತ್ತವಾದ ರೂ.1,00,00,000/- ಕೊಟ್ಟೆ. ಈಗ ‘ಅಭಿನೇತ್ರಿ’ ಚಲನಚಿತ್ರ ಬಿಡುಗಡೆಯಾಗಿದೆ. ಸ್ಯಾಟಲೈಟ್ ರೈಟ್ಸ್ ನಿಂದ ಹಣ ಬಂದಿದೆ. ಆದ್ರೆ, ಅಪ್ಪ-ಮಗಳು ಇಬ್ಬರೂ ಕೈಗೆ ಸಿಗದೆ ಸತಾಯಿಸುತ್ತಿದ್ದಾರೆ. ಇಂದು ನಾಳೆ ಎಂದು ಸತಾಯಿಸುತ್ತ ಹಣ ಕೊಡುವ ಮಾತನ್ನೇ ಆಡುತ್ತಿಲ್ಲ ಎಂದಿದ್ದಾರೆ.

ಶ್ರೀ ಪವನ್ ಗಾಂಧಿ ಮತ್ತು ಅವರ ಮಗಳು ಪೂಜಾ ಗಾಂಧಿ ಇಬ್ಬರನ್ನೂ ವಾಣಿಜ್ಯ ಮಂಡಳಿಗೆ ಕರೆಸಿ ಕೊಟ್ಟಿರುವ ಹಣವನ್ನ ವಾಪಸ್ ಕೊಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಚಲನಚಿತ್ರರಂಗದಲ್ಲಿ ಪೂಜಾಗಾಂಧಿಯವರಿಗೆ ಒಳ್ಳೆಯ ಹೆಸರಿರುವುದರಿಂದ ಅವರ ವ್ಯಕ್ತಿತ್ವಕ್ಕೆ ಯಾವುದೇ ರೀತಿಯ ಕುಂದುಂಟಾಗಬಾರದೆಂಬ ಮಾನವೀಯತೆಯ ದೃಷ್ಟಿಯಿಂದ ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನ ಸಲ್ಲಿಸಿರುವುದಾಗಿ ಹೇಳಿದ್ದಾರೆ.