ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಿಲ್ಲಾ ಡಯಟ್ ಸಹಕಾರದಲ್ಲಿ ಕೊಂಕಣಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಭಾನುವಾರ ನಗರದ ಡಯಟ್ ಸಭಾಂಗಣದಲ್ಲಿ ಆಯೋಜಿಸಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲ ಸಿಪ್ರಿಯನ್ ಮೊಂತೇರೊ ಕೊಂಕಣಿ ಕಲಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರುವ ಶಿಕ್ಷಕರಿಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕೌಶಲ್ಯವನ್ನು ಪಡೆದ ಶಿಕ್ಷಕರು ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಬಲ್ಲರು. ಅಗತ್ಯ ಬಿದ್ದರೆ ವಲಯವಾರು ತರಬೇತಿಗಳನ್ನು ಆಯೋಜಿಸಲು ಡಯಟ್ ಸಹಕಾರ ನೀಡುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಕೊಂಕಣಿ ಕಲಿಕೆ ಸುಗಮವಾಗಿ ಮುಂದುವರಿಯುತ್ತಾ ಇದೆ. ಮುಂದಿನ ವರ್ಷಗಳಲ್ಲಿ ಕೊಂಕಣಿ ಅಧ್ಯಯನ ಪೀಠದ ಸಹಕಾರದಿಂದ ಕೊಂಕಣಿಯಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳು ತೆರೆಯವ ಅವಕಾಶವಿದೆ. ಹೆಚ್ಚೆಚ್ಚು ಮಕ್ಕಳು ಕೊಂಕಣಿ ಕಲಿಯಲು ಶಿಕ್ಷಕರು ಪ್ರೇರೆಪಿಸಬೇಕು ಎಂದು ಹೇಳಿದರು.
ಅಕಾಡೆಮಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈ ಸ್ವಾಗತಿಸಿ, ವಿತೊರಿ ಕಾರ್ಕಳ ವಂದಿಸಿದರು. ಎಚ್ ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ನಂತರ ವ್ಯಾಕರಣದ ಬಗ್ಗೆ ರಾಕ್ಣೊ ಸಂಪಾದಕ್ ಫಾ. ವಾಲೇರಿಯನ್ ಫೆರ್ನಾಂಡಿಸ್, ಗದ್ಯದ ಬಗ್ಗೆ ಪ್ರೇಮ್‌ಕುಮಾರ್ ಪುತ್ತೂರ್ ಹಾಗೂ ಪದ್ಯದ ಬಗ್ಗೆ ಸ್ಮಿತಾ ಶೆಣೈ ಮಾಹಿತಿ ನೀಡಿದರು.
Click this button or press Ctrl+G to toggle between Kannada and English