ಬಂಟ್ವಾಳ: ಆಧುನಿಕತೆಯ ಬದುಕಿನಲ್ಲಿ ಹೆಜ್ಜೆ ಇಡುವಾಗ ಸಂಸ್ಕಾರವನ್ನು ಮೈಗೂಡಿಸಿಕೊಂಡಲ್ಲಿ ಧರ್ಮಕ್ಕೆ ಚ್ಯುತಿ ಬರುವುದಿಲ್ಲ, ಧರ್ಮದ ಉಳಿವು ಆದರೆ ಮಾತ್ರ ರಾಷ್ಟ್ರದ ಗೆಲುವು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವನಂದ ಸ್ವಾಮೀಜಿ ಹೇಳಿದರು. ಅವರು ಶ್ರೀ ಶಾರದ ಭಜನಾ ಮಂದಿರ ನಗ್ರಿ ಇಲ್ಲಿ ನಡೆದ ಒಡಿಯೂರು ಗ್ರಾಮ ವಿಕಾಶ ಯೋಜನೆಯ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬದುಕಿಗೆ ಸಂಸ್ಕಾರ ಸಿಕ್ಕಾಗ ಸಂಘಟನ್ಮಾತಕವಾಗಿ ಬೆಳೆಯಲು ಸಾಧ್ಯ , ಅ ನಿಟ್ಟಿನಲ್ಲಿ ಒಡಿಯೂರು ಗ್ರಾಮ ವಿಕಾಶ ಯೋಜನೆ ಕೆಲಸ ಮಾಡುತ್ತಿದೆ. ಆರ್ಥಿಕತೆಯನ್ನು ನಾನಾ ರೀತಿಯಲ್ಲಿ ಗಳಿಸಬಹುದು ಆದರೆ ಅದನ್ನು ಉಳಿಸುವುದನ್ನು ಕಲಿಯಬೇಕಾಗಿದೆ. ಅದಕ್ಕೆ ಪಾರದರ್ಶಕತೆಯ ಮೌಲ್ಯಧರಿತ ಬದುಕು ಬೇಕು ಎಂದರು.
ವೇದಿಕೆಯಲ್ಲಿ ಯೋಜನೆಯ ಸಂಚಾಲಕ ತಾರಾನಾಥ ಕೊಟ್ಟಾರಿ, ಸಜೀಪ ಮಾಗಣೆಯ ದೈವದ ಪ್ರಮುಖರಾದ ಮುಂಡಪ್ಪ ಶೆಟ್ಟಿ, ಶ್ರೀ ಶಾರದಾ ಭಜನಾ ಮಂದಿರದ ಅಭಿವೃದಿ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಹೆಗಡೆ, ಶ್ರೀ ಶಾರದಾ ಭಜನಾ ಮಂದಿರದ ಅಭಿವೃದಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್, ಶ್ರೀ ಶಾರದಾ ಭಜನಾ ಮಂದಿರದ ಕಾರ್ಯದರ್ಶಿ ಚಂದು ನಾಯ್ಕ, ಶ್ರೀ ಶಾರದಾ ಭಜನಾ ಮಂದಿರದ ಉಪಾಧ್ಯಕ್ಷ ಮೋಹನದಾಸ ಪುಜಾರಿ, ಯೋಜನೆಯ ತಲೆಮೊಗರು ಘಟಕದ ಅಧ್ಯಕ್ಷ ಉಮೇಶ್, ಮಾರ್ನಬೈಲು ಘಟಕದ ಅಧ್ಯಕ್ಷೆ ಲೋಲಾಕ್ಷಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರ್ವಾಣಿ ಸ್ವಾಗತಿಸಿ ಲೋಲಾಕ್ಷಿ ವಂದಿಸಿದರು. ಯೋಜನೆಯ ಬಂಟ್ವಾಳ ವಲಯ ಮೇಲ್ವಿಚಾರಕ ಚೇತನ್ ಎ.ಆರ್. ಕಾರ್ಯಕ್ರಮ ನಿರೂಪಿಸಿದರು
Click this button or press Ctrl+G to toggle between Kannada and English